ಯಾವಾಗ ಇಳಿಕೆಯಾಗಲಿದೆ Petrol-Diesel? ವಿತ್ತ ಸಚಿವರ ಪ್ಲಾನ್ ಏನು?

Petrol-Diesel GST: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದು, ಹಾಗೆ ಮಾಡುವುದರಿಂದ ಬೆಲೆಗಳು ಕಡಿಮೆಯಾಗುತ್ತವೆ, ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಹೇಳಿದ್ದಾರೆ.

Written by - Yashaswini V | Last Updated : Feb 22, 2021, 11:05 AM IST
  • ಪೆಟ್ರೋಲಿಯಂ ಅನ್ನು ಜಿಎಸ್‌ಟಿಯ ವ್ಯಾಪ್ತಿಯಲ್ಲಿ ಪರಿಗಣಿಸಬೇಕು
  • ತೆರಿಗೆಯಲ್ಲಿನ ಏಕರೂಪತೆಯು ನ್ಯೂನತೆಗಳನ್ನು ತೆಗೆದುಹಾಕುತ್ತದೆ
  • ಕೇಂದ್ರ-ರಾಜ್ಯ ಸರ್ಕಾರಗಳು ಇದರ ಬಗ್ಗೆ ಮಾತನಾಡಬೇಕಾಗುತ್ತದೆ
ಯಾವಾಗ ಇಳಿಕೆಯಾಗಲಿದೆ Petrol-Diesel? ವಿತ್ತ ಸಚಿವರ ಪ್ಲಾನ್ ಏನು? title=
Finance Minister said Petrol-Diesel prices may decrease

Petrol-Diesel Latest News: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಕಂಡು ಬರುತ್ತಿರುವ ಏರಿಕೆಯು ಸಾರ್ವಜನಿಕರ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ತೈಲ ಬೆಲೆಗಳನ್ನು ಕಡಿಮೆ ಮಾಡಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

'ಪೆಟ್ರೋಲಿಯಂ ಅನ್ನು ಜಿಎಸ್‌ಟಿಯ ವ್ಯಾಪ್ತಿಯಲ್ಲಿ ಪರಿಗಣಿಸಬೇಕು' :
ಚೆನ್ನೈ ಸಿಟಿಜನ್ ಫೋರಂನಲ್ಲಿ ಬಜೆಟ್ ನಂತರ ಚರ್ಚೆಯ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಾತನಾಡುತ್ತಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವುದು ವಿಷಾದನೀಯ ವಿಷಯ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪೆಟ್ರೋಲ್‌ನಿಂದ ಗಳಿಸುತ್ತವೆ, ಪೆಟ್ರೋಲಿಯಂ ಅನ್ನು ಜಿಎಸ್‌ಟಿಯ ವ್ಯಾಪ್ತಿಗೆ ತರುವ ಬಗ್ಗೆ ನಾವು ಯೋಚಿಸಬಹುದು, ಬಹುಶಃ ಈ ಸಮಸ್ಯೆಗೆ ಇದು ಒಂದೇ ಪರಿಹಾರವಾಗಿದೆ. ಸ್ಲಾಬ್ಸ್ ಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಯೋಚಿಸಬೇಕು ಎಂದು ಅವರು ಹೇಳಿದರು.

'ತೆರಿಗೆಯಲ್ಲಿನ ಏಕರೂಪತೆಯು ನ್ಯೂನತೆಗಳನ್ನು ತೆಗೆದುಹಾಕುತ್ತದೆ' :
ತೆರಿಗೆ ರಚನೆ ಮತ್ತು ಒಪೆಕ್ ಮತ್ತು ಅದರ ಪಾಲುದಾರ ರಾಷ್ಟ್ರಗಳು ತೈಲ ಉತ್ಪಾದನೆಯಲ್ಲಿನ ಕಡಿತವು ಭಾರತದಲ್ಲಿನ ಚಿಲ್ಲರೆ ಬೆಲೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿತ್ತ ಸಚಿವರು ವಿವರಿಸಿದರು. 'ಬಹುಶಃ ಉತ್ತರವೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ತರಬೇಕು. ತೆರಿಗೆಯಲ್ಲಿ ಏಕರೂಪತೆ ಇರುವುದರಿಂದ ಅದರ ನ್ಯೂನತೆಗಳನ್ನು ನಿವಾರಿಸಲಾಗುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ - Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

