Earn Money: ನಿಮ್ಮ ಬಳಿ ಈ 5 ರೂ. ನಾಣ್ಯ ಇದ್ದರೆ ಸಿಗಲಿದೆ 10 ಲಕ್ಷ, ಏನು ಮಾಡಬೇಕೆಂದು ತಿಳಿಯಿರಿ

ನಿಮ್ಮ ಬಳಿ ಈ 5 ರೂಪಾಯಿಯ ಹಳೆಯ ನಾಣ್ಯ ಇದ್ದರೆ ನೀವು ಮಿಲಿಯನೇರ್ ಆಗಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಬಹುದು. ಇದನ್ನು ಹೇಗೆಂದು ತಿಳಿಯಿರಿ.

Written by - Puttaraj K Alur | Last Updated : Jan 10, 2022, 09:35 PM IST
  • 5 ರೂಪಾಯಿಯ ಈ ನಾಣ್ಯದಿಂದ ಲಕ್ಷಗಟ್ಟಲೆ ಹಣ ಗಳಿಸಬಹುದು
  • ಮನೆಯಿಂದಲೇ ಹಣ ಗಳಿಸಲು ನಿಮಗೆ ಇಲ್ಲಿದೆ ನೋಡಿ ಸುವರ್ಣಾವಕಾಶ
  • ಈ ಆನ್‌ಲೈನ್‌ ಸೈಟ್‌ಗಳಲ್ಲಿ ನೀವು ಹಳೆಯ ನಾಣ್ಯ ಮಾರಾಟ ಮಾಡಬಹುದು
Earn Money: ನಿಮ್ಮ ಬಳಿ ಈ 5 ರೂ. ನಾಣ್ಯ ಇದ್ದರೆ ಸಿಗಲಿದೆ 10 ಲಕ್ಷ, ಏನು ಮಾಡಬೇಕೆಂದು ತಿಳಿಯಿರಿ title=
ಹಳೆಯ ನಾಣ್ಯ ಮಾರಾಟ ಮಾಡಿ ಲಕ್ಷಗಟ್ಟಲೇ ಗಳಿಸಿ

ನವದೆಹಲಿ: ಮನೆಯಲ್ಲಿಯೇ ಕುಳಿತು ಏನೂ ಮಾಡದೆ ನೀವು  ಹಣ(Earn Money Online) ಗಳಿಸಲು ಬಯಸಿದರೆ ಇಲ್ಲಿದೆ ಸುವರ್ಣಾವಕಾಶ. ನೀವು ಕೇವಲ 5 ರೂ.ಗೆ ಬದಲಾಗಿ 5 ಲಕ್ಷ ರೂ.ಗಳವರೆಗೆ ಗಳಿಸಬಹುದು. ಈ ರೀತಿ ಹಣ ಗಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಯಾವುದೇ ವ್ಯಕ್ತಿಯು ಬಹಳ ಸುಲಭವಾಗಿ ಲಕ್ಷ ಲಕ್ಷ ಹಣ ಗಳಿಸಬಹುದು.

ಹಳೆಯ ನಾಣ್ಯಗಳಿಗೆ ಬೇಡಿಕೆ

ಹಳೆ ನಾಣ್ಯಗಳಿಗೆ ಲಕ್ಷಗಟ್ಟಲೆ ಹಣ(Indian Currency) ಸಿಗುತ್ತದೆ ಎನ್ನುವ ಸುದ್ದಿಯನ್ನು ನೀವು ಆಗಾಗ ಓದಿರಬಹುದು. ಇವುಗಳನ್ನು ಯಾರು ಖರೀದಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವೊಬ್ಬರಿಗೆ ಹಳೆಯ ಮತ್ತು ವಿಶೇಷ ಸಂಖ್ಯೆ ಹೊಂದಿರುವ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಹಳೆಯ ನಾಣ್ಯಗಳಿಗೆ ಲಕ್ಷಾಂತರ ಹಣ ನೀಡುವ ಜನರು ಇದ್ದಾರೆ. ಹೀಗಾಗಿ ಪ್ರಾಚೀನ ಹಾಗೂ ವಿಶೇಷ ನಾಣ್ಯ(Old Coin)ಗಳು ನಿಮ್ಮ ಬಳಿ ಇದ್ದರೆ ನೀವು ಕೂಡ ಲಕ್ಷ ಲಕ್ಷ ಹಣ ಜೇಬಿಗಿಳಿಸಬಹುದು.

