YouTube ನಲ್ಲಿ ನಿಮ್ಮ ನೆಚ್ಚಿನ ವಿಡಿಯೋ ವೀಕ್ಷಿಸುವುದು ಇನ್ಮುಂದೆ ಇನ್ನಷ್ಟು ಸುಲಭವಾಗಿದೆ
ಒಂದು ವೇಳೆ ವಿಡಿಯೋ ವೀಕ್ಷಣೆಗಾಗಿ ನೀವೂ ಕೂಡ ಯುಟ್ಯೂಬ್ ಹೆಚ್ಚಾಗಿ ಬಳಸುತ್ತಿದ್ದರೆ, ಇಲ್ಲಿದೆ ಒಂದು ಸಂತಸದ ಸುದ್ದಿ. ಹೌದು, ಯುಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.
ನವದೆಹಲಿ: ಒಂದು ವೇಳೆ ವಿಡಿಯೋ ವೀಕ್ಷಣೆಗಾಗಿ ನೀವೂ ಕೂಡ ಯುಟ್ಯೂಬ್ ಹೆಚ್ಚಾಗಿ ಬಳಸುತ್ತಿದ್ದರೆ, ಇಲ್ಲಿದೆ ಒಂದು ಸಂತಸದ ಸುದ್ದಿ. ಹೌದು, ಯುಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ತಾವು ಅತಿ ಹೆಚ್ಚು ಹುಡುಕುತ್ತಿರುವ ವೀಡಿಯೊ ವಿಷಯವನ್ನು ಸಂಘಟಿಸಲು ಸಹಾಯ ಮಾಡಲಿದೆ.
ಯುಟ್ಯೂಬ್ ನ ಈ ವೈಶಿಷ್ಟ್ಯ ಡೆಸ್ಕ್ ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್ ಗಳಲ್ಲಿರುವ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು. ತನ್ನ ವಿಡಿಯೋ ಚಾಪ್ಟರ್ ಹೆಸರಿನ ವೈಶಿಷ್ಟ್ಯ ಪರಿಚಯಿಸಿದೆ. ಈ ಸೌಲಭ್ಯ ವಿಡಿಯೋ ಸೃಷ್ಟಿಕರ್ತರಿಗೆ ತಮ್ಮ ಕಂಟೆಂಟ್ ಅನ್ನು ಉತ್ತಮ ರೀತಿಯಾಗಿ ನಿರ್ವಹಿಸಲು ಕೂಡ ಬಲ ನೀಡಲಿದೆ. ದೀರ್ಘಾವಧಿಯ ವಿಡಿಯೋಗಳಿಗೆ ಈ ವೈಶಿಷ್ಟ್ಯದಿಂದ ಹೆಚ್ಚಿನ ನೆರವು ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಚಾಪ್ಟರ್ಸ್ ಮೂಲಕ ನಿರ್ವಹಿಸಲಾಗಿರುವ ಇಂತಹ ವಿಡಿಯೋಗಳ ಸಹಾಯದಿಂದ ಬಳಕೆದಾರರು ಪುಸ್ತಕದ ರೀತಿಯಲ್ಲಿ ಕೆಲ ಭಾಗಗಳನ್ನು ಬಿಟ್ಟು ಉಳಿದ ಭಾಗವನ್ನು ನೋಡಲು ಸಾಧ್ಯವಾಗಲಿದೆ. ಅಂದರೆ ಅಪ್ರಾಸಂಗಿಕ ಎನಿಸುವ ಭಾಗವನ್ನು ನೀವು ಬಿಡಬಹುದಾಗಿದೆ. ಈ ಕುರಿತು ಯುಟ್ಯೂಬ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ವಿಡಿಯೋ ಕ್ರಿಯೇಟರ್ಸ್ ಗಳಿಗೆ ಮಾಹಿತಿ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆ, ಚಾಪ್ಟರ್ಸ್ ಸಕ್ರೀಯವಾಗಿರುವಾಗ ವೀಕ್ಷಕರು ಅಧಿಕ ಕಾಲ ವಿಡಿಯೋ ವಿಕ್ಷೀಸುತ್ತಾರೆ ಹಾಗೂ ಸರಾಸರಿ ಹಲವು ಬಾರಿ ಮರಳಿ ಬರುತ್ತಾರೆ ಎಂದು ಹೇಳಿದೆ. 'ದಿ ವರ್ಜ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ವಿಡಿಯೋ ಚಾಪ್ಟರ್ಸ್ ವೈಶಿಷ್ಟ್ಯವನ್ನು ಯುಟ್ಯೂಬ್ ಏಪ್ರಿಲ್ ತಿಂಗಳಿನಲ್ಲಿಯೇ ಬಿಡುಗಡೆಗೊಳಿಸಿದೆ ಎನ್ನಲಾಗಿದೆ.