ವೈಟಿಂಗ್ ನಲ್ಲಿರುವ ರೈಲು ಟಿಕೆಟ್ ಕಂಫರ್ಮ್ ಆಗುತ್ತದೆಯೇ ಇಲ್ಲವೇ ಸುಲಭವಾಗಿ ತಿಳಿದುಕೊಳ್ಳಿ

ಟಿಕೆಟ್ ಕಂಫರ್ಮ್ ಆಗುವ ಸಾಧ್ಯತೆಗಳು ಯಾವುವು ಎಂದು ಸುಲಭವಾಗಿ ಕಂಡುಹಿಡಿಯಬಹುದು. ವೈಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಕಂಫರ್ಮ್ ಆಗಿದೆಯೇ ಎಂದು ತಿಳಿಯಲು ಬೇಕಾಗಿರುವುದು  PNR ಸಂಖ್ಯೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.  

Written by - Ranjitha R K | Last Updated : Jun 21, 2022, 03:41 PM IST
  • ಭಾರತೀಯ ರೈಲ್ವೇ ನಮ್ಮ ದೇಶದ ಬೆನ್ನೆಲುಬು.
  • ಪ್ರತಿನಿತ್ಯ ಲಕ್ಷಗಟ್ಟಲೆ ಜನ ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ.
  • ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಆನ್‌ಲೈನ್ ಸೌಲಭ್ಯಗಳನ್ನು ಒದಗಿಸಿದೆ.
ವೈಟಿಂಗ್ ನಲ್ಲಿರುವ ರೈಲು ಟಿಕೆಟ್ ಕಂಫರ್ಮ್ ಆಗುತ್ತದೆಯೇ ಇಲ್ಲವೇ ಸುಲಭವಾಗಿ ತಿಳಿದುಕೊಳ್ಳಿ  title=
Indian railway rules (file photo)

ಬೆಂಗಳೂರು : ಭಾರತೀಯ ರೈಲ್ವೇ ನಮ್ಮ ದೇಶದ ಬೆನ್ನೆಲುಬು. ಪ್ರತಿನಿತ್ಯ ಲಕ್ಷಗಟ್ಟಲೆ ಜನ ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಸಾವಿರಾರು ರೈಲುಗಳಿದ್ದರೂ ಹಲವು ಬಾರಿ ಕನ್ಫರ್ಮ್‌ ಟಿಕೆಟ್‌ ಪಡೆಯುವುದು ಸಾಧ್ಯವಾಗುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಹಲವು ಆನ್‌ಲೈನ್ ಸೌಲಭ್ಯಗಳನ್ನು ಕೂಡಾ ಒದಗಿಸಿದೆ. ಭಾರತೀಯ ರೈಲ್ವೆ IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ ಮೂಲಕವೂ ಟಿಕೆಟ್ ಬುಕಿಂಗ್‌ ಮಾಡುವ ಸೌಲಭ್ಯವನ್ನು ಒದಗಿಸಿದೆ. 

ಬಹುತೇಕ ರೈಲ್ವೇ ಸೌಲಭ್ಯಗಳು ಆನ್‌ಲೈನ್‌ ಮೂಲಕ ಸಿಗುವ ಕಾರಣ,  ಪ್ರಯಾಣಿಕರು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗಿದೆ. ಈಗ IRCTC ತನ್ನ ಬಳಕೆದಾರರಿಗೆ ಒಂದು ತಿಂಗಳಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು ದ್ವಿಗುಣಗೊಳಿಸಿದೆ. ಈಗ IRCTC ID ಸಹಾಯದಿಂದ ಆಧಾರ್ ಲಿಂಕ್ ಮಾಡುವ ಮೂಲಕ ಒಂದು ತಿಂಗಳಲ್ಲಿ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ  ಟಿಕೆಟ್ ಸ್ಟೇಟಸ್ ಕೂಡಾ ಪರಿಶೀಲಿಸಬಹುದು.

ಇದನ್ನೂ ಓದಿ : Arecanut Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಎಷ್ಟಿದೆ ಗೊತ್ತಾ..?

ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗುತ್ತದೋ ಇಲ್ಲವೋ ತಿಳಿಯುವುದು ಹೇಗೆ ? :
ರೈಲು ಟಿಕೆಟ್ ಕಾಯ್ದಿರಿಸಿದ ಕೂಡಲೇ ಟಿಕೆಟ್ ಕನ್ಫರ್ಮ್ ಆಗಿದೆ ಎಂದರ್ಥವಲ್ಲ. ಟಿಕೆಟ್ ಕಂಫರ್ಮ್ ಆಗುವ ಸಾಧ್ಯತೆಗಳು ಯಾವುವು ಎಂದು ಸುಲಭವಾಗಿ ಕಂಡುಹಿಡಿಯಬಹುದು. ವೈಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಕಂಫರ್ಮ್ ಆಗಿದೆಯೇ ಎಂದು ತಿಳಿಯಲು ಬೇಕಾಗಿರುವುದು  PNR ಸಂಖ್ಯೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.

ಹಂತ ಹಂತದ ಪ್ರಕ್ರಿಯೆಯನ್ನು ತಿಳಿಯಿರಿ  :
1. ಇದಕ್ಕಾಗಿ ನೀವು ಮೊದಲು IRCTC ವೆಬ್‌ಸೈಟ್‌ಗೆ ಹೋಗಿ.
2. ಈಗ ನಿಮ್ಮ ಐಡಿ ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
3. ಈಗ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ, ಅದರ ಮೇಲೆ PNR ಸಂಖ್ಯೆಯನ್ನು ನಮೂದಿಸಿ ಮತ್ತು ಗೆಟ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ.
4. ಈಗ ಸ್ಕ್ರೋಲ್ ಮಾಡುವ ಮೂಲಕ ಕೆಳಗೆ ಬನ್ನಿ.
5. ಈಗ ಇಲ್ಲಿ Click Here to Get Confirmation Chance ಮೇಲೆ  ಕ್ಲಿಕ್ ಮಾಡಿ.
6. ಈಗ ನಿಮ್ಮ ಮುಂದೆ ಹೊಸ ಪಾಪ್-ಅಪ್ ವಿಂಡೋ ತೆರೆಯುತ್ತದೆ.
7. ಇದರಲ್ಲಿ ನಿಮ್ಮ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆಯನ್ನು ತಿಳಿಸಲಾಗುತ್ತದೆ. 

ಇದನ್ನೂ ಓದಿ : ಜುಲೈ 1 ರಿಂದ ಹೊಸ ಟಿಡಿಎಸ್ ನಿಯಮ ಅನ್ವಯ .! ಯಾರ ಮೇಲೆ ಏನು ಪರಿಣಾಮ ?

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News