KFC in Ayodhya: ಅಯೋಧ್ಯೆಯಲ್ಲಿ ಕೆಎಫ್‌ಸಿ ಜಿಲ್ಲಾಡಳಿತ ಹೇಳಿದ್ದೇನು?

Ayodhya District Administration response to KFC: ವಿಶ್ವವಿಖ್ಯಾತ ಫ್ರೈಡ್ ಚಿಕನ್‌ಗೆ ಹೆಸರುವಾಸಿಯಾಗಿರುವ ಕೆಎಫ್‌ಸಿ ಅಯೋಧ್ಯೆಯಲ್ಲಿ ತನ್ನ ಮಳಿಗೆ ತೆರೆಯುವ ಬಗ್ಗೆ ಉತ್ಸುಕವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಯೋಧ್ಯೆ ಜಿಲ್ಲಾಡಳಿತ  ಹೇಳಿದ್ದೇನು ಗೊತ್ತಾ? 

Written by - Yashaswini V | Last Updated : Feb 8, 2024, 10:27 AM IST
  • ರಾಮ ಮಂದಿರದ ಸುತ್ತಲಿನ 15 ಕಿಮೀ ಪ್ರದೇಶದ ಪಂಚ ಕೋಸಿ ಮಾರ್ಗದೊಂದಿಗೆ ಅಯೋಧ್ಯಾ ಆಡಳಿತವು ಮಾಂಸಾಹಾರಿ ಉತ್ಪನ್ನಗಳ ಮಾರಾಟ ಅಥವಾ ಖರೀದಿಯನ್ನು ನಿಷೇಧಿಸಿದೆ. ಈ ಪ್ರದೇಶದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಹ ನಿಷೇಧಿಸಲಾಗಿದೆ.
KFC in Ayodhya: ಅಯೋಧ್ಯೆಯಲ್ಲಿ ಕೆಎಫ್‌ಸಿ ಜಿಲ್ಲಾಡಳಿತ ಹೇಳಿದ್ದೇನು?  title=

Details of KFC opening in Ayodhya: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಮಳಿಗೆಗಳನ್ನು ತೆರೆಯಲು ಬಹಳ ಉತ್ಸಾಹವನ್ನು ತೋರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ಅಯೋಧ್ಯೆಯಲ್ಲಿ ಜಿಲ್ಲಾಡಳಿತ ಕೆಎಫ್‌ಸಿಯನ್ನು ಸ್ವಾಗತಿಸಲು ಸಿದ್ಧವಾಗಿದೆ, ಆದರೆ ಅದು ಸಸ್ಯಾಹಾರಿ ಆಹಾರಗಳನ್ನಷ್ಟೇ ಮಾರಾಟ ಮಾಡಬೇಕು.  "ಕೆಎಫ್‌ಸಿಯು ಸಸ್ಯಾಹಾರಿ ಆಹಾರಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದರೆ  ನಾವು ಜಾಗವನ್ನು ಒದಗಿಸಲು ಸಿದ್ಧರಿದ್ದೇವೆ" ಎಂದು ತಿಳಿಸಿದೆ. 

ಅಯೋಧ್ಯೆಯಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಸರ್ಕಾರ ಅನುಮತಿಸದ ಕಾರಣ ಕೆಎಫ್‌ಸಿ ಅಯೋಧ್ಯೆ-ಲಖನೌ ಹೆದ್ದಾರಿಯಲ್ಲಿ ತನ್ನ ಘಟಕವನ್ನು ಸ್ಥಾಪಿಸಿದೆ. ಈ ಕುರಿತಂತೆ ಮಾತನಾಡಿರುವ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್, ಅಮೆರಿಕದ ಫಾಸ್ಟ್ ಫುಡ್ ದೈತ್ಯವು ಪಟ್ಟಣದಲ್ಲಿ ತನ್ನ ಮಳಿಗೆಗಳನ್ನು ತೆರೆದಿರುವುದು ಸ್ವಾಗತಾರ್ಹ. ಆದರೆ ಮಾಂಸ, ಮೀನು ಮತ್ತು ಇತರ ಮಾಂಸಾಹಾರಿ ವಸ್ತುಗಳ ಮಾರಾಟ ಮತ್ತು ಸೇವನೆಯ ನಿರ್ಬಂಧಿತ ವಲಯದಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ಮಾರಾಟ ಮಾಡಬಹುದು ಎಂದು ಹೇಳಿದರು. ವಿಶ್ವವಿಖ್ಯಾತ ಫ್ರೈಡ್ ಚಿಕನ್‌ಗೆ ಹೆಸರುವಾಸಿಯಾಗಿರುವ ಕೆಎಫ್‌ಸಿ, ನಿರ್ಬಂಧಿತ ವಲಯದಿಂದ ಹೊರಗೆ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ- Bharat Rice: ಭಾರತ್ ರೈಸ್ ಹೆಸರಿನಲ್ಲಿ 29 ರೂ./ಕೆಜಿ ಅಕ್ಕಿ ಪರಿಚಯಿಸಿದ ಕೇಂದ್ರ ಸರ್ಕಾರ! ಎಲ್ಲಿ ಖರೀದಿಸಬೇಕು?

ಕೆಎಫ್‌ಸಿ ಮತ್ತು ಇತರ ಎಲ್ಲರಿಗೂ ಅಯೋಧ್ಯೆಯಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಸ್ವಾಗತವಿದೆ. ಆದರೆ ಅವರು ಮಾಂಸಾಹಾರಿ ಉತ್ಪನ್ನಗಳು ಮತ್ತು ಮದ್ಯದ ಮಾರಾಟ ಮತ್ತು ಸೇವನೆಯ ಮೇಲೆ ನಿಷೇಧವಿರುವ ನಿರ್ಬಂಧಿತ ವಲಯದಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಲು ನಿರ್ಧರಿಸಿದರೆ ಈ ಸ್ಥಳಗಳಲ್ಲಿ ಸಸ್ಯಾಹಾರಿ ಆಹಾರಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ. 

ರಾಮ ಮಂದಿರದ ಸುತ್ತಲಿನ 15 ಕಿಮೀ ಪ್ರದೇಶದ ಪಂಚ ಕೋಸಿ ಮಾರ್ಗದೊಂದಿಗೆ ಅಯೋಧ್ಯಾ ಆಡಳಿತವು ಮಾಂಸಾಹಾರಿ ಉತ್ಪನ್ನಗಳ ಮಾರಾಟ ಅಥವಾ ಖರೀದಿಯನ್ನು ನಿಷೇಧಿಸಿದೆ. ಈ ಪ್ರದೇಶದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಹ ನಿಷೇಧಿಸಲಾಗಿದೆ.

ಇದನ್ನೂ ಓದಿ- Public Provident Fund: ನಿಮ್ಮ ಪಿ‌ಪಿ‌ಎಫ್ ಅಕೌಂಟ್ ಬಂದ್ ಆಗಿದ್ಯಾ? ಅದನ್ನು ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುಲಭ ವಿಧಾನ

ಗಮನಾರ್ಹವಾಗಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕಳೆದ ತಿಂಗಳು ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನವೇ ಅಯೋಧ್ಯೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ನಿಷೇಧ ಹೇರಿದೆ. ಅಯೋಧ್ಯೆ ರಾಮಮಂದಿರದ 15 ಕಿಲೋಮೀಟರ್ ವಲಯದ ಹೊರಗೆ ಅಂತಹ ಯಾವುದೇ ನಿರ್ಬಂಧವು ಅನ್ವಯಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News