Railway Ticket: ಇನ್ಮುಂದೆ ನಿಮ್ಮ ಊರಲ್ಲೇ ನಿಮಗೆ ಕನ್ಫರ್ಮ್ ರೇಲ್ವೆ ಟಿಕೆಟ್ ಸಿಗಲಿದೆ, ಸ್ಟೇಷನ್ಗೆ ಹೋಗುವ ಅವಶ್ಯಕತೆ ಇಲ್ಲ

Railway Ticket in Post Office: ಭಾರತೀಯ ರೇಲ್ವೆ ತನ್ನ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಹೌದು, ಇನ್ಮುಂದೆ ಹಳ್ಳಿಯಲ್ಲಿ ವಾಸಿಸುವ ಮತ್ತು ನಿಲ್ದಾಣದಿಂದ ತುಂಬಾ ದೂರ ವಾಸಿಸುವ ಜನರು ರೇಲ್ವೆ ಟಿಕೆಟ್ ಕಾಯ್ದಿರಿಸಲು ರೈಲು ನಿಲ್ದಾಣ ಅಥವಾ ಏಜೆಂಟರ ಬಳಿ ಭೇಟಿ ನೀಡುವ ಅವಶ್ಯಕತೆ ಇಲ್ಲ. ಹಾಗಾದರೆ ರೇಲ್ವೆ ಇಲಾಖೆಯ ಈ ಮಹತ್ವದ ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ  

Written by - Nitin Tabib | Last Updated : Jun 4, 2022, 04:02 PM IST
  • ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೇಲ್ವೆ ಹೊಸ ಟಿಕೆಟಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ
  • ಇನ್ಮುಂದೆ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಲು ನಿಲ್ದಾಣ ಅಥವಾ ಏಜೆಂಟ್‌ರ ಬಳಿ ಹೋಗಬೇಕಾಗಿಲ್ಲ
  • ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಇದರಿಂದ ಹೆಚ್ಚು ಲಾಭ
Railway Ticket: ಇನ್ಮುಂದೆ ನಿಮ್ಮ ಊರಲ್ಲೇ ನಿಮಗೆ ಕನ್ಫರ್ಮ್ ರೇಲ್ವೆ ಟಿಕೆಟ್ ಸಿಗಲಿದೆ, ಸ್ಟೇಷನ್ಗೆ ಹೋಗುವ ಅವಶ್ಯಕತೆ ಇಲ್ಲ  title=
Indian Railways Ticket Reservation

Railway Ticket in Post Office: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೇಲ್ವೆ ಹೊಸ ಟಿಕೆಟಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಹೌದು, ಇನ್ಮುಂದೆ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಲು ನಿಲ್ದಾಣ ಅಥವಾ ಏಜೆಂಟ್‌ರ ಬಳಿ ಹೋಗಬೇಕಾಗಿಲ್ಲ. ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಈ ನಿರ್ಧಾರ ಕೈಗೊಂಡಿದೆ. ದೇಶದಾದ್ಯಂತ 45,000 ಅಂಚೆ ಕಛೇರಿಗಳಲ್ಲಿ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ವ್ಯವಸ್ಥೆ ಮಾಡಿದೆ.

ರೈಲ್ವೆ  ಸಚಿವರಿಂದ ಘೋಷಣೆ
ಇತ್ತೀಚೆಗೆ ಖಜುರಾಹೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ. ಇನ್ಮುಂದೆ ರೈಲು ಟಿಕೆಟ್ ಕಾಯ್ದಿರಿಸಲು ಯಾವುದೇ ತೊಂದರೆ ಎದುರಾಗುವುದಿಲ್ಲ ರೈಲ್ವೆ ಸಚಿವರು ಹೇಳಿದ್ದಾರೆ. ಇದಕ್ಕಾಗಿ ದೇಶಾದ್ಯಂತ 45,000 ಅಂಚೆ ಕಚೇರಿಗಳಲ್ಲಿ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೇ ಅಂಚೆ ಕಛೇರಿಗಳ ಮೂಲಕ ಟಿಕೆಟ್ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದರು. ಇನ್ನೊಂದೆಡೆ ಖಜುರಾಹೊ ಮತ್ತು ದೆಹಲಿ ನಡುವಿನ ವಂದೇ ಭಾರತ್ ರೈಲಿನ ನವೀಕರಣದ ಕುರಿತು ಮಾಹಿತಿ ನೀಡಿದ್ದ ರೈಲ್ವೆ ಸಚಿವರು, ಈ ಮಾರ್ಗದ ವಿದ್ಯುದ್ದೀಕರಣ ಕಾರ್ಯವನ್ನು ಆಗಸ್ಟ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದಿದ್ದರು. ಅಂದರೆ, ಆಗಸ್ಟ್ ವರೆಗೆ ವಂದೇ ಭಾರತ್ ರೈಲು ಕೂಡ ಸಂಚಾರ ಆರಂಭಿಸಲಿದ್ದು. ಮಧ್ಯಪ್ರದೇಶವು ವಂದೇ ಭಾರತ್ ರೈಲಿನ ಉಡುಗೊರೆಯನ್ನು ಪಡೆಯಲಿದೆ ಎಂದಿದರು, ಇದಕ್ಕಾಗಿ ಅಂಚೆ ಕಚೇರಿಯಿಂದಲೇ ಟಿಕೆಟ್ ಕಾಯ್ದಿರಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು.

