Apple Credit Card: ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಲು Apple ಪ್ಲಾನ್!

Apple Pay: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿ ಆಪಲ್ ದೇಶದಲ್ಲಿ ಆಪಲ್ ಪೇ ಪ್ರಾರಂಭಿಸುವ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Written by - Puttaraj K Alur | Last Updated : Jun 24, 2023, 01:27 PM IST
  • ಟೆಕ್ ದೈತ್ಯ Apple ಭಾರತದಲ್ಲಿ ತನ್ನ ಕ್ರೆಡಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ
  • ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಹಕಾರದೊಂದಿಗೆ ಆಪಲ್ ಕಾರ್ಡ್ ಪರಿಚಯಿಸಲು ಮೆಗಾ ಪ್ಲಾನ್
  • ದೇಶದಲ್ಲಿ ಆಪಲ್ ಪೇ ಪ್ರಾರಂಭಿಸುವ ಕುರಿತು ಎನ್‌ಪಿಸಿಐ ಜೊತೆಗೆ ಆಪಲ್ ಚರ್ಚೆ
Apple Credit Card: ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಲು Apple ಪ್ಲಾನ್!  title=
ಆಪಲ್ ಕಾರ್ಡ್ ಪರಿಚಯಿಸಲು ಪ್ಲಾನ್!

ನವದೆಹಲಿ: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿ Apple ಭಾರತದಲ್ಲಿ ತನ್ನ ಕ್ರೆಡಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಹಕಾರದೊಂದಿಗೆ ಆಪಲ್ ಕಾರ್ಡ್ ಪರಿಚಯಿಸಲು ಪ್ಲಾನ್ ಮಾಡಿದೆ. ಈ ಮೂಲಕ ಭಾರತದ ದೊಡ್ಡ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಪಾಲು ಹೊಂದಲು ಎಚ್‌ಡಿಎಫ್‌ಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಗೂಗಲ್, ಸ್ಯಾಮ್‌ಸಂಗ್ ಮತ್ತು ಅಮೆಜಾನ್‌ನಂತಹ ಬಹುತೇಕ ಎಲ್ಲಾ ಟೆಕ್ ದೈತ್ಯರು ಈಗಾಗಲೇ ತಮ್ಮದೇ ಆದ ಪಾವತಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಆಪಲ್ ವಿನೂತನ ಹೆಜ್ಜೆಯನ್ನು ಇಡುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: Instagram Reelsನಿಂದ ಕೋಟಿ ಸಂಪಾದನೆ: ಮನೆಯಲ್ಲಿ ಕುಳಿತು ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

ಆಪಲ್ NPCI ಜೊತೆ ಮಾತುಕತೆ ನಡೆಸುತ್ತಿದೆಯೇ?

ಇದಲ್ಲದೆ ವರದಿಗಳ ಪ್ರಕಾರ ಆಪಲ್ ದೇಶದಲ್ಲಿ ಆಪಲ್ ಪೇ ಪ್ರಾರಂಭಿಸುವ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಯೊಂದಿಗೆ ಮಾತುಕತೆ ನಡೆಸುತ್ತಿದೆ. Apple Pay ಎಂಬುದು Apple Inc.ನ ಮೊಬೈಲ್ ಪಾವತಿ ಸೇವೆಯಾಗಿದ್ದು, ಅದು ಬಳಕೆದಾರರಿಗೆ ವೈಯಕ್ತಿಕವಾಗಿ, iOS ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಭೇಟಿಯಾದ ಆಪಲ್ ಸಿಇಒ

ಆಪಲ್‌ನ ಸಿಇಒ ಟಿಮ್ ಕುಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿಧರ್ ಜಗದೀಶ್‌ ಅವರು ಇತ್ತೀಚೆಗೆ ಇದೇ ಕುರಿತು ಸಭೆ ನಡೆಸಿದ್ದರು. ಆಪಲ್ ಇಂಕ್ ಕಾರ್ಯನಿರ್ವಾಹಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ದೊಂದಿಗೆ ಕ್ರೆಡಿಟ್ ಕಾರ್ಡ್‌ನ ಕಾನೂನುಬದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇತರ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರಮಾಣಿತ ವಿಧಾನವನ್ನು ಅನುಸರಿಸಲು ಆರ್‌ಬಿಐ ಆಪಲ್‌ಗೆ ಸೂಚನೆ ನೀಡಿದೆ. ಐಫೋನ್ ತಯಾರಕರಿಗೆ ತನ್ನ ಕ್ರೆಡಿಟ್ ಕಾರ್ಡ್ ಅನ್ನು ಭಾರತಕ್ಕೆ ತರಲು ಯಾವುದೇ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಡೀ ವಿಷಯದ ಬಗ್ಗೆ ಆರ್‌ಬಿಐ ಮತ್ತು ಆಪಲ್ ಅಥವಾ ಎಚ್‌ಡಿಎಫ್‌ಸಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Wagonr CNG ಅನ್ನು ಕೇವಲ 80 ಸಾವಿರಕ್ಕೆ ಮನೆಗೆ ತನ್ನಿ

COVID ಸಾಂಕ್ರಾಮಿಕದ ನಂತರ ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬೆಳವಣಿಗೆ

ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ವ್ಯವಹಾರವು ಶೇ.20ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) ಬೆಳೆದಿದೆ. ಜುಲೈ 2022ರಲ್ಲಿ, ಜೂನ್ ವೇಳೆಗೆ ವಿತರಿಸಲಾದ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ 78 ಮಿಲಿಯನ್ ಮೀರುತ್ತದೆ ಎಂದು ವರದಿ ಹೇಳುತ್ತದೆ. ಇದಲ್ಲದೆ ಮೇ 2022ರಲ್ಲಿ PWC ಇಂಡಿಯಾದ ವರದಿಯ ಪ್ರಕಾರ ಒಟ್ಟು ಕ್ರೆಡಿಟ್ ಕಾರ್ಡ್ ಖರ್ಚು 1.13 ಲಕ್ಷ ಕೋಟಿ ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ.

ಇ-ಕಾಮರ್ಸ್‌ನ ಹೊರಹೊಮ್ಮುವಿಕೆ, ಕ್ಯಾಶ್‌ಲೆಸ್‌ ಪೇಮೆಂಟ್‍ಗಳ ಅಳವಡಿಕೆ ಮತ್ತು ಮೌಲ್ಯದ ಪ್ರತಿಪಾದನೆಯಲ್ಲಿನ ಬದಲಾವಣೆಗಳೊಂದಿಗೆ ಕೊರೊನಾ ಸಾಂಕ್ರಾಮಿಕ ನಂತರದ ಕ್ರೆಡಿಟ್ ಕಾರ್ಡ್ ಮಹತ್ವವು ಗಣನೀಯ ಬದಲಾವಣೆಗೆ ಒಳಗಾಗಿದೆ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದು ವರದಿ ತಿಳಿಸಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News