Employee Pension Scheme: ಕನಿಷ್ಠ ಪಿಂಚಣಿ ರೂ.9000ಕ್ಕೆ ಏರಿಕೆ! ಸೆಪ್ಟೆಂಬರ್ 6ಕ್ಕೆ EPFO ಮಂಡಳಿ ಕೈಗೊಳ್ಳುವುದೇ ಈ ನಿರ್ಧಾರ?

Employee Pension Scheme: ದೇಶಾದ್ಯಂತ ಇರುವ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. 2018 ರಿಂದ ನಿರಂತರವಾಗಿ ನೌಕರರು ಮಾಡುತ್ತಿರುವ ಬೇಡಿಕೆಯ ಹಿನ್ನೆಲೆ EPFO ಮಂಡಳಿ ತನ್ನ ಸಭೆಯಲ್ಲಿ ಕನಿಷ್ಠ ಪಿಂಚಣಿನನ್ನು ಪ್ರಮುಖ ಅಜೆಂಡಾ ಆಗಿಸಿದೆ.

Written by - Nitin Tabib | Last Updated : Aug 27, 2021, 02:04 PM IST
  • ಸೆಪ್ಟೆಂಬರ್ 6ರಂದು ನಡೆಯಲಿದೆ EPFO ಮಂಡಳಿಯ ಸಭೆ.
  • ನೌಕರರ ಕನಿಷ್ಠ ಪಿಂಚಣಿ ಮೊತ್ತ ಏರಿಕೆಯಾಗುತ್ತದೆಯಾ:
  • ವಿಸ್ತೃತ ಮಾಹಿತಿಗಾಗಿ ಈ ವರದಿಯನ್ನೊಮ್ಮೆ ಓದಿ.
Employee Pension Scheme: ಕನಿಷ್ಠ ಪಿಂಚಣಿ ರೂ.9000ಕ್ಕೆ ಏರಿಕೆ! ಸೆಪ್ಟೆಂಬರ್ 6ಕ್ಕೆ EPFO ಮಂಡಳಿ ಕೈಗೊಳ್ಳುವುದೇ ಈ ನಿರ್ಧಾರ? title=
Employee Pension Scheme (File Photo)

Employee Pension Scheme - ಪಿಂಚಣಿಗೆ ಸಂಬಂಧಿಸಿದಂತೆ ಇತ್ತೀಚಿನ  ದಿನಗಳಲ್ಲಿ ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ. ಒಂದೆಡೆ, ಉದ್ಯೋಗಿಗಳ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ, ಕನಿಷ್ಠ ಪಿಂಚಣಿ ಕುರಿತು ಚರ್ಚೆ ತೀವ್ರಗೊಂಡಿದೆ. ಇಪಿಎಫ್‌ಒನ ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಪಡೆಯಬೇಕಾದ ಕನಿಷ್ಠ ಪಿಂಚಣಿಯ ಕುರಿತು ಸೆಪ್ಟೆಂಬರ್ 6 ರಂದು ಒಂದು ಪ್ರಮುಖ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಹೌದು, ಇಪಿಎಫ್‌ಒ ಮಂಡಳಿ ಸಭೆ ಸೆಪ್ಟೆಂಬರ್ 6 ರಂದು ನಡೆಯಲಿದೆ. ಕನಿಷ್ಠ ಪಿಂಚಣಿ  ವಿಷಯವನ್ನು ಮಂಡಳಿಯ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ.

