ಈ ದಿನ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 14 ನೇ ಕಂತು ! ಸರ್ಕಾರದಿಂದ ಹೊರ ಬಿತ್ತು ಮಾಹಿತಿ

PM Kisan 14th Installment Date: ಈಗಾಗಲೇ ಪಿಎಂ ಕಿಸಾನ್‌ ಯೋಜನೆಯ 13 ನೇ ಕಂತು ರೈತರ ಖಾತೆ ಸೇರಿದೆ. ಇದೀಗ ದೇಶದ ಕೋಟ್ಯಂತರ ರೈತರು, ರ 14 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.   

Written by - Ranjitha R K | Last Updated : May 11, 2023, 11:09 AM IST
  • ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಮುಖ ಯೋಜನೆಯೇ ಪಿಎಂ ಕಿಸಾನ್.
  • ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ನೀಡುತ್ತದೆ.
  • ಮೂರು ಕಂತುಗಳಲ್ಲಿ ಖಾತೆ ಸೇರುತ್ತದೆ 6 ಸಾವಿರ ರೂಪಾಯಿ
ಈ ದಿನ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 14 ನೇ ಕಂತು ! ಸರ್ಕಾರದಿಂದ ಹೊರ ಬಿತ್ತು ಮಾಹಿತಿ  title=

PM Kisan 14th Installment Date : ರೈತರನ್ನು ಆರ್ಥಿಕ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಮುಖ ಯೋಜನೆಯೇ ಪಿಎಂ ಕಿಸಾನ್.  ಈ ಯೋಜನೆಯಡಿ ಸರ್ಕಾರವು ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ನೀಡುತ್ತದೆ. ಈ ಹಣವನ್ನು  ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.  ಈಗಾಗಲೇ ಪಿಎಂ ಕಿಸಾನ್‌ ಯೋಜನೆಯ 13 ನೇ ಕಂತು ರೈತರ ಖಾತೆ ಸೇರಿದೆ. ಇದೀಗ ದೇಶದ ಕೋಟ್ಯಂತರ ರೈತರು, 14 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. 

 ಮೂರು ಕಂತುಗಳಲ್ಲಿ ಖಾತೆ ಸೇರುತ್ತದೆ 6 ಸಾವಿರ ರೂಪಾಯಿ : 
ಪಿಎಂ ಕಿಸಾನ್ ಯೋಜನೆಯಡಿ ವರ್ಷದಲ್ಲಿ ಮೂರು ಕಂತುಗಳಲ್ಲಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ. ಹೊಸ ಆರ್ಥಿಕ ವರ್ಷದ ಮೊದಲ ಕಂತನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಸಾಮಾನ್ಯವಾಗಿ, ಆರ್ಥಿಕ ವರ್ಷದ ಮೊದಲ ಕಂತನ್ನು ಏಪ್ರಿಲ್ ನಿಂದ ಜುಲೈ ನಡುವೆ ನೀಡಲಾಗುತ್ತದೆ. ಎರಡನೆಯ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಮತ್ತು ಮೂರನೆಯ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ರೈತರಿಗೆ ಸಿಗುತ್ತದೆ. ಒಂದು ವೇಳೆ ರೈತರು  ತಮ್ಮ ಖಾತೆಯನ್ನು DBT ಅಥವಾ NPCI ಗೆ ಲಿಂಕ್ ಮಾಡದಿದ್ದರೆ, ಸಾಧ್ಯವಾದಷ್ಟು ಬೇಗ  ಆ ಕೆಲಸವನ್ನು ಮಾಡಿ ಮುಗಿಸಿ. 

ಇದನ್ನೂ ಓದಿ : Adani Hindenburg Case: ಅದಾನಿ ಸಮೂಹಕ್ಕೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮಾರಿಷಸ್ ಮಂತ್ರಿ, ಹಿಂಡೆನ್ಬರ್ಗ್ ಆರೋಪಗಳು ಆಧಾರರಹಿತ!

ಜೂನ್ ಗಿಂತ ಮುನ್ನ ಖಾತೆ ಸೇರುವುದು ಹಣ : 
ಸರ್ಕಾರದಿಂದ ಬಿಡುಗಡೆಯಾಗಲಿರುವ ಪಿಎಂ ಕಿಸಾನ್‌ನ 14 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಈ ಬಾರಿ 14 ನೇ ಕಂತು ಏಪ್ರಿಲ್ 2023 ಮತ್ತು ಜುಲೈ 2023 ರ ನಡುವೆ ಬಿಡುಗಡೆಯಾಗಲಿದೆ. ಈ ಕಂತು ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕೃಷಿ ಸಚಿವಾಲಯದ ಮೂಲಗಳು ಹೇಳಿಕೊಂಡಿವೆ. 13 ನೇ ಕಂತು ಕೂಡಾ ಫೆಬ್ರವರಿ 26 2023 ರಂದು ಬಿಡುಗಡೆಯಾಯಿತು. ಪಿಎಂ ಕಿಸಾನ್ ಪ್ರಯೋಜನವನ್ನು ಪಡೆಯಬೇಕಾದರೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ.  

ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ ? : 
- ಮೊದಲನೆಯದಾಗಿ PM ಕಿಸಾನ್‌ನ ಪೋರ್ಟಲ್‌ಗೆ ಹೋಗಿ.
- ಇಲ್ಲಿ 'ಫಾರ್ಮರ್ಸ್ ಕಾರ್ನರ್' ಅಡಿಯಲ್ಲಿ 'ಬೆನೆಫಿಶಿಯರಿ ಲಿಸ್ಟ್' ಮೇಲೆ  ಕ್ಲಿಕ್ ಮಾಡಿ.
-ಈಗ ರಾಜ್ಯ, ಜಿಲ್ಲೆ, ತಹಸಿಲ್, ಬ್ಲಾಕ್, ಗ್ರಾಮವನ್ನು ಆಯ್ಕೆಮಾಡಿ.
- ವರದಿಯನ್ನು ಪಡೆಯಲು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ : Nissan Magnite: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯ ಮತ್ತು ಮೈಲೇಜ್ ಹೊಂದಿರುವ SUV!

eKYC ಆನ್‌ಲೈನ್ ಅನ್ನು ಹೇಗೆ ನವೀಕರಿಸುವುದು ? :
- ಇದಕ್ಕಾಗಿ PM-KISAN ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಇಲ್ಲಿ ಬಲಭಾಗದಲ್ಲಿ ನೀಡಿರುವ EKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ,  SEARCH ಮೇಲೆ ಕ್ಲಿಕ್ ಮಾಡಿ.
- ಈಗ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಬಂದಿರುವ OTPಯನ್ನು ಒದಗಿಸಿದ ಜಾಗದಲ್ಲಿ ನಮೂದಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News