Railway Station Shop Tender: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು?

Railway Station Shop Tender: ತಮ್ಮದೇ ಆದ ಸ್ವಂತ  ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಸಾಕಷ್ಟು ಅವಕಾಶಗಳಿವೆ. ರೈಲು ನಿಲ್ದಾಣದಲ್ಲಿ ಶಾಪ್ ತೆರೆಯುವುದು ಕೂಡ ಲಾಭದಾಯಕ ವ್ಯವಹಾರವೇ. ನೀವೂ ಕೂಡ ರೈಲ್ವೇ ಸ್ಟೇಷನ್ ಶಾಪ್ ಟೆಂಡರ್ ಪಡೆಯಲು ಬಯಸಿದರೆ ಇಲ್ಲಿದೆ ಪ್ರಮುಖ ಮಾಹಿತಿ ಹಾಗೂ ಸಂಪೂರ್ಣ ಪ್ರಕ್ರಿಯೆ. 

Written by - Yashaswini V | Last Updated : May 22, 2024, 07:54 AM IST
  • ತನ್ನ ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ನವೀಕರಿಸುವ ಭಾರತೀಯ ರೈಲ್ವೇ
  • ಭಾರತೀಯ ರೈಲ್ವೇಯು ರೈಲು ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.
  • ಇದು ವೈಟಿಂಗ್ ರೂಂನಿಂದ ಹಿಡಿದು ಹೈಟೆಕ್ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.
Railway Station Shop Tender: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು?  title=

Railway Station Shop Tender: ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕ ರೈಲುಗಳನ್ನು ಸಂಚರಿಸುವ ಭಾರತೀಯ ರೈಲ್ವೆಯು (Indian Railways) ಇಡೀ ವಿಶ್ವದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಸುಮಾರು 7,349 ರೈಲು ನಿಲ್ದಾಣಗಳಿದ್ದು (Railway Station), ನಿತ್ಯ ಎರಡು ಕೋಟಿಗೂ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ನಿಲ್ದಾಣಗಳಲ್ಲಿ ಸ್ಟಾಲ್ (Stall at railway stations) ತೆರೆಯುವುದರಿಂದ ಸಾವಿರಾರು ರೂಪಾಯಿ ಗಳಿಸಬಹುದು. 

ಹೌದು, ನೀವು ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ ರೈಲು ನಿಲ್ದಾಣಗಳಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆಗೆಯುವ ಬಗ್ಗೆ ಯೋಚಿಸಬಹುದು. ಈ ಮೂಲಕ ಸ್ಥಿರ ಆದಾಯವನ್ನು ಕೂಡ ಗಳಿಸಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ರೈಲು ನಿಲ್ದಾಣದಲ್ಲಿ ನಿಮ್ಮ ಸ್ಟಾಲ್ (Stall at railway stations) ತೆರೆಯಲು ಯೋಚಿಸುತ್ತಿದ್ದರೆ ಅದರ ಟೆಂಡರ್ ಪಡೆಯುವುದು ಹೇಗೆ? ಅಂಗಡಿಗೆ ಎಷ್ಟು ಬಾಡಿಗೆ ಪಾವತಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ. 

ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯುವುದು ಹೇಗೆ? 
ತನ್ನ ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ನವೀಕರಿಸುವ ಭಾರತೀಯ ರೈಲ್ವೇಯು (Indian Railways) ರೈಲು ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ವೈಟಿಂಗ್ ರೂಂನಿಂದ ಹಿಡಿದು ಹೈಟೆಕ್ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಅಂತೆಯೇ, ರೈಲ್ವೇ ನಿಲ್ದಾಣಗಳಲ್ಲಿ ಸ್ಟಾಲ್ ತೆರೆಯಲು ಕಾಲಕಾಲಕ್ಕೆ ಟೆಂಡರ್‌ಗಳನ್ನು ಕರೆಯಲಾಗುತ್ತದೆ. ಟೆಂಡರ್‌ಗಳನ್ನು ಪಡೆಯುವ ಮೂಲಕ ನೀವು ರೈಲು ನಿಲ್ದಾಣಗಳಲ್ಲಿ ಸುಲಭವಾಗಿ ಅಂಗಡಿಯನ್ನು ತೆರೆಯಬಹುದು. 

