ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ! ಈ ಬಾರಿ ಅವಧಿಗೂ ಮುನ್ನವೇ ನಿರ್ಧಾರ ಪ್ರಕಟ

ಕೊರೊನಾ ಅವಧಿಯಲ್ಲಿ ಖಾತೆಗೆ ಬೀಳದೆ ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ ಮಾಡಬಹುದು ಎನ್ನಲಾಗಿದೆ. ಇನ್ನು ಈ ಬಾರಿ ಅವಧಿಗಿಂತ ಮುನ್ನವೇ ಡಿಎ ಏರಿಕೆ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

Written by - Ranjitha R K | Last Updated : Dec 29, 2023, 02:22 PM IST
  • ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಏರಿಕೆ
  • ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ
  • ಅವಧಿಗಿಂತ ಮುನ್ನವೇ ಡಿಎ ಏರಿಕೆ
ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ! ಈ ಬಾರಿ ಅವಧಿಗೂ ಮುನ್ನವೇ ನಿರ್ಧಾರ ಪ್ರಕಟ  title=

ಬೆಂಗಳೂರು : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಪಟ್ಟ ಈ ಘೋಷಣೆ ಯಾವುದೇ ಸಮಯದಲ್ಲಿಯೂ ಪ್ರಕಟವಾಗಬಹುದು. ಮೋದಿ ಸರ್ಕಾರ  ಈ  ದೊಡ್ಡ ಘೋಷಣೆಯನ್ನು ಇನ್ನು ಕೆಲವೇ ದಿನಗಳಲ್ಲಿ ಮಾಡಬಹುದು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎಯಲ್ಲಿನ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲಿಯೇ ಘೋಷಣೆ ಮಾಡಲಿದೆ. 

ಈ ಬಾರಿ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಕೊರೊನಾ ಅವಧಿಯಲ್ಲಿ ಖಾತೆಗೆ ಬೀಳದೆ ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ ಮಾಡಬಹುದು ಎನ್ನಲಾಗಿದೆ. ಇನ್ನು ಈ ಬಾರಿ ಅವಧಿಗಿಂತ ಮುನ್ನವೇ ಡಿಎ ಏರಿಕೆ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.  

ಇದನ್ನೂ ಓದಿ : UPI Enabled QR ಬಳಸಿ ಎನ್‌ಪಿ‌ಎಸ್ ಪೇಮೆಂಟ್ ಮಾಡುವುದರಿಂದ ಸಿಗುವ ಐದು ಪ್ರಮುಖ ಪ್ರಯೋಜನಗಳಿವು

2024 ರಲ್ಲಿ ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಣೆ ಮಾಡಲಿದೆ. ಈ ಮೂಲಕ ನೌಕರರ ವರ್ಗವನ್ನು ಓಲೈಸುವ ಪ್ರಯತ್ನದಲ್ಲಿದೆ ಸರ್ಕಾರ. ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 

ನೌಕರರ ಡಿಎಯಲ್ಲಿ ಎಷ್ಟು ಹೆಚ್ಚಳವಾಗಲಿದೆ ? : 
ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಒಂದು ವೇಳೆ ತುಟ್ಟಿಭತ್ಯೆ ಶೇ 4 ರಷ್ಟು ಏರಿಕೆಯಾದರೆ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ. ಹಾಗಾಗಿ ಕೇಂದ್ರ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. 

ಇದನ್ನೂ ಓದಿ : Today Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಚೇತರಿಕೆ

ಸದ್ಯ ನೌಕರರಿಗೆ ಶೇ.46 ರಷ್ಟು ಡಿಎ ಸೌಲಭ್ಯ ಸಿಗುತ್ತಿದೆ. ಡಿಎ ಹೆಚ್ಚಳದ ಲಾಭ ಸುಮಾರು 1 ಕೋಟಿ ಕುಟುಂಬಗಳಿಗೆ ದೊರೆಯಲಿದೆ. ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. 

ಖಾತೆ ಸೇರಲಿದೆ 18 ತಿಂಗಳ ಬಾಕಿ ಡಿಎ :  
ಕರೋನ ಸಮಯದಲ್ಲಿ ತಡೆ ಹಿಡಿಯಲಾಗಿರುವ 18 ತಿಂಗಳ ಬಾಕಿ ಡಿಎ ಹಣವನ್ನು ಕೂಡಾ ಈ ಬಾರಿ ನೌಕರರ ಖಾತೆಗೆ ಜಮಾ ಮಾಡಬಹುದು ಎನ್ನಲಾಗಿದೆ. ಇದಾದ ಬಳಿಕ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಭಾರೀ ಮೊತ್ತ ಜಮೆಯಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ವರದಿಯೊಂದರ ಪ್ರಕಾರ, ಕೇಂದ್ರ ನೌಕರರ ಖಾತೆಗೆ ಸುಮಾರು 2 ಲಕ್ಷ 18 ಸಾವಿರ ರೂ.ಗಳಷ್ಟು ಹಣ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News