ಕರ್ನಾಟಕ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಜೆಡಿಎಸ್‌ ಪಕ್ಷ ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

Last Updated : Apr 20, 2018, 06:01 PM IST
ಕರ್ನಾಟಕ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ title=

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿರುವ ಜೆಡಿಎಸ್‌ ಪಕ್ಷ ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ 57 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಬಿಡುಗಡೆ ಮಾಡಿದರು. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರಸ್ವಾಮಿ ಜತೆ ಚರ್ಚಿಸಿ ರಾತ್ರಿ ವೇಳೆಗೆ ಅಥವಾ ಬೆಳಗ್ಗೆ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.

ಈಗಾಗಲೇ ಪಕ್ಷ ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಇಂದು 2ನೇ ಪಟ್ಟಿಯಲ್ಲಿ 58 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಟ್ಟಾರೆ 184 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. 20 ಕ್ಷೇತ್ರದಲ್ಲಿ ಬಿಎಸ್‌ಪಿ ಜೊತೆ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಅದರಲ್ಲಿ ಈಗಾಗಲೇ ಬಿಎಸ್ಪಿ 9 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಉಳಿದಂತೆ 20 ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.

ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ

ಕಾಗ​ವಾಡ- ಮೊಗಣ್ಣನವರ್​
ಕುಡಚಿ- ರಾಜೇಂದ್ರನಪ್ಪ ಹೈಹೊಳೆ
ಹುಕ್ಕೇರಿ- ಎಂ.ಬಿ.ಪಾಟೀಲ್​
ಗೋಕಾಕ್​- ಕರಿಯಪ್ಪ ಲಕ್ಷ್ಮಣ್ ತಲ್ವಾರ್​
ಯಮಕನಮರಡಿ- ಶಂಕರ್ ಬರ್ಮಗಸ್ತಿ
ಬೆಳಗಾವಿ ಉತ್ತರ- ಧರ್ಮರಾಜ್
ಖಾನಪುರ- ನಾಸೀರ್​ ಭಗವಾನ್
ಸವದತ್ತಿ- ಡಿ.ಎಫ್​.ಪಾಟೀಲ್​
ಮುಧೋಳ- ಶಂಕರ್ ನಾಯಕ್
ಜಮಖಂಡಿ- ಸದಾಶಿವಮೂರ್ತಿ
ಬೀಳಗಿ- ಸಂಗಪ್ಪ ತಂದ್ಗಾಳ್
ಹುನಗುಂದ- ಶಿವಣ್ಣಗೌಂಡಿ
ಮುದ್ದೇಬಿಹಾಳ- ಮಂಗಳಾದೇವಿ ಬಿರಾದಾರ್
ದೇವರಹಿಪ್ಪರಗಿ- ರಾಜುಗೌಡ ಪಾಟೀಲ್
ಸೇಡಂ- ಸುನೀತಾ
ಬಸವಕಲ್ಯಾಣ- ಪಿ.ಜಿ.ಆರ್​.ಸಂಧ್ಯಾ
ಭಾಲ್ಕಿ- ಪ್ರಕಾಶ್ ಖಂಡ್ರೆ
ಔರಾದ್​- ಧನಜಿ ಜಾಧವ್​
ರಾಯಚೂರು ಗ್ರಾಂ- ರವಿ ಪಾಟೀಲ್
ರಾಯಚೂರು- ಮಹಾಂತೇಶ ಪಾಟೀಲ್​
ಗಂಗಾವತಿ- ಕರಿಯಣ್ಣ ಸಂಗಟಿ
ಕೊಪ್ಪಳ- ಸಯ್ಯದ್​
ರೋಣ- ರವಿ ದೊಡ್ಡಮೇಟಿ
ನರಗುಂದ -ಗಿರೀಶ್​ ಪಾಟೀಲ್
ಕಲಘಟಗಿ- ನಿಂಬಣ್ಣ
ಶಿಗ್ಗಾಂವ್- ಅಶೋಕ್ ಬೇವಿನಮರದ
ಹಡಗಲಿ- ಪುತ್ರೇಶ್​
ಹಗರಿಬೊಮ್ಮನಹಳ್ಳಿ- ಕೃಷ್ಣನಾಯ್ಕ್
ಕಂಪ್ಲಿ- ಬಿ.ನಾರಾಯಣಪ್ಪ
ಸಿರುಗುಪ್ಪ- ಜಿ.ಕೆ.ಹನುಮಂತಪ್ಪ
ಬಳ್ಳಾರಿ ಗ್ರಾ- ತಾಯಣ್ಣ
ಬಳ್ಳಾರಿ- ಇಕ್ಬಾಲ್‌ ಅಹ್ಮದ್‌
ಬಾಲ್ಕಿ- ಪ್ರಕಾಶ್ ಖಂಡ್ರೆ
ಹೊಸದುರ್ಗ- ಶಶಿಕುಮಾರ್
ಜಗಳೂರು- ದೇವೇಂದ್ರಪ್ಪ
ದಾವಣಗೆರೆ ಉತ್ತರ- ವಡ್ಡನಹಳ್ಳಿ ಶಿವಶಂಕರ್‌
ದಾವಣಗೆರೆ ದಕ್ಷಿಣ- ಅಮಾನುಲ್ಲ ಖಾನ್‌
ಕುಂದಾಪುರ- ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ
ತರಿಕೆರೆ- ಶಿವಶಂಕರಪ್ಪ
ಗೌರಿಬಿದನೂರು- ನರಸಿಂಹಮೂರ್ತಿ
ರಾಜರಾಜೇಶ್ವರಿ ನಗರ- ರಾಮಚಂದ್ರ
ಮಲ್ಲೇಶ್ವರಂ- ಮಧುಸೂದನ್‌
ಸಿ.ವಿ.ರಾಮನ್‌ನಗರ- ರಮೇಶ್‌
ಶಾಂತಿನಗರ- ಶ್ರೀಧರ್ ರೆಡ್ಡಿ
ರಾಜಾಜಿನಗರ- ಜೇಡರಹಳ್ಳಿ ಕೃಷ್ಣಪ್ಪ
ಚಾಮರಾಜಪೇಟೆ- ಅಲ್ತಾಫ್ ಖಾನ್
ಚಿಕ್ಕಪೇಟೆ- ಹೇಮಚಂದ್ರಸಾಗರ್
ಜಯನಗರ- ತನ್ವೀರ್‌ ಅಹ್ಮದ್‌
ಬೆಂಗಳೂರು ದಕ್ಷಿಣ- ಆರ್. ಪ್ರಭಾಕರ್‌ ರೆಡ್ಡಿ
ಚನ್ನಪಟ್ಟಣ- ಎಚ್‌.ಡಿ. ಕುಮಾರಸ್ವಾಮಿ
ಮಂಡ್ಯ- ಎಂ.ಶ್ರೀನಿವಾಸ್‌
ಮೂಡಬಿದರೆ- ಅಮರನಾಥ್‌ ಶೆಟ್ಟಿ
ನಂಜನಗೂಡು(ಎಸ್.ಸಿ)- ದಯಾನಂದ್‌
ಹನೂರು- ಮಂಜುನಾಥ್‌
ಬೊಮ್ಮನಹಳ್ಳಿ- ಎನ್.ಸೋಮ್‌ಶೇಖರ್‌
ಕನಕಪುರ- ನಾರಾಯಣಗೌಡ
ಅಫ್ಜಲ್‌ಪುರ- ಗೋವಿಂದ ಭಟ್‌

Trending News