ಪ್ಯಾರಿಸ್: ಹೆಚ್ಚಿನ ಆದಾಯದ ದೇಶಗಳು ಮತ್ತು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ನಡುವಿನ ಕೋವಿಡ್ ವ್ಯಾಕ್ಸಿನೇಷನ್‌ನ ವ್ಯತ್ಯಾಸವನ್ನು ಎತ್ತಿ ತೋರಿಸಿರುವ ವಿಶ್ವ ಆರೋಗ್ಯ ಸಂಸ್ಥೆ (World Health Organization) ಮಹಾನಿರ್ದೇಶಕ ಟೆಡ್ರೊಸ್ ಆಡ್ನೊಮ್ ಘೆಬ್ರೆಯೆಸಿಸ್ ಕರೋನಾ ಲಸಿಕೆಗೆ ಸಂಬಂಧಿಸಿದಂತೆ ವಿಶ್ವದಲ್ಲಿ 'ಲಸಿಕೆ ವರ್ಣಭೇದ ನೀತಿ' ನಡೆಯುತ್ತಿದೆ ಎಂದು  ಆತಂಕ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಡ ದೇಶಗಳು ಕಡಿಮೆ ಲಸಿಕೆ ಪಡೆಯುತ್ತಿವೆ:
ಪ್ಯಾರಿಸ್ ಶಾಂತಿ ವೇದಿಕೆ ವಸಂತ ಸಭೆಯಲ್ಲಿ ಮಾತನಾಡಿದ WHO ಮುಖ್ಯಸ್ಥ ಟೆಡ್ರೊಸ್ ಆಡ್ನೊಮ್ ಘೆಬ್ರೆಯೆಸಿಸ್, " 'ಲಸಿಕೆ ವರ್ಣಭೇದ'ದ ಅಪಾಯದಲ್ಲಿದೆ ಎಂದು ನಾನು ಹೇಳುವುದಿಲ್ಲ, ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ವರ್ಣಭೇದ ನೀತಿಯು ಜಗತ್ತಿನಲ್ಲಿ ನಡೆಯುತ್ತಿದೆ ಎಂದು ಹೇಳುತ್ತೇನೆ" ಎಂದು ಹೇಳಿದರು. ಹೆಚ್ಚಿನ ಆದಾಯದ ದೇಶಗಳು ವಿಶ್ವದ ಜನಸಂಖ್ಯೆಯ ಶೇಕಡಾ 15 ರಷ್ಟಿದೆ, ಆದರೆ ಅವುಗಳಲ್ಲಿ ವಿಶ್ವದ 45 ಪ್ರತಿಶತದಷ್ಟು ಲಸಿಕೆಗಳಿವೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ವಾಸಿಸುತ್ತಿದ್ದರೆ, ಅವರಿಗೆ ವಿಶ್ವದ ಒಟ್ಟು ಲಸಿಕೆಯ ಶೇಕಡಾ 17 ರಷ್ಟು ಮಾತ್ರ ದೊರೆತಿದೆ. ಇದು ದೊಡ್ಡ ವ್ಯತ್ಯಾಸ ಎಂದು ವಾಸ್ತವ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.


ಇದನ್ನೂ ಓದಿ - Corona Vaccine: ಮಕ್ಕಳಿಗೆ ಈಗಲೇ ಕರೋನಾ ಲಸಿಕೆ ಹಾಕಬೇಡಿ ಎಂದು WHO ಮನವಿ ಮಾಡಿದ್ದೇಕೆ?


124 ದೇಶಗಳಿಗೆ 6.3 ಮಿಲಿಯನ್ ಡೋಸ್:
124 ದೇಶಗಳಿಗೆ ಕನಿಷ್ಠ 63 ಮಿಲಿಯನ್ (6.3 ಕೋಟಿ) ಪ್ರಮಾಣದ ಲಸಿಕೆಗಳನ್ನು (Covid Vaccine) ಕಳುಹಿಸಲಾಗಿದೆ. ಆದರೆ ಅವು ಆ ದೇಶಗಳ ಒಟ್ಟು ಜನಸಂಖ್ಯೆಯ ಕೇವಲ 0.5 ಪ್ರತಿಶತದಷ್ಟಿವೆ  ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಹೇಳಿದ್ದಾರೆ. 


ಲಸಿಕೆ ಅಸಮಾನತೆಯ ಹಿಂದಿನ ಮೂಲ ಕಾರಣವೆಂದರೆ ದೇಶಗಳು ತಮ್ಮ ನಡುವೆ ಲಸಿಕೆಗಳನ್ನು ಹಂಚಿಕೊಳ್ಳಲಿಲ್ಲ. ಇದಕ್ಕಾಗಿಯೇ ಕೋವಾಕ್ಸ್ (COVAX) ಸೌಲಭ್ಯವನ್ನು ಪರಿಚಯಿಸಲಾಯಿತು. "ಈಗಲೂ ಕೆಲವು ಹೆಚ್ಚಿನ ಆದಾಯದ ದೇಶಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆ ಹಾಕಲು ಮುಂದಾಗುತ್ತಿವೆ, ಆದರೆ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಹಿರಿಯ ನಾಗರಿಕರು, ವಿಶ್ವದ ಹೆಚ್ಚಿನ ಅಪಾಯದ ಜನರು ಇನ್ನೂ ಕೂಡ ಲಸಿಕೆ ಪಡೆಯದಿರುವುದು ವಿಪರ್ಯಾಸ" ಎಂದು ಅವರು ಹೇಳಿದರು.


ಇದನ್ನೂ ಓದಿ - ಈ ವರ್ಷ ಕೊರೊನಾ ಭಾರಿ ಅಪಾಯಕಾರಿಯಾಗಿರಲಿದೆ-WHO ಎಚ್ಚರಿಕೆ


ಅಮೆರಿಕ 80 ಮಿಲಿಯನ್ ಲಸಿಕೆ ಪ್ರಮಾಣವನ್ನು ನೀಡಲಿದೆ:
ಮುಂದಿನ 6 ವಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್ 80 ಮಿಲಿಯನ್ (8 ಮಿಲಿಯನ್) ಲಸಿಕೆ ಪ್ರಮಾಣವನ್ನು ಜಾಗತಿಕವಾಗಿ ಹಂಚಿಕೊಳ್ಳಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಸೋಮವಾರ ಪ್ರಕಟಿಸಿದರು. ಬಿಡೆನ್ ತಮ್ಮ ಭಾಷಣದಲ್ಲಿ, ನಾವು ಜಗತ್ತಿಗೆ ಸಹಾಯ ಮಾಡಲು ಹೆಜ್ಜೆ ಇಡುತ್ತಿದ್ದೇವೆ. ಜಾಗತಿಕ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೂ ಅಮೆರಿಕ ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ ಎಂದು ನಮಗೆ ತಿಳಿದಿದೆ ಎಂದವರು ತಿಳಿಸಿದ್ದಾರೆ.

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.