UIDAI Aadhaar Alert: ನಿಮ್ಮ ಆಧಾರ್‌ಗೆ ಎಷ್ಟು ಫೋನ್ ನಂಬರ್‌ಗಳನ್ನು ಲಿಂಕ್ ಮಾಡಲಾಗಿದೆ ಗೊತ್ತೇ!

UIDAI Aadhaar Alert: ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗುತ್ತಿದೆ ಎಂದು ನಿಮಗೆ ಅನಿಸುತ್ತದೆಯೇ? ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.

Written by - Yashaswini V | Last Updated : Aug 27, 2021, 11:27 AM IST
  • ಆಧಾರ್ ಅನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ಎಂಬ ಅನುಮಾನವೂ ಹಲವರನ್ನು ಕಾಡಬಹುದು?
  • ನಿಮ್ಮ ಆಧಾರ್‌ನೊಂದಿಗೆ ಎಷ್ಟು ಫೋನ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು
  • ನಿಮ್ಮ ಆಧಾರ್ ಜೊತೆಗೆ ಎಷ್ಟು ಸಿಮ್ ಲಿಂಕ್ ಆಗಿದೆ ಎಂದು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ
UIDAI Aadhaar Alert: ನಿಮ್ಮ ಆಧಾರ್‌ಗೆ ಎಷ್ಟು ಫೋನ್ ನಂಬರ್‌ಗಳನ್ನು ಲಿಂಕ್ ಮಾಡಲಾಗಿದೆ ಗೊತ್ತೇ! title=
Know how to check how many mobile numbers are linked with your Aadhar card

UIDAI Aadhaar Alert:  ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೊಸ ಸಿಮ್ ಪಡೆಯುವವರೆಗೆ ಎಲ್ಲೆಡೆ ಆಧಾರ್ ಕಾರ್ಡ್ ಅನ್ನು ಗುರುತಿನಂತೆ ಬಳಸಲಾಗುತ್ತದೆ. ಈ ಮಧ್ಯೆ ನಮ್ಮ ಆಧಾರ್ ಅನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ಎಂಬ ಅನುಮಾನವೂ ಹಲವರನ್ನು ಕಾಡಬಹುದು? ಇದು ನಿಮಗೂ ಚಿಂತೆ ತರುತ್ತಿದೆಯೇ? ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್‌ನೊಂದಿಗೆ ಎಷ್ಟು ಫೋನ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಸಣ್ಣ ಕೆಲಸ ಮಾಡಬೇಕು.

ಟೆಲಿಕಾಂ ಇಲಾಖೆಯು ಹೊಸ ಪೋರ್ಟಲ್ ಅನ್ನು ರಚಿಸಿದ್ದು, ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಆಧಾರ್ ಜೊತೆಗೆ ಎಷ್ಟು ಫೋನ್ ಸಂಖ್ಯೆಗಳನ್ನು ಲಿಂಕ್ (Aadhaar SIM Link) ಮಾಡಲಾಗಿದೆ ಎಂದು ತಿಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಬಳಸದ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿದ್ದರೆ , ನೀವು ಅದರ ಬಗ್ಗೆ ದೂರು ನೀಡಬಹುದು.

ಟೆಲಿಕಾಂ ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ಎಂಬ ಪೋರ್ಟಲ್ ಅನ್ನು ರಚಿಸಿದೆ. ಈ ಪೋರ್ಟಲ್ ಗೆ ಭೇಟಿ ನೀಡಲು ನೀವು ಈ ಲಿಂಕ್ tafcop.dgtelecom.gov.in. ಅನ್ನು ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ನೀಡಲಾಗಿದೆ ಎಂಬುದನ್ನು ಇಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು.

ಇದನ್ನೂ ಓದಿ- Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ

ನಿಮ್ಮ ಹೆಸರಿನಲ್ಲಿ ನೀಡಲಾಗಿರುವ ಯಾವುದೇ ಅಪರಿಚಿತ ಸಂಖ್ಯೆಯನ್ನು ಕೂಡ ನೀವು ಇಲ್ಲಿಂದ ನಿರ್ಬಂಧಿಸಬಹುದು. ಒಂದು ಆಧಾರ್‌ನಲ್ಲಿ (Aadhaar) ಕೇವಲ 9 ಸಿಮ್‌ಗಳನ್ನು ನೀಡಬಹುದು. ಈ ಸಂಖ್ಯೆ ಹೆಚ್ಚಿದ್ದರೆ, ಅದನ್ನು ಬಲ್ಕ್ ಸಿಮ್ ಅಥವಾ ಕಮರ್ಷಿಯಲ್ ಸಿಮ್ ವಿಭಾಗದಲ್ಲಿ ಇರಿಸಲಾಗುವುದು.

ನಿಮ್ಮ ಆಧಾರ್ ಜೊತೆಗೆ ಎಷ್ಟು ಸಿಮ್ ಲಿಂಕ್ ಆಗಿದೆ ಎಂದು ಪರಿಶೀಲಿಸುವುದು ಹೇಗೆ?
>> ನಿಮ್ಮ ಹೆಸರಿನಲ್ಲಿ ನೀಡಲಾದ ಎಲ್ಲಾ ಸಿಮ್‌ಗಳನ್ನು ಪರಿಶೀಲಿಸಲು, ನೀವು ಮೊದಲಿಗೆ TAFCOP ಪೋರ್ಟಲ್‌ಗೆ ಭೇಟಿ ನೀಡಬೇಕು.
>> ಅದರ ನಂತರ ನೀವು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕು.
>> ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ಒಟಿಪಿಯನ್ನು ಪಡೆಯುತ್ತೀರಿ, ಅದನ್ನು ನೀವು ಪೋರ್ಟಲ್‌ನಲ್ಲಿ ದೃಢೀಕರಿಸಬೇಕು.
>> ಇದರ ನಂತರ, ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಸಂಖ್ಯೆಗಳ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ.

ಇದನ್ನೂ ಓದಿ- Aadhaar Update: ಆಧಾರ್‌ನಲ್ಲಿ ವಿಳಾಸ ನವೀಕರಿಸಲು ಈ ಸೌಲಭ್ಯ ಸ್ಥಗಿತಗೊಳಿಸಿದ UIDAI

ಅಜ್ಞಾತ ಸಂಖ್ಯೆಗಳನ್ನು ನಿರ್ಬಂಧಿಸಬಹುದು:
ಈ ಪಟ್ಟಿಯಲ್ಲಿ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ಸಂಖ್ಯೆಯನ್ನು ನೀವು ನೋಡಿದರೆ, ನೀವು ಅದರ ಬಗ್ಗೆ ದೂರು ನೀಡಬಹುದು. ನಿಮ್ಮ ದೂರನ್ನು ತನಿಖೆ ಮಾಡಲಾಗುತ್ತದೆ. ನಿಮ್ಮ ದೂರು ಸರಿಯೆಂದು ಕಂಡುಬಂದಲ್ಲಿ, ಆ ಸಂಖ್ಯೆಯನ್ನು ಮುಚ್ಚಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News