ನವದೆಹಲಿ: ಜಗತ್ತಿನಲ್ಲಿ ಒಂದಕ್ಕಿಂತ ಒಂದು  ಸೂಪರ್‌ಕಾರ್‌ಗಳಿವೆ. ಆದರೆ ಫೆರಾರಿಗೆ ತನ್ನದೇ ಆದ ಸ್ಥಾನಮಾನ ಹೊಂದಿದೆ. ಅದರ ವೇಗಕ್ಕೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಪ್ರತಿಯೊಬ್ಬರೂ ಹೊಚ್ಚ ಹೊಸ ಫೆರಾರಿ ಖರೀದಿಸಲು ಯೋಚಿಸುತ್ತಾರೆ. ಆದರೆ ಇದೀಗ ವಿಚಿತ್ರ ಪ್ರಕರನವೊಂದು ಬೆಳಕಿಗೆ ಬಂದಿದ್ದು, ಅದನ್ನು ಕೇಳಿ ನೀವೂ ತಲೆ ಹಿಡಿದುಕೊಳ್ಳುವಿರಿ (World News In Kannada). ಹೌದು, ಸಂಪೂರ್ಣವಾಗಿ ಜಂಕ್ ಬಿದ್ದಿರುವ ಫೆರಾರಿ ಕಾರ್ $1.8 ಮಿಲಿಯನ್ ಅಂದರೆ ಸುಮಾರು 15 ಕೋಟಿ ರೂ.ಗೆ ಮಾರಾಟವಾಗಿದೆ ಎಂದರೆ ನೀವು ನಂಬುವಿರಾ. ಈ ಫೆರಾರಿಗೆ  1960 ರ ದಶಕದಲ್ಲಿ ನಡೆದ ಅಗ್ನಿ ಅವಘಡದಿಂದ ಈ ಗತಿ ಬಂದಿದೆ.


COMMERCIAL BREAK
SCROLL TO CONTINUE READING

ಸಿಎನ್ಎನ್ ವರದಿ ಪ್ರಕಾರ, ಈ ಫೆರಾರಿ ಕಾರನ್ನು ನೋಡಿದರೆ, ಸ್ಕ್ರ್ಯಾಪ್ ಅಂಗಡಿಯಿಂದ ಹೊರತೆಗೆದಂತೆ ಕಾಣುತ್ತದೆ. ಇದು ಫೆರಾರಿಯ 500 ಮೊಂಡಿಯಲ್ ಸ್ಪೈಡರ್ ಸರಣಿ I ಮಾದರಿಯಾಗಿದೆ, ಇದು 1954 ಕ್ಕಿಂತ ಹಳೆಯದಾಗಿದೆ. ಆರ್‌ಎಂ ಸೋಥೆಬಿಯ ಮಾಂಟೆರಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಇದು ಮಾರಾಟವಾಗಿದೆ ಮತ್ತು ರೂ 15 ಕೋಟಿಗೆ ಮಾರಾಟವಾಗಿದೆ.


ಇದನ್ನೂ ಓದಿ-ಚಲಿಸುತ್ತಿರುವ ಬೈಕ್ ಮೇಲೆ ಎದ್ದು ನಿಂತು ಇದೇನ್ ಮಾಡ್ತಿದ್ದಾಳೆ ಈ ಹುಡುಗಿ ನೀವೇ ನೋಡಿ!


ಇದು ಹಿಂದೆ ಫೆರಾರಿ ಫ್ಯಾಕ್ಟರಿ ಚಾಲಕ ಫ್ರಾಂಕೊ ಕಾರ್ಟೆಜ್ ಅವರ ಆಸ್ತಿಯಾಗಿತ್ತು. ಅವರು 1954 ರಲ್ಲಿ ರೇಸ್ ಟ್ರ್ಯಾಕ್ನಲ್ಲಿ ಓಡಲು ಮಾತ್ರ ಈ ಸೂಪರ್ಕಾರನ್ನು ಖರೀದಿಸಿದ್ದರು. ಆದರೆ 1960 ರಲ್ಲಿ ರೇಸ್ ವೇಳೆ ಈ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಅದರ ಮಾಲೀಕತ್ವದ ಕೊನೆಯ ದಾಖಲಾದ ವರ್ಗಾವಣೆ 1978 ರಲ್ಲಿ ನೋಂದಣಿಗೊಂಡಿದೆ. ಆದರೆ ಇದರ ಹೊರತಾಗಿಯೂ ಕಾರನ್ನು ಇಂತಹ ಕೆಟ್ಟ ಸ್ಥಿತಿಯಲ್ಲಿಯೂ ಕೂಡ ಸಂಗ್ರಹಿಸಿಡಲಾಗಿದೆ. ಈ ಕಾರಿಗೆ ಚಕ್ರಗಳಿಲ್ಲ. ಆದರೆ ಇದು ಗೇರ್‌ಬಾಕ್ಸ್, ನೈಜ ಆಕ್ಸಲ್ ಕಾರ್ನರ್‌ಗಳು, ಮೂಲ ಚಾಸಿಸ್ ಪ್ಲೇಟ್‌ಗಳು ಮತ್ತು 3.0L Tipo 119 Lampredi ಇನ್‌ಲೈನ್-ಫೋರ್ ಎಂಜಿನ್ ಅನ್ನು ಹೊಂದಿದೆ.


ಇದನ್ನೂ ಓದಿ-ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ!


ವ್ಯಕ್ತಿ ಕಾರನ್ನು ಏಕೆ ಖರೀದಿಸಿರಬಹುದು?
ಹಾಳಾದ ಕಾರನ್ನು ಯಾರಾದರೂ 15 ಕೋಟಿ ಮೌಲ್ಯಕ್ಕೆ ಏಕೆ ಖರೀದಿಸುತ್ತಾರೆ ಎಂಬ ಪ್ರಶ್ನೆ ನಿಮಗೂ ಕಾಡುತ್ತಿರಬಹುದು. ವಾಸ್ತವದಲ್ಲಿ ಈ ಕಾರಿನ ಖರೀದಿದಾರ ತನ್ನ ಹೆಮ್ಮೆಯನ್ನು ಮರಳಿ ಪಡೆಯಲು ಬಯಸುತ್ತಾನೆ ಇದರಿಂದ ಈ ಕಾರು ಮತ್ತೆ ರೇಸ್ ಟ್ರ್ಯಾಕ್‌ನಲ್ಲಿ ಓಡಬಹುದು. ಅತ್ಯಂತ ದುಬಾರಿ ಫೆರಾರಿಯನ್ನು 2008 ರಲ್ಲಿಯೇ ಮಾರಾಟ ಮಾಡಲಾಯಿತು. ಈ ಮಾದರಿಯು 1962 ರ ಫೆರಾರಿ 250 GTO ಆಗಿತ್ತು. ಇದರ ಬೆಲೆ US $ 48.4 ಮಿಲಿಯನ್‌ಗೆ ಏರಿಕೆಯಾಗಿದ್ದು. ಈ ಕಾರನ್ನು ಆರ್‌ಎಂ ಸೋಥೆಬಿಸ್ ಕೂಡ ಹರಾಜು ಹಾಕಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