ಇದನ್ನೂ ಓದಿ- ಎಟಿಎಂನಿಂದ ಹಣ ವಿತ್ ಡ್ರಾ ಅಷ್ಟೇ ಅಲ್ಲ, ಈ ಕೆಲಸಗಳನ್ನೂ ಮಾಡಬಹುದು

ಟೆಂಡರ್ ಪಡೆಯುವುದು ಹೇಗೆ? 
ನೀವು ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬಯಸಿದರೆ ಇದಕ್ಕಾಗಿ ಐ‌ಆರ್‌ಸಿ‌ಟಿ‌ಸಿಯ  (IRCTC) ಕಾರ್ಪೊರೇಟ್ ಪೋರ್ಟಲ್‌ನಲ್ಲಿ ಸಕ್ರಿಯ ಟೆಂಡರ್ ಬಗ್ಗೆ ಪರಿಶೀಲಿಸಬಹುದು. ಅಷ್ಟೇ ಅಲ್ಲದೆ, ವಿವಿಧ ವಲಯಗಳ ರೈಲ್ವೆಗಳು ತಮ್ಮ ಪೋರ್ಟಲ್‌ನಲ್ಲಿ ಟೆಂಡರ್‌ಗಳ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಲೇ ಇರುತ್ತವೆ. 

ಗಮನಾರ್ಹವಾಗಿ, ರೈಲು ನಿಲ್ದಾಣದಲ್ಲಿ  ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಪ್ರತಿ ಅಂಗಡಿಯನ್ನು ತೆರೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.  ಇದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕು. 

ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ತಗಲುವ ವೆಚ್ಚ: 
ನೀವು ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ (Stall Tender at Railway Station) ಪಡೆಯುವಾಗ 40 ಸಾವಿರದಿಂದ 3 ಲಕ್ಷ ರೂ.ವರೆಗೆ ಠೇವಣಿ ಇಡಬೇಕಾಗಬಹುದು. ಅಂಗಡಿಯ ಸ್ಥಳ ಮತ್ತು ಗಾತ್ರವನ್ನು ಅವಲಂಬಿಸಿ ಈ ಶುಲ್ಕವು ಬದಲಾಗಬಹುದು ಎಂಬುದು ಗಮನಿಸಬೇಕಾದ ವಿಷಯವಾಗಿದೆ. 

ಇದನ್ನೂ ಓದಿ- PM Kisan ಇ-ಕೆವೈಸಿ ಪೂರ್ಣಗೊಳಿಸುವಾಗ ನೆನಪಿರಲಿ ಈ ವಿಷಯಗಳು, ಇಲ್ಲದಿದ್ರೆ ಸಿಗಲ್ಲ 17ನೇ ಕಂತು

ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ಟೆಂಡರ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? 
ನೀವು ರೈಲು ನಿಲ್ದಾಣದಲ್ಲಿ ಅಂಗಡಿ ತೆರೆಯಲು ಅಂಗಡಿಗಾಗಿ ಸ್ಥಳಾವಕಾಶ ಪಡೆಯುವುದು ಬಹಳ ಮುಖ್ಯ. ಇದಕ್ಕಾಗಿ ಆಗಾಗ್ಗೆ, ಐ‌ಆರ್‌ಸಿ‌ಟಿ‌ಸಿಯ ಕಾರ್ಪೊರೇಟ್ ವೆಬ್‌ಸೈಟ್ ಮತ್ತು ವಲಯದ ಅಧಿಕೃತ ವೆಬ್‌ಸೈಟ್ ಪರಿಶೀಲಿಸುತ್ತಿರಬೇಕು. ಇದರಲ್ಲಿ ರೈಲ್ವೇ ಇಲಾಖೆಯು ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚುಕೊಳ್ಳುತ್ತಿರುತ್ತದೆ. 

ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬೇಕಾಗುವ ಪ್ರಮುಖ ದಾಖಲೆಗಳು: 
ನೀವು ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿಯಂತಹ ಪ್ರಮುಖ ದಾಖಲೆಗಳನ್ನು ಹೊಂದಿರುವುದು ಅವಶ್ಯಕ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News