ಇದನ್ನೂ ಓದಿ: Jio Vs Airtel Vs VI: 500 ರೂ.ಗಿಂತ ಕಡಿಮೆ ಬೆಲೆಗೆ ಯಾವ ರಿಚಾರ್ಜ್ ಪ್ಲಾನ್ ಉತ್ತಮವಾಗಿದೆ ತಿಳಿಯಿರಿ

1 ನಾಣ್ಯಕ್ಕೆ 5 ಲಕ್ಷ ದೊರೆಯಲಿದೆ

ವಾಸ್ತವವಾಗಿ 5 ರೂ. ಮುಖಬೆಲೆಯ ಈ ನಾಣ್ಯ(5 Rupee Coin) ನಿಮ್ಮ ಬಳಿ ಇದ್ದರೆ 5 ಲಕ್ಷ ರೂ. ಸಿಗುತ್ತದೆ. ಇದು ಸಾಮಾನ್ಯ ನಾಣ್ಯವಲ್ಲ, ಇದು ಪುರಾತನ ನಾಣ್ಯವಾಗಿದೆ. ಇದನ್ನು ಆಹಾರ ಮತ್ತು ಕೃಷಿ ಸಂಸ್ಥೆಯ 70ನೇ ವಾರ್ಷಿಕೋತ್ಸವದಂದು ಬಿಡುಗಡೆ ಮಾಡಲಾಯಿತು. ಹಳೆ ವಸ್ತುಗಳ ಬಗ್ಗೆ ಒಲವಿರುವವರು ಈ ನಾಣ್ಯವನ್ನು ಹುಡುಕುತ್ತಲೇ ಇರುತ್ತಾರೆ. ನೀವು ಅದನ್ನು ಆನ್‌ಲೈನ್ ನಲ್ಲಿ ಹರಾಜಿಗೆ ಹಾಕಬಹುದು.

5 ರೂ. ನಾಣ್ಯವನ್ನು ಹೀಗೆ ಮಾರಾಟ ಮಾಡಿ

ಕೇಂದ್ರ ಸರ್ಕಾರದ ಆಹಾರ ಮತ್ತು ಕೃಷಿ ಸಂಸ್ಥೆಯ ಲೋಗೋ ಹೊಂದಿರುವ ಈ ವಿಷೇಷ ನಾಣ್ಯ ನಿಮ್ಮ ಬಳಿ ಇದ್ದರೆ ಸುಲಭವಾಗಿ 5 ಲಕ್ಷ ರೂ.ವರೆಗೆ ಸಂಪಾದಿಸಬಹುದು. ಈ 5 ರೂ. ನಾಣ್ಯವನ್ನು ನೀವು ಆನ್‌ಲೈನ್‌ ಜಾಹೀರಾತು ವೇದಿಕೆ Quikr ನಲ್ಲಿ ಮಾರಾಟ ಮಾಡಬಹುದು. ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.

ಇದನ್ನೂ ಓದಿ: Tax Saving Tips : ಹೆಚ್ಚಿನ ತೆರಿಗೆ ಉಳಿತಾಯಕ್ಕಾಗಿ ಈ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿ!

ಈ ಅಪರೂಪದ ನಾಣ್ಯ(Old Coin)ವನ್ನು ಮಾರಾಟ ಮಾಡಲು ನೀವು ಮೊದಲು ನಿಮ್ಮನ್ನು Quikrನಲ್ಲಿ ಅಧಿಕೃತ ಸೆಲ್ಲರ್ ಆಗಿ ನೋಂದಾಯಿಸಿಕೊಳ್ಳಬೇಕು. ಅದರ ನಂತರ ನಾಣ್ಯದ ಸರಿಯಾದ ಫೋಟೋವನ್ನು ಸೆರೆಹಿಡಿದು ಅಪ್‌ಲೋಡ್ ಮಾಡಬೇಕು. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು. ವೆಬ್‌ಸೈಟ್‌ನಲ್ಲಿ ನೀವು ಒದಗಿಸಿದ ಮಾಹಿತಿಯನ್ನು ಸರಿಯಾಗಿ ಒಮ್ಮೆ ಪರಿಶೀಲಿಸಿರಿ. ಖರೀದಿದಾರರೇ ನೇರವಾಗಿ ನಿಮ್ಮ ಸಂಪರ್ಕಿಸಿ ಈ ನಾಣ್ಯವನ್ನು ಖರೀದಿಸುತ್ತಾರೆ.

ಈ ಸೈಟ್‌ಗಳಲ್ಲಿಯೂ ನೀವು ಮಾರಾಟ ಮಾಡಬಹುದು

1. http://dir.indiamart.com/impact/old-coins.html
2. https://in.pinterest.com/080841052o/sell-old-coins/
3. http:www.indiancurrencies.com

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News