Ayodhya Ram Mandir : ಬ್ಯಾಂಕ್ ನಿಂದ ಷೇರು ಮಾರುಕಟ್ಟೆವರೆಗೂ ಸ್ಥಗಿತ : 9 ರಾಜ್ಯಗಳಲ್ಲಿ ಸಂಪೂರ್ಣ ರಜೆ ಘೋಷಣೆ

Ram Mandir Pran Pratishtha: ಜನರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಹಾಗೂ ಈ ಐತಿಹಾಸಿಕ ಸಂದರ್ಭವನ್ನು ಕಣ್ತುಂಬಿಕೊಳ್ಳಲು  ಇಂದು ಶಾಲಾ-ಕಾಲೇಜು ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. 

Written by - Ranjitha R K | Last Updated : Jan 22, 2024, 10:19 AM IST
  • ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ
  • ಇಂದು ಶಾಲಾ-ಕಾಲೇಜು ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳಿಗೆ ರಜೆ
  • 9 ರಾಜ್ಯಗಳಲ್ಲಿ ಸಂಪೂರ್ಣ ರಜೆ ಘೋಷಣೆ
Ayodhya Ram Mandir : ಬ್ಯಾಂಕ್ ನಿಂದ ಷೇರು ಮಾರುಕಟ್ಟೆವರೆಗೂ ಸ್ಥಗಿತ :  9 ರಾಜ್ಯಗಳಲ್ಲಿ ಸಂಪೂರ್ಣ ರಜೆ ಘೋಷಣೆ  title=

Ram Mandir Pran Pratishtha : ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಅಯೋಧ್ಯೆಯ ನೆಲದಲ್ಲಿ ಎಲ್ಲಿ ನೋಡಿದರೂ ರಾಮ ನಾಮ ಜಪ. ಇಡೀ ದೇಶದಲ್ಲಿ ರಾಮಭಕ್ತಿಯ ಅಲೆ ಎದ್ದಿದೆ. ಶ್ರೀರಾಮ   ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ವಿಶೇಷವಾಗಿಸಲು ದೇಶಾದ್ಯಂತ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜನರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಹಾಗೂ ಈ ಐತಿಹಾಸಿಕ ಸಂದರ್ಭವನ್ನು ಕಣ್ತುಂಬಿಕೊಳ್ಳಲು  ಇಂದು ಶಾಲಾ-ಕಾಲೇಜು ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. 

ಷೇರು ಮಾರುಕಟ್ಟೆ ರಜೆ  :
ಷೇರು ಮಾರುಕಟ್ಟೆಗಳು ಇಂದು ಮುಚ್ಚಿರುತ್ತದೆ. ರಾಮಮಂದಿರ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಇಂದು ಕಾರ್ಯ ನಿರ್ವಹಿಸುವುದಿಲ್ಲ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನಲ್ಲಿ ಯಾವುದೇ ವಹಿವಾಟು ಇರುವುದಿಲ್ಲ.ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಕಾರಣ, ಮಹಾರಾಷ್ಟ್ರ ಸರ್ಕಾರವು  ಇಂದು ರಜೆ ಘೋಷಿಸಿದೆ.  ಇದರಿಂದಾಗಿ ಷೇರು ಮಾರುಕಟ್ಟೆ ಕೂಡಾ ಮುಚ್ಚಿರುತ್ತದೆ. 

ಇದನ್ನೂ ಓದಿ : NPS Withdrawal Rules: ಫೆ.1 ರಿಂದ ಬದಲಾಗುವುದು NPS ನಿಯಮ : ಸಂಪೂರ್ಣ ವಿವರ ಇಲ್ಲಿದೆ