ಕನಿಷ್ಠ ಪಿಂಚಣಿಯನ್ನು ರೂ.9000 ಮಾಡಲು ಬೇಡಿಕೆ
ದೀರ್ಘ ಕಾಲದಿಂದ ಕನಿಷ್ಠ ಪಿಂಚಣಿಯ ಮೊತ್ತವನ್ನು 1000 ರೂಪಾಯಿಗಳಿಂದ ಹೆಚ್ಚಿಸುವ ಬೇಡಿಕೆ ಇದೆ. ಸೆಪ್ಟೆಂಬರ್ 6 ರಂದು ಹೊಸ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಮಾರ್ಚ್ ನಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯು ಕನಿಷ್ಠ ಪಿಂಚಣಿ ಮೊತ್ತವನ್ನು 1000 ದಿಂದ 3000 ಕ್ಕೆ ಏರಿಸಲು ಶಿಫಾರಸು ಮಾಡಿತ್ತು. ಆದರೆ, ಪಿಂಚಣಿದಾರರು ಪಿಂಚಣಿ ಮೊತ್ತವು ತುಂಬಾ ಕಡಿಮೆಯಾಗಿದೆ, ಅದನ್ನು ಕನಿಷ್ಠ 9000 ರೂ.ಗೆ ಹೆಚ್ಚಿಸಬೇಕು. ಆಗ ಮಾತ್ರ ಇಪಿಎಸ್ 95 ಪಿಂಚಣಿದಾರರಿಗೆ ನಿಜವಾದ ಅರ್ಥದಲ್ಲಿ ಲಾಭ ಸಿಗುತ್ತದೆ ಎಂದಿದ್ದರು.

EPFO ಮಂಡಳಿಯ ಸದಸ್ಯರಾಗಿರುವ  ಮತ್ತು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ  ವಿರ್ಜೇಶ್ ಉಪಾಧ್ಯಾಯ ಪ್ರಕಾರ, 5 ರಾಜ್ಯಗಳ ಹೈಕೋರ್ಟ್ ಪಿಂಚಣಿಯನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿವೆ. ಇದರ ಸೀಲಿಂಗ್‌ಗೆ ಸಂಬಂಧಿಸಿದ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಸೀಲಿಂಗ್ ಅನ್ನು ತೆಗೆದುಹಾಕಿದರೆ, ಅದರ ಲಾಭವು ಪಿಂಚಣಿಯಲ್ಲಿ ಸಿಗುತ್ತದೆ. ಆದರೆ, ನಿವೃತ್ತಿಯ ಮೊದಲು ಉದ್ಯೋಗಿಯ (EPS) ಕೊನೆಯ ವೇತನಕ್ಕೆ ಅನುಗುಣವಾಗಿ ಪಿಂಚಣಿಯನ್ನು ನಿಗದಿಪಡಿಸಬೇಕು ಎಂಬ ಬೇಡಿಕೆ ಇದೆ ಎಂದಿದ್ದಾರೆ. ಇನ್ನೊಂದೆಡೆ ಕೇಂದ್ರ ಕಾರ್ಮಿಕ ಸಚಿವಾಲಯವು ಈ ಕುರಿತಂತ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದೆ. ಆದರೆ ಇದೀಗ ಮತ್ತೊಮ್ಮೆ ಸೆಪ್ಟೆಂಬರ್ 6ರಂದು ನಡೆಯಬೇಕಿರುವ ಸಭೆಯಲ್ಲಿ ಈ ವಿಷಯವನ್ನು ಕಾರ್ಯಸೂಚಿಯಲ್ಲಿ ಇಡಲಾಗಿದೆ.

ಇದನ್ನೂ ಓದಿ-IRCTC ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ! ಈಗ ಈ ಕೆಲಸ ಮಾಡಿದರಷ್ಟೇ ಸೀಟ್ ರಿಸರ್ವೇಶನ್ ಸಾಧ್ಯ!