ಇದನ್ನೂ ಓದಿ-PM Kisan : ಕೇಂದ್ರ ಸರ್ಕಾರದ ಈ ಘೋಷಣೆಯಿಂದ ಎಲ್ಲಾ ರೈತರಿಗೂ ಆಗಲಿದೆ ಲಾಭ

ಗ್ರಾಮೀಣ ಪ್ರದೇಶದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಸೇವೆಯನ್ನು ಪ್ರಾರಂಭಿಸಲಾಗಿದೆ
ರೈಲು ಕಾಯ್ದಿರಿಸುವಿಕೆಗಾಗಿ ಜನರು ಅಲೆದಾಡುವ ಅಗತ್ಯವಿಲ್ಲ ಮತ್ತು ನಿಲ್ದಾಣದಿಂದ ದೂರದಲ್ಲಿರುವ ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅಂಚೆ ಕಚೇರಿಗಳಲ್ಲಿ ರೈಲು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಅಂಚೆ ಕಛೇರಿಗಳಲ್ಲಿ ರೈಲ್ವೇ ಟಿಕೆಟ್ ಕಾಯ್ದಿರಿಸುವ ಕೆಲಸವನ್ನು ತರಬೇತಿ ಪಡೆದ ಅಂಚೆ ಕಚೇರಿ ಸಿಬ್ಬಂದಿ ನಡೆಸಿಕೊಡಲಿದ್ದಾರೆ. ಇದಕ್ಕಾಗಿ ನೆಟ್‌ವರ್ಕ್ ಸಂಪರ್ಕವಿರುವ ಹಾರ್ಡ್‌ವೇರ್ ಅನ್ನು ರೈಲ್ವೇಸ್ ಅಂಚೆ ಕಚೇರಿಗಳಿಗೆ ಒದಗಿಸಿದೆ. ಈ ಯೋಜನೆಯಿಂದ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಜನರು ತಮ್ಮ ರೈಳುಗಲಿಗಾಗಿ ಹತ್ತಿರದ ಅಂಚೆ ಕಚೇರಿಗಳಿಂದ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಪಡೆಯಲಿದ್ದಾರೆ. ಪ್ರಸ್ತುತ ಅಂಚೆ ಕಚೇರಿಗಳಲ್ಲಿ ರೈಲ್ವೇ ಒದಗಿಸುತ್ತಿರುವ ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆಯ ಸೌಲಭ್ಯದ ಲಾಭವನ್ನು ನಾಗರಿಗಳು ಪಡೆದುಕೊಳ್ಳಬೇಕು ಎಂದು ರೇಲ್ವೆ ವಿಭಾಗ ವಿನಂತಿಸಿದೆ.

ಇದನ್ನೂ ಓದಿ-ಪ್ರತಿ ಕುಟುಂಬಕ್ಕೆ ವಾರ್ಷಿಕ 3 ಎಲ್‌ಪಿಜಿ ಸಿಲಿಂಡರ್‌ ಉಚಿತ.! ಈ ಸರ್ಕಾರದ ಮಹತ್ವದ ಘೋಷಣೆ

ಇ-ಟಿಕೆಟಿಂಗ್‌ನ ಹೊಸ ಸೌಲಭ್ಯವೂ ಪ್ರಾರಂಭವಾಗಿದೆ
ಈ ಹಿಂದೆ, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೇ ಇ-ಟಿಕೆಟಿಂಗ್‌ನ ಹೊಸ ಸೌಲಭ್ಯವನ್ನು ಒದಗಿಸಿತ್ತು ಇದರ ಅಡಿಯಲ್ಲಿ, ರೈಲ್ವೆ ಪ್ರಯಾಣಿಕರು ಇದೀಗ ಪ್ರಯಾಣದ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಮಾಸಿಕ ಪಾಸ್‌ಗಳ ನವೀಕರಣಕ್ಕಾಗಿ ಡಿಜಿಟಲ್ ಪಾವತಿಗಳನ್ನು ಆಟೋಮ್ಯಾಟಿಕ್ ವೆಂಡಿಂಗ್ ಮಷೀನ್ ಗಳ ಸಹಾಯದಿಂದ ಮತ್ತು Paytm, PhonePe, Freecharge ನಂತಹ UPI ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳಿಂದ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಮಾಡಲು ಸಾಧ್ಯವಾಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News