Smoking my dead dad : ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಲೈಕ್‌ಗಳಿಗಾಗಿ ಮತ್ತು ಫೇಮಸ್ ಆಗಲು ಅನೇಕರು ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವರು ರಾತ್ರೋರಾತ್ರಿ ದೊಡ್ಡ ಸ್ಟಾರ್ ಆಗುವ ಆಸೆಯಲ್ಲಿ ವಿಪರೀತಕ್ಕೆ ಹೋಗುತ್ತಾರೆ. ಪ್ರಾಣವನ್ನು ಪಣಕ್ಕಿಟ್ಟು ಭಯಾನಕ ಸಾಹಸಗಳನ್ನು ಮಾಡುತ್ತಿದ್ದಾರೆ..  


COMMERCIAL BREAK
SCROLL TO CONTINUE READING

ಯುವತಿಯರು ಗಾಂಜಾ ಸೇದುವುದು ಹೊಸದೇನಲ್ಲ. ಇದು ವಿಚಿತ್ರವೂ ಅಲ್ಲ.. ಆದರೆ ತಂದೆ ತೀರಿಕೊಂಡಾಗ ಅವರ ದೇಹವನ್ನು ಸುಟ್ಟು ಹಾಕಿ ಉಳಿದ ಬೂದಿಯ ಮೇಲೆ ಗಾಂಜಾ ಗಿಡ ನೆಟ್ಟು ಗಾಂಜಾ ಎಲೆಯಿಂದ ಸಿಗರೇಟು ಸೇದಿದ್ದು ಇಲ್ಲಿನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 


ಇದನ್ನೂ ಓದಿ:ಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ


ಹೌದು, ಅಮೆರಿಕಾದ ಯೂಟ್ಯೂಬರ್ ರೊಸಾನ್ನಾ ಪ್ಯಾನ್ಸಿನೊ, 14.6 ಮಿಲಿಯನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದಾರೆ. 39 ವರ್ಷದ ಯೂಟ್ಯೂಬರ್ ರೋಸನ್ನಾ ತಮ್ಮ ತಂದೆಯ ಚಿತಾಭಸ್ಮವನ್ನು ಬಳಸಿ ಬೆಳೆದ ಗಾಂಜಾದಿಂದ ತಯಾರಿಸಿದ ಸಿಗರೇಟನ್ನು ಸೇದುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ.


"ಸ್ಮೋಕಿಂಗ್ ಮೈ ಡೆಡ್ ಡ್ಯಾಡ್" ಎಂಬ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಸಂಚಿಕೆ ನವೆಂಬರ್ 17 ರಂದು ವೀಡಿಯೊ ಪ್ರಸಾರವಾಯಿತು. ಲ್ಯುಕೇಮಿಯಾನಿಂದ ಆರು ವರ್ಷಗಳ ಹೋರಾಟದ ನಂತರ ನನ್ನ ತಂದೆ ಐದು ವರ್ಷಗಳ ಹಿಂದೆ ನಿಧನರಾದರು. ಅವರು ಸಾಯುವ ಮುನ್ನ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. 


ಇದನ್ನೂ ಓದಿ:ಈ 1 ಬಾಳೆಹಣ್ಣಿನ ಬೆಲೆ 8 ಕೋಟಿ ರೂ..! ಇದರ ವಿಶೇಷತೆ ಗೊತ್ತಾದ್ರೆ 10 ಕೋಟಿ ಕೊಟ್ರು ಕಡಿಮೆ ಅಂತೀರಾ..


ಚಿತಾಭಸ್ಮವನ್ನು ಬಳಸಿಕೊಂಡು ಗಾಂಜಾ ಗಿಡವನ್ನು ಬೆಳೆದು ಸೇದು ಅಂತ ನನ್ನ ತಂದೆ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. ಅವರ ಕೋರಿಕೆಯ ಮೇರೆಗೆ ಇಂದು ಅದನ್ನು ಮಾಡಿದ್ದೇನೆ ಎಂದು ರೋಸನ್ನಾ ಬಹಿರಂಗಪಡಿಸಿದ್ದಾರೆ. ಸಧ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