ಕರೆನ್ಸಿ ಮಾರುಕಟ್ಟೆಯಲ್ಲಿ ಅರ್ಧ ದಿನ : 
ಸೋಮವಾರ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಆದರೆ  ಕರೆನ್ಸಿ ಮಾರುಕಟ್ಟೆಗಳು ಕೇವಲ ಅರ್ಧ ದಿನ ಮುಚ್ಚಿರುತ್ತವೆ.ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 22 ರಂದು ಅರ್ಧ ದಿನ ಮಾತ್ರ ಕರೆನ್ಸಿಮಾರುಕಟ್ಟೆ ತೆರೆದಿರುತ್ತದೆ ಎಂದು ಸುತ್ತೋಲೆ ಹೊರಡಿಸಿದೆ. ಕರೆನ್ಸಿ ಮಾರುಕಟ್ಟೆಗಳು ಮಧ್ಯಾಹ್ನ 2:30 ರವರೆಗೆ ಮುಚ್ಚಲ್ಪಡುತ್ತವೆ. ಅಂದರೆ, ಕರೆನ್ಸಿ ಮಾರುಕಟ್ಟೆಗಳು ಬೆಳಿಗ್ಗೆ 9 ರ ಬದಲಿಗೆ 2:30 ಕ್ಕೆ ತೆರೆದಿರುತ್ತವೆ.  

ಬ್ಯಾಂಕ್‌ಗಳಿಗೂ ಅರ್ಧ ದಿನ  :
ದೇಶದಾದ್ಯಂತ ಸರ್ಕಾರಿ ಬ್ಯಾಂಕ್‌ಗಳು ಕೂಡಾ ಅರ್ಧ ದಿನ ಮುಚ್ಚಲ್ಪಡುತ್ತವೆ. ಎಲ್ಲಾ ಸರ್ಕಾರಿ ಬ್ಯಾಂಕ್‌ಗಳು ಮಧ್ಯಾಹ್ನ 2.30 ರವರೆಗೆ ಮುಚ್ಚಿರುತ್ತವೆ. ನೌಕರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಗ್ರಾಮೀಣ ಬ್ಯಾಂಕುಗಳು ಜನವರಿ 22 ರಂದು ಅರ್ಧ ದಿನ ಅಂದರೆ ಮಧ್ಯಾಹ್ನ 2.30 ರವರೆಗೆ ಮುಚ್ಚಲ್ಪಡುತ್ತವೆ. ಆದರೆ ಖಾಸಗಿ ವಲಯದ ಬ್ಯಾಂಕ್‌ಗಳು ತೆರೆದಿರುತ್ತವೆ.  

ಇದನ್ನೂ ಓದಿ : ITR Refund ಸಂಬಂಧಿತ ಈ ಮೆಸೇಜ್ ಬಗ್ಗೆ ಇರಲಿ ಎಚ್ಚರ!

ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಅರ್ಧ ದಿನ ರಜೆ  :
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅರ್ಧ ದಿನ ರಜೆ ಘೋಷಿಸಿದೆ. ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಅರ್ಧ ದಿನ ಅಂದರೆ ಮಧ್ಯಾಹ್ನ 2.30 ರವರೆಗೆ ಮುಚ್ಚಿರುತ್ತದೆ.ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಕಚೇರಿಗಳನ್ನು ಜನವರಿ 22 ರಂದು ಮುಚ್ಚಲು ನಿರ್ಧರಿಸಿದೆ. 

ಈ 10 ರಾಜ್ಯಗಳಲ್ಲಿಯೂ ರಜೆ :
ಕೇಂದ್ರ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ, ಉತ್ತರ ಪ್ರದೇಶ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.ಇದಲ್ಲದೇ ಗೋವಾ, ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಗಢ, ತ್ರಿಪುರ, ಒಡಿಶಾ, ಗುಜರಾತ್, ಅಸ್ಸಾಂನಲ್ಲಿ ಸಾರ್ವಜನಿಕ ರಜೆ ನೀಡಲಾಗಿದೆ. 

2000 ರೂಪಾಯಿ ನೋಟುಗಳನ್ನು ಬದಲಾಯಿಸುವುದಿಲ್ಲ:
ಜನವರಿ 22 ರಂದು ರಜೆ ಇರುವುದರಿಂದ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳುವ ಸೌಲಭ್ಯ ಇರುವುದಿಲ್ಲ.ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಲಾಗುವುದಿಲ್ಲ. ಈ ಪ್ರಕ್ರಿಯೆಯು ಜನವರಿ 23 ರಿಂದ ಸಾಮಾನ್ಯವಾಗಿ ನಡೆಯುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/r_IrkLob-eo?si=M0QH7KGR6QMWXgTE

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News