ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !

EPFO New Rule:ಹೊಸ ನಿಯಮ EPF ಸದಸ್ಯರ ದೊಡ್ಡ ತಲೆನೋವನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಈ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

Written by - Ranjitha R K | Last Updated : Apr 17, 2024, 08:37 AM IST
  • EPFO ಏಪ್ರಿಲ್ ನಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ
  • ಇನ್ನು ಮುಂದೆ ಸದಸ್ಯರು ಈ ಕೆಲಸ ಮಾಡಬೇಕಾಗಿಲ್ಲ.
  • ನಿರಾಳವಾಗಿರಬಹುದು ಇಪಿಎಫ್ ಚಂದಾದಾರರು
ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ ! title=

EPFO New Rule: EPFO ಏಪ್ರಿಲ್ ನಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ.ಈ ಹೊಸ ಬದಲಾವಣೆಯು ಉದ್ಯೋಗಿಗಳಿಗೆ ದೊಡ್ಡ ಸಮಾಧಾನವನ್ನು ತರುತ್ತದೆ.ಈ ನಿಯಮ ಬದಲಾವಣೆಗೆ ಮೊದಲು,ಪಿಎಫ್ ಸದಸ್ಯರು ತಮ್ಮ ಕೆಲಸವನ್ನು ಬದಲಾಯಿಸಿದರೆ ತಮ್ಮ ಹಳೆಯ ಪಿಎಫ್ ಖಾತೆಯಲ್ಲಿನ ಮೊತ್ತವನ್ನು ವರ್ಗಾಯಿಸಲು ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿತ್ತು.ಆದರೆ ಇನ್ನು ಮುಂದೆ ಈ ಕೆಲಸ ಮಾಡಬೇಕಾಗಿಲ್ಲ.ಉದ್ಯೋಗಿ ತನ್ನ ಕೆಲಸವನ್ನು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ವರ್ಗಾಯಿಸಿದರೆ, ಪಿಎಫ್ ಮೊತ್ತವು ಕೂಡಾ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ.

ಈ ನಿಯಮದಲ್ಲಿ ಬದಲಾವಣೆ:
ಹೊಸ ನಿಯಮಗಳ ಪ್ರಕಾರ, ಉದ್ಯೋಗಿಗಳು ಕೆಲಸ ಬದಲಾಯಿಸುವಾಗ ಪಿಎಫ್ ಹಣವನ್ನು ಸ್ವತಃ ವರ್ಗಾಯಿಸುವ ಅಗತ್ಯವಿಲ್ಲ.ಇದಕ್ಕಾಗಿ ಇನ್ನು ಮುಂದೆ ಯಾವುದೇ ವಿಶೇಷ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ.FY 2024-25 ರಲ್ಲಿ ಉದ್ಯೋಗ ಬದಲಾವಣೆಯ ಮೇಲೆ PF ಪಾವತಿಗಳನ್ನು ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.ಇದು ಉದ್ಯೋಗಿಗಳಿಗೆ ಹೆಚ್ಚಿನ ನಿರಾಳತೆಯನ್ನು ನೀಡುತ್ತದೆ.

ಇದನ್ನೂ ಓದಿ :ಇನ್ನು ಬ್ಯಾಂಕ್ ಲೋನ್ ಪಡೆಯಬೇಕಾದರೆ ಈ ಮಾಹಿತಿಯನ್ನು ನೀಡಲೇ ಬೇಕು! ಬ್ಯಾಂಕ್ ಲೋನ್ ನಿಯಮ ಬದಲಿಸಿದ RBI

Automatic Transfer Process ಎಂದರೇನು? : 
ಸ್ವಯಂಚಾಲಿತ ವರ್ಗಾವಣೆ ( Automatic Transfer) ವೈಶಿಷ್ಟ್ಯ ಅಂದರೆ ಸ್ವಯಂಚಾಲಿತ ಡಿ-ವರ್ಗಾವಣೆ ಪ್ರಕ್ರಿಯೆ. ಅಸ್ತಿತ್ವದಲ್ಲಿರುವ ಇಪಿಎಫ್ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸುವಾಗ ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ಪ್ರಕ್ರಿಯೆಯಿಲ್ಲದೆ ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಹಳೆಯ ಸಂಸ್ಥೆಯಿಂದ ಹೊಸ ಸಂಸ್ಥೆಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.ಅಂದರೆ,ಇಪಿಎಫ್ ಖಾತೆ ವರ್ಗಾವಣೆ ಸ್ವಯಂಚಾಲಿತವಾಗಿ ನಡೆಯುತ್ತದೆ.ಇದಕ್ಕಾಗಿ ಸದಸ್ಯರು ಯಾವುದೇ ಫಾರ್ಮ್ ಸಲ್ಲಿಸುವ ಅಗತ್ಯವಿಲ್ಲ. 

ಈ ಹೊಸ ಸೌಲಭ್ಯ ಯಾರಿಗೆ ಸಿಗಲಿದೆ? :
- ಈ ಹೊಸ ಪ್ರಕ್ರಿಯೆಯು ಎಲ್ಲಾ ಉದ್ಯೋಗಿಗಳಿಗೆ ಲಭ್ಯವಿಲ್ಲ.
- ಈ ಸೌಲಭ್ಯವು EPFO​​ನಿಂದ ನಿರ್ವಹಿಸಲ್ಪಡುವ ಹಳೆಯ ಮತ್ತು ಹೊಸ EPF ಖಾತೆಗಳನ್ನು ಹೊಂದಿರುವ EPF ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.
- ವಿನಾಯಿತಿ ಪಡೆದ PF ಟ್ರಸ್ಟ್‌ಗಳು ಈ ಸ್ವಯಂಚಾಲಿತ ವರ್ಗಾವಣೆ ಯೋಜನೆಯ ಅಡಿಯಲ್ಲಿ ಬರುವುದಿಲ್ಲ. 

ಇದನ್ನೂ ಓದಿ :Gold And Silver Price: ಆಭರಣ ಖರೀದಿದಾರರಿಗೆ ಗುಡ್‌ ನ್ಯೂಸ್: ಚಿನ್ನ ಹಾಗೂ ಬೆಳ್ಳಿಯ ದರ ಕುಸಿತ!

ಉದ್ಯೋಗಿಗಳ ಭವಿಷ್ಯ ನಿಧಿ ವ್ಯವಸ್ಥೆ : 
ಹೆಚ್ಚಾಗಿ ಎಲ್ಲಾ ವೇತನ ವರ್ಗದ ಸದಸ್ಯರು ಇಪಿಎಫ್ ಸದಸ್ಯರಾಗಿದ್ದಾರೆ.ಪಿಎಫ್ ಮೊತ್ತವನ್ನು ಉದ್ಯೋಗಿಗಳ ನಿವೃತ್ತಿಯ ನಂತರದ ಮುಖ್ಯ ಉಳಿತಾಯವೆಂದು ಪರಿಗಣಿಸಲಾಗುತ್ತದೆ.ಈ ಖಾತೆಯಲ್ಲಿ ಉದ್ಯೋಗಿಗಳು ಮತ್ತು ಕಂಪನಿಗಳು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News