ಏನಿದು EPS 95 ಪೆನ್ಷನ್ ಸ್ಕೀಮ್ ?
EPFO ಅಡಿಯಲ್ಲಿ ಭವಿಷ್ಯ ನಿಧಿ ಪಡೆಯುವ ಎಲ್ಲಾ ಚಂದಾದಾರರಿಗೆ (EPF Subscribers) ಪಿಂಚಣಿ ಯೋಜನೆ -1995 ಇದೆ. ಇದರಲ್ಲಿ, ಸಂಘಟಿತ ವಲಯದ ಅಡಿಯಲ್ಲಿ ಕೆಲಸ ಮಾಡುವ ಜನರು 58 ವರ್ಷದ ನಂತರ ಪಿಂಚಣಿ ಪಡೆಯುತ್ತಾರೆ. ಇದಕ್ಕಾಗಿ, ಉದ್ಯೋಗಿಗೆ ಕನಿಷ್ಠ 10 ವರ್ಷಗಳವರೆಗೆ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಯೋಜನೆಯಡಿ, ಉದ್ಯೋಗದಾತರು ಉದ್ಯೋಗಿಯ ಹೆಸರಿನಲ್ಲಿ ಶೇಕಡಾ 12 ಮೊತ್ತವನ್ನು ಇಪಿಎಫ್‌ನಲ್ಲಿ ಠೇವಣಿ ಇಡುತ್ತಾರೆ. ಇದರಲ್ಲಿ ಶೇ. 8.33 ರಷ್ಟು ಮೊತ್ತವನ್ನು ಪಿಂಚಣಿಗೆ ವರ್ಗಾಯಿಸಲಾಗುತ್ತದೆ ಮತ್ತು ನಿವೃತ್ತಿಯ ನಂತರ, ಪಿಂಚಣಿ ಮೊತ್ತವನ್ನು ಪಿಂಚಣಿ ನಿಧಿಗೆ ಕೊಡುಗೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಅಡಿಯಲ್ಲಿ, ಕನಿಷ್ಠ 1000 ರೂಪಾಯಿ ಪಿಂಚಣಿ (Pension) ನೀಡಲಾಗುತ್ತದೆ. ವಿಧವಾ ಪಿಂಚಣಿ, ಮಕ್ಕಳ ಪಿಂಚಣಿ ಸೌಲಭ್ಯ ಯೋಜನೆಯಲ್ಲಿ ಲಭ್ಯವಿದೆ. 58 ವರ್ಷಗಳ ಸೇವಾವಧಿಗೆ ಮುನ್ನ ಉದ್ಯೋಗಿ ಮರಣ ಹೊಂದಿದರೆ, ಆತನ ಪತ್ನಿ ಮತ್ತು ಮಕ್ಕಳು ಪಿಂಚಣಿ ಪಡೆಯುತ್ತಾರೆ.

ಇದನ್ನೂ ಓದಿ-UIDAI Aadhaar Alert: ನಿಮ್ಮ ಆಧಾರ್‌ಗೆ ಎಷ್ಟು ಫೋನ್ ನಂಬರ್‌ಗಳನ್ನು ಲಿಂಕ್ ಮಾಡಲಾಗಿದೆ ಗೊತ್ತೇ!

ಸರ್ಕಾರದ ಬಳಿ ಫಂಡ್ ಇಲ್ಲ
ಪೆನ್ಷನ್ ಗೆ ಸಂಬಂಧಿಸಿದಂತೆ ಚರ್ಚೆಗಳು ತೀವ್ರಗೊಂಡಿದ್ದರು ಕೂಡ, ವಾಸ್ತವದಲ್ಲಿ ಸರ್ಕಾರದ ಬಳಿ ಪ್ರಸ್ತುತ ನಿಧಿಯ ಕೊರತೆ ಇದೆ. ಕೊವಿಡ್ ಮಹಾಮಾರಿ ಹಾಗೂ ಆರ್ಥಿಕ ಚಟುವಟಿಕೆಗಳು ನಿಂತುಹೋದ ಕಾರಣ ಸರ್ಕಾರದ ಖಜಾನೆ ಮೇಲೆ ವಿಪರೀತ ಒತ್ತಡ ಬಿದ್ದಿದೆ. ಈ ಮೊದಲು ಕೂಡ ಹೆಚ್ಚುವರಿ ಬಜೆಟ್ ಸಹಕಾರವಿಲ್ಲದೆ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವುದು ಕಷ್ಟದ ಸಂಗತಿ ಎಂದು ಹೇಳಲಾಗಿದೆ. ಹೀಗಾಗಿ ಈ ಬಾರಿಯೂ ಕೂಡ ಪಿಂಚಣಿದಾರರಿಗೆ (Pensioners) ನೆಮ್ಮದಿ ಮರೀಚಿಕೆಯಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Today Gold-Silver Price : ಚಿನ್ನದ ಬೆಲೆಯಲ್ಲಿ ಇಂದು 2,700 ರೂ.ಇಳಿಕೆ; ಬಂಗಾರ ಖರೀದಿಸುವ ಮುನ್ನ ನಿಮ್ಮ ನಗರದ ದರ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News