Nissan Magnite: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯ ಮತ್ತು ಮೈಲೇಜ್ ಹೊಂದಿರುವ SUV!

6 ಲಕ್ಷ ರೂ.ದೊಳಗಿನ SUV: 6 ಲಕ್ಷ ರೂ.ದೊಳಗಿನ ಶ್ರೇಣಿಯ SUVಗಳ ಬಹಳ ಸೀಮಿತ ಆಯ್ಕೆಗಳು ಮಾರುಕಟ್ಟೆಯಲ್ಲಿವೆ. ಈ ಜನಪ್ರಿಯ ಆಯ್ಕೆಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಒಂದಾಗಿದೆ. ಮೇ ತಿಂಗಳಲ್ಲಿ ಈ ಕಾರಿನ ಮೇಲೆ 57 ಸಾವಿರ ರೂ.ವರೆಗೆ ರಿಯಾಯಿತಿ ಲಭ್ಯವಿದೆ.

Written by - Puttaraj K Alur | Last Updated : May 10, 2023, 09:04 PM IST
  • ಮೇ ತಿಂಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ SUV ಭಾರೀ ರಿಯಾಯಿತಿಯಲ್ಲಿ ಮಾರಾಟ
  • ರೂಪಾಂತರ ಅವಲಂಬಿಸಿ ಮ್ಯಾಗ್ನೈಟ್ ಖರೀದಿ ಮೇಲೆ 57 ಸಾವಿರ ರೂ.ವರೆಗೆ ಡಿಸ್ಕೌಂಟ್
  • ರೂಪಾಂತರ ಅವಲಂಬಿಸಿ ಬಿಡಿಭಾಗಗಳ ಮೇಲೆ 20 ಸಾವಿರ ರೂ.ವರೆಗೆ ನಗದು ರಿಯಾಯಿತಿ
Nissan Magnite: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯ ಮತ್ತು ಮೈಲೇಜ್ ಹೊಂದಿರುವ SUV! title=
57 ಸಾವಿರ ರೂ.ವರೆಗೆ ಡಿಸ್ಕೌಂಟ್!

ನವದೆಹಲಿ: ಭಾರತದಲ್ಲಿ ಬಹುತೇಕ ಗ್ರಾಹಕರು ಕೈಗೆಟುಕುವ SUV ಬಗ್ಗೆ ಒಲವು ಹೊಂದಿರುತ್ತಾರೆ. ಮಾರುಕಟ್ಟೆಯಲ್ಲಿ 6 ಲಕ್ಷ ರೂ. ಶ್ರೇಣಿಯ SUVಗಳ ಸೀಮಿತ ಆಯ್ಕೆಗಳು ಲಭ್ಯವಿವೆ. ಈ ಜನಪ್ರಿಯ ಆಯ್ಕೆಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕೂಡ ಒಂದಾಗಿದೆ. ವಿಶೇಷವೆಂದರೆ ಮೇ ತಿಂಗಳಲ್ಲಿ ಈ SUV ಭಾರೀ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ರೂಪಾಂತರ ಅವಲಂಬಿಸಿ ಮ್ಯಾಗ್ನೈಟ್ ಖರೀದಿ ಮೇಲೆ 57 ಸಾವಿರ ರೂ.ವರೆಗೆ ರಿಯಾಯಿತಿ ಪಡೆಯಬಹುದು.

ನಿಸ್ಸಾನ್ ಮ್ಯಾಗ್ನೈಟ್‌ನ ಮೂಲ ರೂಪಾಂತರವು XE ಆಗಿದೆ, ಇದರ ಬೆಲೆ 6 ಲಕ್ಷ ರೂ. ಇದೆ. ಇದರ ಟಾಪ್-ಎಂಡ್ XV ಟರ್ಬೊ ಪ್ರೀಮಿಯಂ (O) ಡ್ಯುಯಲ್ ಟೋನ್ ಮಾದರಿಗೆ 10.94 ಲಕ್ಷ ರೂ. (ಎಕ್ಸ್ ಶೋ ರೂಂ) ಆಗುತ್ತದೆ. ಸುರಕ್ಷತೆಗಾಗಿ ISOFIX ಚೈಲ್ಡ್ ಸೀಟ್ ಆಂಕಾರೇಜ್, 360-ಡಿಗ್ರಿ ಕ್ಯಾಮೆರಾ, ಆಂಟಿ-ಥೆಫ್ಟ್ ಅಲಾರ್ಮ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ಈ ಟಾಪ್ ವೇರಿಯಂಟ್ ಹೊಂದಿದೆ. ಇದು ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ XUV300 ಜೊತೆಗೆ ಟಾಟಾ ಪಂಚ್ ಮತ್ತು ರೆನಾಲ್ಟ್ ಕಿಗರ್‍ಗೆ ಸ್ಪರ್ಧೆ ಒಡ್ಡಲಿದೆ.  

