ಪೋಸ್ಟ್ ಆಫೀಸ್‌ನ ಈ ಸೂಪರ್‌ಹಿಟ್ ಯೋಜನೆಯಲ್ಲಿ ಗ್ಯಾರಂಟಿ ಬಡ್ಡಿಯಷ್ಟೇಯಲ್ಲ, ಈ ಸೌಲಭ್ಯವೂ ಸಿಗುತ್ತೆ

Saving Schemes: ಪೋಸ್ಟ್ ಆಫೀಸ್‌ ಹಲವು ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಬಡ್ಡಿ ಮಾತ್ರವಲ್ಲ ಹಲವು ಇತರ ಪ್ರಯೋಜನಗಳು ಕೂಡ ಲಭ್ಯವಿವೆ. 

Written by - Yashaswini V | Last Updated : Feb 9, 2024, 12:16 PM IST
  • ಪೋಸ್ಟ್ ಆಫೀಸ್ ಸೂಪರ್ಹಿಟ್ ಯೋಜನೆ
  • ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಠೇವಣಿ ಮಿತಿ ಇಲ್ಲ.
  • ಇದನ್ನು 3 ವರ್ಷಗಳ ನಂತರ ಅಕಾಲಿಕವಾಗಿ ಮುಚ್ಚಬಹುದು.
ಪೋಸ್ಟ್ ಆಫೀಸ್‌ನ ಈ ಸೂಪರ್‌ಹಿಟ್ ಯೋಜನೆಯಲ್ಲಿ ಗ್ಯಾರಂಟಿ ಬಡ್ಡಿಯಷ್ಟೇಯಲ್ಲ, ಈ ಸೌಲಭ್ಯವೂ ಸಿಗುತ್ತೆ  title=

Post Office RD Scheme: ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಅಗತ್ಯವಿದ್ದಾಗ ಹಣಕಾಸಿನ ನೆರವನ್ನು ಒದಗಿಸುತ್ತವೆ. ಭಾರತೀಯ ಅಂಚೆ ಕಚೇರಿಯು ಗ್ರಾಹಕರಿಗೆ ಅನುಕೂಲವಾಗುವಂತಹ ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆ. ಅಂತಹ ಸಾಮಾನ್ಯ ಸಣ್ಣ ಉಳಿತಾಯದ ಸುರಕ್ಷಿತ ಯೋಜನೆಗಳಲ್ಲಿ ಪೋಸ್ಟ್ ಆಫೀಸ್‌ನ ಮರುಕಳಿಸುವ ಠೇವಣಿ (RD)ಯೂ ಒಂದು. 

ಅಂಚೆ ಕಚೇರಿಯ ಯಾವುದೇ ಶಾಖೆಯಲ್ಲಿ ಗ್ರಾಹಕರು  ಮರುಕಳಿಸುವ ಠೇವಣಿ (RD) ಖಾತೆಯನ್ನು ತೆರೆಯಬಹುದು.  ಇದರಲ್ಲಿ, ನೀವು ಪ್ರತಿ ತಿಂಗಳು ನಿಗದಿತ ದಿನಾಂಕದಂದು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕು. ಪ್ರಸ್ತುತ, ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ 6.7 ಪ್ರತಿಶತ ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ. ಪೋಸ್ಟ್ ಆಫೀಸ್ ಆರ್‌ಡಿ ಖಾತೆಯಲ್ಲಿ ಖಾತರಿಯ ಬಡ್ಡಿ ಲಭ್ಯವಿರುತ್ತದೆ. ಅಷ್ಟೇ ಅಲ್ಲ, ಅಗತ್ಯಕ್ಕೆ ಅನುಗುಣವಾಗಿ ಈ ಆರ್‌ಡಿ ಖಾತೆಯಲ್ಲಿ ನೀವು ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. 

ಪೋಸ್ಟ್ ಆಫೀಸ್‌ನಲ್ಲಿ ಕನಿಷ್ಠ ಮಾಸಿಕ 100 ರೂ.ಗಳೊಂದಿಗೆ ಆರ್‌ಡಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ಗರಿಷ್ಠ ಠೇವಣಿಗೆ ಯಾವುದೇ ಮಿತಿ ಇರುವುದಿಲ್ಲ. ಆರ್‌ಡಿ ಖಾತೆಯನ್ನು ತೆರೆದ ಮೂರು ವರ್ಷಗಳ ಬಳಿಕ ಅಗತ್ಯವಿದ್ದರೆ ನೀವು ಆಕಾಲಿಕವಾಗಿ ಇದನ್ನು ಮುಚ್ಚಬಹುದು. ಅಷ್ಟೇ ಅಲ್ಲ, ಇದಲ್ಲದೇ, ಮೆಚ್ಯೂರಿಟಿಯ ನಂತರ ಖಾತೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸುವ ಸೌಲಭ್ಯ ಕೂಡ ಇದರಲ್ಲಿ ಲಭ್ಯವಿದೆ. 

