Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ

ಆರ್‌ಬಿಐ ಚೆಕ್ ಮೂಲಕ ಪಾವತಿ ನಿಯಮಗಳನ್ನು ಬದಲಾಯಿಸಲಿದೆ. ಹೊಸ ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿವೆ.  

Written by - Yashaswini V | Last Updated : Dec 14, 2020, 12:55 PM IST
  • ಚೆಕ್ ಪಾವತಿಯ ಈ ಹೊಸ ನಿಯಮವು 1 ಜನವರಿ 2021 ರಿಂದ ಜಾರಿಗೆ
  • ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 'Positive pay system' ಎಂಬ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧಾರ
  • ಚೆಕ್‌ಗಳ (Cheque) ದುರುಪಯೋಗವನ್ನು ನಿಲ್ಲಿಸುವುದು ಇದರ ಉದ್ದೇಶ
Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ title=

Cheque Payment System: ಆಗಸ್ಟ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಚೆಕ್ ಪಾವತಿ ವ್ಯವಸ್ಥೆಯನ್ನು ಬದಲಾಯಿಸಲು ನಿರ್ಧರಿಸಿತು. ಇದಕ್ಕಾಗಿ ಆರ್‌ಬಿಐ ಈಗ ಸಕಾರಾತ್ಮಕ ವೇತನ ವ್ಯವಸ್ಥೆಯನ್ನು (Positive pay system) ಜಾರಿಗೆ ತರಲಿದೆ. ಈ ನಿಯಮದ ಪ್ರಕಾರ 50,000 ರೂ.ಗಿಂತ ಹೆಚ್ಚಿನ ಪಾವತಿಗಳ ಪ್ರಮುಖ ವಿವರಗಳನ್ನು ಮರು ದೃಢೀಕರಿಸಬೇಕಾಗಿದೆ.

ಚೆಕ್ ಪಾವತಿಯ ಈ ಹೊಸ ನಿಯಮವು 1 ಜನವರಿ 2021 ರಿಂದ ಜಾರಿಗೆ ಬರಲಿದೆ.  ಆಗಸ್ಟ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಈ ಬಗ್ಗೆ ಪ್ರಕಟಿಸಿದರು. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 'ಸಕಾರಾತ್ಮಕ ವೇತನ' ಎಂಬ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ. ಚೆಕ್‌ಗಳ (Cheque) ದುರುಪಯೋಗವನ್ನು ನಿಲ್ಲಿಸುವುದು ಇದರ ಉದ್ದೇಶ. ಅಲ್ಲದೆ ಮರು ದೃಢೀಕರಣದ ಮೂಲಕ ವಂಚನೆಯನ್ನು ಕಡಿಮೆ ಮಾಡಬಹುದು.

ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಸಿಗಲಿದೆ ಈ ವಿಶೇಷ ಸೌಲಭ್ಯ

ಸಕಾರಾತ್ಮಕ ವೇತನ ವ್ಯವಸ್ಥೆ/ಪಾಸಿಟಿವ್ ಪೇ ಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ?

  • 'ಸಕಾರಾತ್ಮಕ ವೇತನ ವ್ಯವಸ್ಥೆ' ಮೂಲಕ ವಂಚನೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಅಡಿಯಲ್ಲಿ ಯಾರಾದರೂ ಚೆಕ್ ನೀಡಿದಾಗ ಅವರು ಸಂಪೂರ್ಣ ವಿವರಗಳನ್ನು ತಮ್ಮ ಬ್ಯಾಂಕ್‌ಗೆ ಕಳುಹಿಸಬೇಕಾಗುತ್ತದೆ. 
  • ಇದರಲ್ಲಿ ಚೆಕ್ ನೀಡುವವರು ಚೆಕ್ ದಿನಾಂಕವನ್ನು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪಾವತಿಸುವ ವ್ಯಕ್ತಿಯ ಹೆಸರು, ಖಾತೆ ಸಂಖ್ಯೆ, ಮೊತ್ತ ಮತ್ತು ಉಳಿದ ಮಾಹಿತಿಯನ್ನು ಬ್ಯಾಂಕ್‌ಗೆ ನೀಡಬೇಕಾಗುತ್ತದೆ. 
  • ಈ ವ್ಯವಸ್ಥೆಯಿಂದ ಚೆಕ್‌ಗಳ ಬಳಕೆ ಹೆಚ್ಚು ಸುರಕ್ಷಿತವಾಗಿರುತ್ತದೆ. 
  • ಇದರೊಂದಿಗೆ ಚೆಕ್ ಕ್ಲಿಯರೆನ್ಸ್ ಗೆ ಸಹ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ವ್ಯವಸ್ಥೆಯ ನಿಯಮವು ದೊಡ್ಡ ಮೊತ್ತದ ಚೆಕ್‌ಗಳಿಗೆ ಅನ್ವಯಿಸುತ್ತದೆ.

Cheque ಭರ್ತಿ ಮಾಡುವ ವೇಳೆ ಈ ಎಚ್ಚರಿಕೆ ವಹಿಸಲು ಮರೆಯದಿರಿ... ಶೀಘ್ರವೆ ನಿಯಮ ಬದಲಾಗುತ್ತಿದೆ

ಈ ಮಾಹಿತಿಯನ್ನು ಚೆಕ್ ನೀಡುವವರಿಗೆ ಎಲೆಕ್ಟ್ರಾನಿಕ್ ವಿಧಾನಗಳಾದ ಎಸ್‌ಎಂಎಸ್, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಅಥವಾ ಎಟಿಎಂ ಮೂಲಕ ಒದಗಿಸಬಹುದು. ಇದರ ನಂತರ ಚೆಕ್ ಮೂಲಕ ಪಾವತಿಸುವ ಮೊದಲು ಈ ಮಾಹಿತಿಯನ್ನು ಕ್ರಾಸ್ ಚೆಕ್ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಅದರ ಬಗ್ಗೆ ಸಂಬಂಧಪಟ್ಟ ಎರಡೂ ಬ್ಯಾಂಕುಗಳಿಗೆ ಸಿಟಿಎಸ್ (ಚೆಕ್ ಮೊಟಕುಗೊಳಿಸುವ ವ್ಯವಸ್ಥೆ) /CTS (Cheque Truncation System) ಗೆ ಮಾಹಿತಿ ನೀಡಲಾಗುವುದು.

Trending News