ಇದನ್ನೂ ಓದಿ: Adani-Hindenburg ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಗೆ ವರದಿ ಸಲ್ಲಿಕೆ, ಮೇ 12 ಕ್ಕೆ ವಿಚಾರಣೆ

ಆಫರ್ ಏನಿದೆ?: ಮ್ಯಾಗ್ನೈಟ್‌ನಲ್ಲಿ ಮೇ ತಿಂಗಳಿಗೆ ಲಭ್ಯವಿರುವ ಕೊಡುಗೆಗಳು ನಗದು ರಿಯಾಯಿತಿ, ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್ ಮತ್ತು ಲಾಯಲ್ಟಿ ಬೋನಸ್‌ಗಳನ್ನು ಒಳಗೊಂಡಿವೆ. ನಿಸ್ಸಾನ್ ಫೈನಾನ್ಸ್ ಮೂಲಕ ತೆಗೆದುಕೊಂಡಾಗ ಕಂಪನಿಯು ಗೋಲ್ಡ್ ಸರ್ವಿಸ್ ಪ್ಯಾಕ್ ಮತ್ತು ವಿಶೇಷ ಫೈನಾನ್ಸ್ ಅನ್ನು ವಾರ್ಷಿಕ ಶೇ.6.99ರಷ್ಟು ಬಡ್ಡಿ ದರದಲ್ಲಿ ನೀಡುತ್ತಿದೆ. XE ಹೊರತುಪಡಿಸಿ ಮ್ಯಾಗ್ನೈಟ್‌ನ ಎಲ್ಲಾ ರೂಪಾಂತರಗಳಲ್ಲಿ ಗ್ರಾಹಕರು 18 ಸಾವಿರ ರೂ. ವಿನಿಮಯ ಬೋನಸ್ ಪಡೆಯಬಹುದು.

ರೂಪಾಂತರ ಅವಲಂಬಿಸಿ ಬಿಡಿಭಾಗಗಳ ಮೇಲೆ 20 ಸಾವಿರ ರೂ.ವರೆಗೆ ನಗದು ರಿಯಾಯಿತಿ ಲಭ್ಯವಿದೆ. XE ಹೊರತುಪಡಿಸಿ ಎಲ್ಲಾ ರೂಪಾಂತರಗಳ ಮೇಲೆ 7 ಸಾವಿರ ರೂ.ನ ಕಾರ್ಪೊರೇಟ್ ರಿಯಾಯಿತಿ ಪಡೆಯಬಹುದು. NRI ಕುಟುಂಬಗಳು, ರೈತರು ಮತ್ತು ವೈದ್ಯರಿಗೆ 7,000 ರೂ.ವರೆಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಆದರೆ ಇದಕ್ಕಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳ ಜೊತೆಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Share Market Update: ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಹುಮ್ಮಸ್ಸು, 18300 ಗಡಿ ದಾಟಿದ ನಿಫ್ಟಿ

ಅದ್ಭುತ ವೈಶಿಷ್ಟ್ಯಗಳು

ಈ ಕಾರಿನಲ್ಲಿ 7 ಇಂಚಿನ TFT ಸ್ಕ್ರೀನ್, ಆಂಬಿಯೆಂಟ್ ಮೂಡ್ ಲೈಟಿಂಗ್, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸ್ಮಾರ್ಟ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಕಳೆದ ತಿಂಗಳು ಇದು 2,617 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯು ಈಗ ಎಕ್ಸ್-ಟ್ರಯಲ್ SUV ಸೇರಿ ಹಲವು ಹೊಸ ಮಾದರಿಗಳನ್ನು ಭಾರತೀಯ ಪೋರ್ಟ್‌ಫೋಲಿಯೊಗೆ ತರಲು ತಯಾರಿ ನಡೆಸುತ್ತಿದೆ. ಸದ್ಯದಲ್ಲಿಯೇ ದೇಶದಲ್ಲಿ ಬಿಡುಗಡೆಯಾಗಲಿರುವ ಇತರ ಮಾದರಿಗಳೆಂದರೆ ಕಶ್ಕೈ ಮತ್ತು ಜೂಕ್ SUVಗಳಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News