ಇದನ್ನೂ ಓದಿ- ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಈ 7 ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಯಾವಾಗ ಸಾಲ ಸೌಲಭ್ಯವನ್ನು ಪಡೆಯಬಹುದು? 
ಪೋಸ್ಟ್ ಆಫೀಸ್ ವೆಬ್‌ಸೈಟ್ ಪ್ರಕಾರ, ಆರ್‌ಡಿ ಖಾತೆಯಲ್ಲಿ 12 ಕಂತುಗಳನ್ನು ಠೇವಣಿ ಮಾಡಿದ್ದರೆ, ಅರ್ಥಾತ್ ನೀವು ಒಂದು ವರ್ಷ ಆರ್‌ಡಿ ಖಾತೆಯಲ್ಲಿ ಹಣ ಜಮಾ ಮಾಡಿದ್ದು, ಇನ್ನೂ ಕೂಡ ನಿಮ್ಮ ಆರ್‌ಡಿ ಕಾರ್ಯನಿರ್ವಹಿಸುತ್ತಿದ್ದಾರೆ ಖಾತೆದಾರರು ತಮ್ಮ ಆರ್‌ಡಿ ಠೇವಣಿ ಮೊತ್ತದ ಮೇಲೆ ಸಾಲವನ್ನು ಪಡೆಯಬಹುದು. ನಿಯಮಗಳ ಪ್ರಕಾರ, ಆರ್‌ಡಿಯಲ್ಲಿನ ಬಾಕಿ ಮೊತ್ತದ 50% ನಷ್ಟು ಹಣವನ್ನು ನೀವು ಸಾಲವಾಗಿ ಪಡೆಯಬಹುದು. ಈ ಸಾಲವನ್ನು  ಒಟ್ಟು ಮೊತ್ತದಲ್ಲಿ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ. 

ಪೋಸ್ಟ್ ಆಫೀಸ್ ಆರ್‌ಡಿ ಸಾಲದ ಬಡ್ಡಿದರ: 
ಬ್ಯಾಂಕ್‌ಗಳ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಪೋಸ್ಟ್ ಆಫೀಸ್ ಆರ್‌ಡಿ ಮೇಲಿನ ಮೇಲೆ ತೆಗೆದುಕೊಳ್ಳುವ ಸಾಲದ ಬಡ್ಡಿದರ ಕಡಿಮೆಯೇ ಇದೆ.  ನಿಯಮಗಳ ಪ್ರಕಾರ,  ಆರ್‌ಡಿ ಖಾತೆಯಲ್ಲಿನ ಸಾಲದ ಮೇಲಿನ ಬಡ್ಡಿಯು ಆರ್‌ಡಿ ಖಾತೆಯಲ್ಲಿನ ಠೇವಣಿಗಳ ಮೇಲಿನ ಬಡ್ಡಿ ದರಕ್ಕಿಂತ 2 ಶೇಕಡಾ ಹೆಚ್ಚು. ಪ್ರಸ್ತುತ, ಪೋಸ್ಟ್ ಆಫೀಸ್ ಆರ್‌ಡಿ ಮೇಲಿನ ವಾರ್ಷಿಕ ಬಡ್ಡಿ ದರವು ಶೇಕಡಾ 6.7 ರಷ್ಟಿದೆ, ಅಂದರೆ ಸಾಲವನ್ನು ತೆಗೆದುಕೊಂಡರೆ, ಸಾಲದ ಮೇಲಿನ ಬಡ್ಡಿ ದರವು ಶೇಕಡಾ 8.7 ರಷ್ಟಿರುತ್ತದೆ. 

ಇದನ್ನೂ ಓದಿ- 18 ತಿಂಗಳ ಬಾಕಿ ಡಿಎ ಬಗ್ಗೆ ಗುಡ್ ನ್ಯೂಸ್ ! ಚುನಾವಣೆಗೂ ಮುನ್ನ ಸರ್ಕಾರಿ ನೌಕರರಿಗೆ ಬಂಪರ್ 

ಆರ್‌ಡಿ ವಿರುದ್ಧ ಸಾಲದ ಸಂದರ್ಭದಲ್ಲಿ, ಸಾಲದ ಮೊತ್ತವನ್ನು ವಿತರಿಸಿದ ದಿನಾಂಕದಿಂದ ಸಾಲ ಮರುಪಾವತಿಯ ದಿನಾಂಕದವರೆಗೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಆರ್‌ಡಿಯ ಮುಕ್ತಾಯದ ಅವಧಿಯು 5 ವರ್ಷಗಳು. ಮೆಚ್ಯೂರಿಟಿ ಅವಧಿ ಮುಗಿಯುವವರೆಗೆ ಸಾಲವನ್ನು ಮರುಪಾವತಿ ಮಾಡದಿದ್ದರೆ, ಸಾಲ ಮತ್ತು ಬಡ್ಡಿಯನ್ನು ಆರ್‌ಡಿ ಖಾತೆಯ ಮೆಚುರಿಟಿ ಮೌಲ್ಯದಿಂದ ಕಡಿತಗೊಳಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News