Gold Price Today: ದಾಖಲೆ ಮಟ್ಟಕ್ಕೆ ಏರಿದ ನಂತರ ಮತ್ತೆ ಕುಸಿಯಿತು ಚಿನ್ನದ ಬೆಲೆ !ಬೆಳ್ಳಿ ಕೂಡಾ ಅಗ್ಗ

Gold-Silver Price Today : ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.ಇಂದು ಚಿನ್ನದ ಬೆಲೆ ಶೇ.0.18ರಷ್ಟು ಇಳಿಕೆಯಾಗಿದೆ.   

Written by - Ranjitha R K | Last Updated : Mar 12, 2024, 03:27 PM IST
  • ಇಂದು ಚಿನ್ನದ ಬೆಲೆಯಲ್ಲಿ ಕಂಡುಬರುತ್ತಿದೆ ಇಳಿಕೆ
  • MCXನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇಳಿಕೆ
  • ಮಾರ್ಚ್ ತಿಂಗಳಿನಲ್ಲಿ ಇಲ್ಲಿಯವರೆಗೆ 3,000 ರೂ. ಏರಿಕೆ
Gold Price Today: ದಾಖಲೆ ಮಟ್ಟಕ್ಕೆ ಏರಿದ ನಂತರ ಮತ್ತೆ ಕುಸಿಯಿತು ಚಿನ್ನದ ಬೆಲೆ !ಬೆಳ್ಳಿ ಕೂಡಾ ಅಗ್ಗ  title=

Gold-Silver Price Today, 12 March 2024: ದಾಖಲೆಯ ಮಟ್ಟವನ್ನು ತಲುಪಿದ ನಂತರ, ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. MCXನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇಳಿಕೆಯಾಗುವುದು. ನಿನ್ನೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಮಾರ್ಚ್ ತಿಂಗಳಿನಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆ 10 ಗ್ರಾಂಗೆ 3,000 ರೂ. ಏರಿಕೆಯಾಗಿದೆ. 

MCX ನಲ್ಲಿ ಚಿನ್ನ-ಬೆಳ್ಳಿ ಬೆಲೆ? :
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. ಇಂದು ಚಿನ್ನದ ಬೆಲೆ ಶೇ.0.18ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 65913 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.08ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 74458 ರೂ. ಆಗಿದೆ. 

ಇದನ್ನೂ ಓದಿ : ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ ! 15,000 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ !

IBJA ನಲ್ಲಿ ಚಿನ್ನದ ಬೆಲೆ ಎಷ್ಟು? :
ಇಂದು IBJA ನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಇಂದು IBJA ನಲ್ಲಿ 999 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 65615 ರೂ. ಆಗಿದ್ದರೆ, 995 ಶುದ್ಧತೆಯ ಚಿನ್ನದ ಬೆಲೆ 65353 ರೂ.ಗಳಾಗಿದೆ. 916 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 60103 ರೂ.ಆಗಿದೆ.  

ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ  11,000 ರೂ ಹೆಚ್ಚಳ : 
ಹೂಡಿಕೆದಾರರು ಫೆಬ್ರವರಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ, ಅವರಿಗೆ ಉತ್ತಮ ಲಾಭ ಸಿಗುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 11,000 ರೂ.ಯಷ್ಟು ಏರಿಕೆ ಕಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ, ಹೂಡಿಕೆದಾರರಿಗೆ ಚಿನ್ನವು ಸುಮಾರು 20 ಪ್ರತಿಶತದಷ್ಟು ಆದಾಯವನ್ನು ನೀಡಿದೆ. 

ಶುದ್ಧತೆಗೆ ಅನುಗುಣವಾಗಿ ಚಿನ್ನದ ಬೆಲೆ :
IBJA ಮತ್ತು ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಎರಡರಿಂದಲೂ ಚಿನ್ನದ ದರಗಳನ್ನು ನೀಡಲಾಗುತ್ತದೆ. ಈ ದರಗಳನ್ನು ಶುದ್ಧತೆಗೆ ಅನುಗುಣವಾಗಿ ನೀಡಲಾಗುತ್ತದೆ. ಈ ಚಿನ್ನದ ಬೆಲೆಗಳಲ್ಲಿ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಸೇರಿಸಲಾಗಿರುವುದಿಲ್ಲ. ಈ ಬೆಲೆಗಳ ಮೇಲೆ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ವಿಧಿಸಿದ ನಂತರವೇ  ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳನ್ನು  ಖರೀದಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Indian Railway : ರೈಲು ತಡವಾಗಿ ಬಂದರೆ ಪ್ರಯಾಣಿಕರಿಗೆ ಸಿಗುವುದು ಪೂರ್ತಿ ಹಣ ವಾಪಸ್ ! ನಿಮಗೆ ಗೊತ್ತಾ ರೈಲ್ವೆಯ ಈ ನಿಯಮ ?

ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಹೀಗೆ ಪರಿಶೀಲಿಸಬಹುದು : 
ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ ಕಾಲ್ ನೀಡುತ್ತಿರೋ ಅದೇ ನಂಬರ್ ಗೆ ಚಿನ್ನದ ಬೆಲೆಯನ್ನು ಸಂದೇಶದ ಮೂಲಕ ಕಳುಹಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News