'ಕೇಂದ್ರ-ರಾಜ್ಯ ಸರ್ಕಾರಗಳು ಇದರ ಬಗ್ಗೆ ಮಾತನಾಡಬೇಕಾಗುತ್ತದೆ' :
ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಈ ಬಗ್ಗೆ ಮಾತನಾಡಬೇಕಾಗಿರುವುದು ಅತ್ಯಗತ್ಯ ಎಂದು ತಿಳಿಸಿದ ವಿತ್ತ ಸಚಿವರು, ಪ್ರಸ್ತುತ, ಪೆಟ್ರೋಲ್ (Petrol) ಡೀಸೆಲ್ ಮೇಲೆ ಕೇಂದ್ರ  ಸರ್ಕಾರ (Central Government) ಕೇಂದ್ರ ಅಬಕಾರಿ ಸುಂಕವನ್ನು ವಿಧಿಸುತ್ತದೆ. 2020 ರ ಆರಂಭದಲ್ಲಿ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕ 19.98 ರೂ. ಆಗಿದ್ದು, ಈಗ ಅದನ್ನು 32.98 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 15.83 ರೂ.ನಿಂದ 31.83 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರದ ಹೊರತಾಗಿ, ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಹೆಚ್ಚಿಸಿವೆ. ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇಕಡಾ 27 ರಿಂದ 30 ಕ್ಕೆ ಏರಿಸಿದೆ. ಡೀಸೆಲ್ ಮೇಲಿನ ವ್ಯಾಟ್ ಅನ್ನು ಮೇ ತಿಂಗಳಲ್ಲಿ ಶೇಕಡಾ 16.75 ರಿಂದ 30 ಕ್ಕೆ ಹೆಚ್ಚಿಸಿದ್ದರೆ, ಅದನ್ನು ಮತ್ತೆ ಜುಲೈನಲ್ಲಿ 16.75 ಕ್ಕೆ ಇಳಿಸಲಾಯಿತು. ಪೆಟ್ರೋಲ್‌ನ (Petrol) ಮೂಲ ಬೆಲೆ ಪ್ರತಿ ಲೀಟರ್‌ಗೆ 31.82 ರೂ., ಈ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳೊಂದಿಗೆ ಸೇರಿ, ಅವರು ಮೂಲ ಬೆಲೆಯಿಂದ 180 ಪ್ರತಿಶತದಷ್ಟು ತೆರಿಗೆಯನ್ನು ತೆಗೆದುಕೊಳ್ಳುತ್ತಾರೆ. ಅಂತೆಯೇ, ಸರ್ಕಾರಗಳು ಡೀಸೆಲ್‌ನ ಮೂಲ ಬೆಲೆಯಿಂದ 141% ತೆರಿಗೆ ವಿಧಿಸುತ್ತಿವೆ. ಹೀಗಾಗಿ ತೈಲ ದರಗಳು ಗ್ರಾಹಕರಿಗೆ ತಲುಪುವ ಹೊತ್ತಿಗೆ ದುಬಾರಿಯಾಗುತ್ತಿದೆ. ಹಾಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಒಟ್ಟಾಗಿ ಕುಳಿತು ಬೆಲೆಗಳನ್ನು ಸಮಂಜಸವಾದ ಮಟ್ಟಕ್ಕೆ ತರಬೇಕಾಗುತ್ತದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ - ಈ ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಅಗ್ಗವಾಗಲಿದೆ Petrol-Diesel, Alcohol

'ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಚರ್ಚೆ ಅಗತ್ಯವಿದೆ' :
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರುವ ಮೂಲಕ ಪರಿಹಾರ ಸಿಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇದು ಸಾಧ್ಯವಿದೆ, ಆದರೆ ಇದನ್ನು ಮಾಡಲು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ವಿವರವಾದ ಚರ್ಚೆ ಅಗತ್ಯವಿದೆ' ಎಂದು ಹೇಳಿದರು.

ಒಂದೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ಗೆ  ಜಿಎಸ್‌ಟಿ ವಿಧಿಸುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌  ಒಪ್ಪಿದರೆ, ದೇಶಾದ್ಯಂತ ಒಂದೇ ದರದಲ್ಲಿ ಇಂಧನ ಲಭ್ಯವಿರುತ್ತದೆ, ಚೆನ್ನೈನಲ್ಲಿ ತೈಲ ದರ ದೆಹಲಿಗಿಂತ ದುಬಾರಿಯಾಗುವುದಿಲ್ಲ ಅಥವಾ ಮುಂಬೈಗಿಂತ ದೆಹಲಿಯಲ್ಲಿ ಅಗ್ಗವಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದರು.  ಇದನ್ನು ಜಿಎಸ್‌ಟಿಯ ವ್ಯಾಪ್ತಿಗೆ ತಂದಾಗ ಮಾತ್ರ ಅದನ್ನು ನಿವಾರಿಸಬಹುದು ಎಂದವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News