ಪಡಿತರ ವಿತರಣೆಯ ನಿಯಮ ಬದಲಾಯಿಸಿದ ಸರ್ಕಾರ! ಪ್ರತಿ ತಿಂಗಳು ಉಚಿತವಾಗಿ ಸಿಗಲಿದೆ ವಿಶೇಷ ರೀತಿಯ ಅಕ್ಕಿ

Ration Card Latest Rules: ದೇಶಾದ್ಯಂತ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಉಚಿತ ಅಕ್ಕಿಯನ್ನು ನೀಡಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಲ್ಲಾ ರಾಜ್ಯಗಳ ಪಡಿತರ ವಿತರಣಾ ಕೇಂದ್ರಗಳಿಗೆ ಸಾರವರ್ಧಿತ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತಿದೆ.

Written by - Ranjitha R K | Last Updated : Mar 14, 2023, 02:00 PM IST
  • ಪಡಿತರ ವಿತರಣೆಯ ನಿಯಮ ಬದಲಾಯಿಸಿದ ಮೋದಿ ಸರ್ಕಾರ
  • ಅಪೌಷ್ಟಿಕತೆ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಪ್ಲಾನ್
  • ಪೌಷ್ಟಿಕಾಂಶದ ಅಂಶಗಳಿಂದ ಕೂಡಿದ ಅಕ್ಕಿ ವಿತರಣೆ
ಪಡಿತರ ವಿತರಣೆಯ ನಿಯಮ ಬದಲಾಯಿಸಿದ ಸರ್ಕಾರ! ಪ್ರತಿ ತಿಂಗಳು ಉಚಿತವಾಗಿ  ಸಿಗಲಿದೆ ವಿಶೇಷ ರೀತಿಯ ಅಕ್ಕಿ  title=

Ration Card Latest Rules : ಪಡಿತರ ವಿತರಣೆಯ ನಿಯಮವನ್ನು ಮೋದಿ ಸರ್ಕಾರ ಬದಲಾಯಿಸಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಕೇಂದ್ರ ಸರ್ಕಾರವು ದೇಶಾದ್ಯಂತ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಉಚಿತ ಅಕ್ಕಿಯನ್ನು ನೀಡಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಲ್ಲಾ ರಾಜ್ಯಗಳ ಪಡಿತರ ವಿತರಣಾ ಕೇಂದ್ರಗಳಿಗೆ ಸಾರವರ್ಧಿತ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತಿದೆ.

ಪೌಷ್ಟಿಕಾಂಶದ ಅಂಶಗಳಿಂದ  ಕೂಡಿದೆ ಈ ಅಕ್ಕಿ : 
ಸಾರವರ್ಧಿತ ಅಕ್ಕಿಯನ್ನು  ಸೇವಿಸುವ ಮೂಲಕ ವ್ಯಕ್ತಿಯು ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಅನ್ನು ಸಾಕಷ್ಟು ಪಡೆಯಲು ಸಾಧ್ಯವಾಗುತ್ತದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಅಕ್ಕಿಯು ಸಾಮಾನ್ಯ ಅಕ್ಕಿಯಂತೆಯೇ ರುಚಿಯನ್ನು ಹೊಂದಿರುತ್ತದೆ. ಈ ಅಕ್ಕಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.  

ಇದನ್ನೂ ಓದಿ : ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ನಿಮಗಾಗಿ ಇಲ್ಲಿದೆ ಬಿಗ್ ಅಪ್‌ಡೇಟ್

ಪ್ರತಿ ತಿಂಗಳು ಸಿಗುತ್ತದೆ ಉಚಿತ ಗೋಧಿ-ಅಕ್ಕಿ : 
ಮೋದಿ ಸರ್ಕಾರದ ಆಹಾರ ಭದ್ರತಾ ಯೋಜನೆಯಡಿ ಡಿಸೆಂಬರ್ 2023 ರವರೆಗೆ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಉಚಿತ ಗೋಧಿ ಮತ್ತು ಅಕ್ಕಿ ನೀಡುವ ಯೋಜನೆ ಇದೆ. ಇದರ ಅಡಿಯಲ್ಲಿ ಅರ್ಹ ಕುಟುಂಬಕ್ಕೆ ಪ್ರತಿ ತಿಂಗಳು ಮೂರು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿಯನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಅಂತ್ಯೋದಯ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಪಡಿತರ ಚೀಟಿಯಲ್ಲಿ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಈಗ ಸರಕಾರದಿಂದ ಪಡಿತರ ಚೀಟಿದಾರರಿಗೆ ನಿಗದಿತ ಪ್ರಮಾಣದ ಗೋಧಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ವಿತರಣೆಗಾಗಿ ಸಾರವರ್ಧಿತ ಅಕ್ಕಿ  ಲಭ್ಯವಿದೆ. ಸದ್ಯಕ್ಕೆ ಈ ಅಕ್ಕಿ ಲಭ್ಯವಿಲ್ಲದ ರಾಜ್ಯಗಳಲ್ಲಿ ಕೂಡಾ  ಶೀಘ್ರದಲ್ಲೇ ಈ ಅಕ್ಕಿಯ ವಿತರಣೆ ಆರಂಭವಾಗಲಿದೆ. 

ಇದನ್ನೂ ಓದಿ : 12,000 ದಷ್ಟು ಹೆಚ್ಚಾಗುವುದು ಸರ್ಕಾರಿ ನೌಕರರ ವೇತನ ! 24 ಗಂಟೆಯಲ್ಲಿ ನಿರ್ಧಾರ ಪ್ರಕಟ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News