ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ಜೀವನ ಸಾಗಿರುವುದೇ ಕಷ್ಟವಾಗಿದೆ. ಈ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇಂತಹ ಸಂದರ್ಭದಲ್ಲಿ ದೇಶದ ಈ ಭಾಗದಲ್ಲಿ ಇಂದು ಮಧ್ಯರಾತ್ರಿಯಿಂದ ಇಂಧನ ದರಗಳು ಅಗ್ಗವಾಗಲಿವೆ. ಅಷ್ಟೇ ಅಲ್ಲ, ರಾಜ್ಯ ಸರ್ಕಾರವು ಇಂದು ಮಧ್ಯರಾತ್ರಿಯಿಂದ ಮದ್ಯದ (Alcohol) ಬೆಲೆಯಲ್ಲಿ ಭಾರಿ ಪರಿಹಾರವನ್ನು ಜಾರಿಗೆ ತರಲಿದೆ. ಹೌದು, ನಾವು ಇಲ್ಲಿ ಅಸ್ಸಾಂ (Assam) ಬಗ್ಗೆ ಮಾತನಾಡುತ್ತಿದ್ದೇವೆ. ಇಂಧನ ದರ ಏರಿಕೆ ಬಿಸಿ ಮಧ್ಯೆ ಸರ್ಕಾರ ಅಲ್ಲಿನ ಜನರಿಗೆ ಒಂದು ರೀತಿಯ ಉಡುಗೊರೆಯನ್ನು ನೀಡುತ್ತಿದೆ. ವಾಸ್ತವವಾಗಿ, ಅಸ್ಸಾಂ ಸರ್ಕಾರ ಕಳೆದ ವರ್ಷ ಕೋವಿಡ್ -19 (Covid 19) ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿದ್ದ ಹೆಚ್ಚುವರಿ 5 ರೂ.ಗಳನ್ನು ತೆಗೆದುಹಾಕಿದೆ.
ರಾಜ್ಯದ ಸಾಮಾನ್ಯ ಜನರಿಗೆ ದೊಡ್ಡ ಪರಿಹಾರ :
ಇದಲ್ಲದೆ, ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ (Assam finance minister Himanta Biswa Sarma) ಶುಕ್ರವಾರ ಮದ್ಯದ (Alcohol) ಮೇಲಿನ ಶೇಕಡಾ 25 ರಷ್ಟು ಹೆಚ್ಚುವರಿ ಸೆಸ್ (Additional cess on Liquor) ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯ ವರದಿಯ ಪ್ರಕಾರ, ಹೊಸ ದರಗಳು ಇಂದು ಮಧ್ಯರಾತ್ರಿಯಿಂದ ಅನ್ವಯವಾಗುತ್ತವೆ. ಸರ್ಕಾರದ ಈ ನಿರ್ಧಾರವು ರಾಜ್ಯದ ಸಾಮಾನ್ಯ ಜನರಿಗೆ ದೊಡ್ಡ ಪರಿಹಾರವನ್ನು ನೀಡಲಿದೆ. ರಾಜ್ಯ ವಿಧಾನಸಭಾ ಚುನಾವಣೆಯನ್ನು (Assembly Election) ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನಂಬಲಾಗಿದೆ.
ಇದನ್ನೂ ಓದಿ - ಈ ರಾಜ್ಯದಲ್ಲಿ ‘ಎಣ್ಣೆ’ ಬ್ಯಾನ್, ಆದರೂ ‘ಡ್ರಿಂಕ್ಸ್’ ವಿಚಾರದಲ್ಲಿ ಮಹಿಳೆಯರೇ ಫಸ್ಟ್..!
ಸುದ್ದಿಯ ಪ್ರಕಾರ, ಸರ್ಕಾರದ ಈ ನಿರ್ಧಾರದಿಂದಾಗಿ ಕಡಿಮೆ ವೆಚ್ಚದ ಪೆಟ್ರೋಲ್ (Petrol) ಲಭಿಸುವ ರಾಜ್ಯಗಳಲ್ಲಿ ಗುಜರಾತ್ ನಂತರದ ಸ್ಥಾನದಲ್ಲಿ ಅಸ್ಸಾಂ ಎರಡನೇ ರಾಜ್ಯ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ, ಅಸ್ಸಾಂನಲ್ಲಿ ಮಾತ್ರವಲ್ಲದೆ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಾಗುವುದು.
ಪ್ರಸ್ತುತ, ಅಸ್ಸಾಂನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 90.41 ಆಗಿದೆ. ಇತ್ತೀಚಿನ ನಿರ್ಧಾರದ ನಂತರ, ಬೆಲೆ ಪ್ರತಿ ಲೀಟರ್ಗೆ 85.41 ಕ್ಕೆ ಇಳಿಯಲಿದೆ, ಇದು ಗುಜರಾತ್ನ ನಂತರದ ಅತಿ ಕಡಿಮೆ ದರವಾಗಿದೆ. ಅಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 85.30 ರೂ. ಅಸ್ಸಾಂ ರಾಜ್ಯ ಸರ್ಕಾರ ಇಂದು ಕೈಗೊಂಡಿರುವ ನಿರ್ಧಾರದ ನಂತರ, ಅಸ್ಸಾಂನಲ್ಲಿ ಡೀಸೆಲ್ ಬೆಲೆಯನ್ನು ಪ್ರಸ್ತುತ 84.29 ರೂ.ನಿಂದ 79.29 ರೂ.ಗೆ ಇಳಿಸಲಾಗುತ್ತದೆ.
Live From Assembly https://t.co/PkZS45wjac
— Himanta Biswa Sarma (@himantabiswa) February 12, 2021
ಇದನ್ನೂ ಓದಿ - ಶೇ. 100ರಷ್ಟು ಸೆಸ್ ಹೊರತಾಗಿಯೂ ದುಬಾರಿಯಾಗುವುದಿಲ್ಲ Alcohol, ಹೇಗೆ ಗೊತ್ತಾ!
ಕಾರ್ಮಿಕರ ಕನಿಷ್ಠ ವೇತನ ಪ್ರಮಾಣ ಹೆಚ್ಚಾಗುತ್ತದೆ (Minimum wage amount of workers will increase) :
ಚಹಾ ತೋಟಗಳ ಕಾರ್ಮಿಕರ ಕನಿಷ್ಠ ವೇತನ ಮೊತ್ತವನ್ನೂ ಫೆಬ್ರವರಿ 20 ರೊಳಗೆ ಹೆಚ್ಚಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಇದಲ್ಲದೆ ಸೆಪ್ಟೆಂಬರ್ ವೇಳೆಗೆ ರಾಜ್ಯದಲ್ಲಿ 9 ಹೊಸ ಕ್ಯಾನ್ಸರ್ ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಅಲ್ಲದೆ, ರಾಜ್ಯದ ತಲಾ ಆದಾಯವು 2016-17ರಲ್ಲಿ 66,330 ರೂ.ಗಳಿಂದ 2019-20ರಲ್ಲಿ 90,692 ರೂಗಳಿಗೆ ಏರಿದೆ ಎಂದು ಸಚಿವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.