PF ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ !

Auto Claim Settlement Facility:ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು.ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು.

Written by - Ranjitha R K | Last Updated : May 14, 2024, 10:46 AM IST
  • ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ
  • ಈಗ ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.
  • ನಿಮ್ಮ ಕ್ಲೈಮ್ ಅನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಗುತ್ತದೆ.
PF ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ ! title=

Auto Claim Settlement Facility : ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಉದ್ಯೋಗಿಗಳಿಗಾಗಿ EPFO ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಶಿಕ್ಷಣ, ಮದುವೆ ಮತ್ತು ಮನೆಗೆ ಹಣದ ಅಗತ್ಯವಿದ್ದರೆ, ತ್ವರಿತ ಅನುಮೋದನೆಯ ಸೌಲಭ್ಯವನ್ನು ಪಡೆಯಬಹುದು.ಈ ಸೌಲಭ್ಯದಲ್ಲಿ, ನಿಮ್ಮ ಕ್ಲೈಮ್ ಅನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಗುತ್ತದೆ. ನಂತರ ಅದನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು.

4.45 ಕೋಟಿ ಕ್ಲೇಮ್‌ :
EPFO ನೀಡಿದ ಮಾಹಿತಿಯಲ್ಲಿ, ಈ ಸೌಲಭ್ಯದ ಮಿತಿಯನ್ನು 50,000 ದಿಂದ  1 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥ ಮಾಡಿದೆ. ಇವುಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು (2.84 ಕೋಟಿ) ಅಡ್ವಾನ್ಸ್ ಕ್ಲೈಮ್ ಆಗಿತ್ತು.ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಶಿಕ್ಷಣ, ಮದುವೆ ಅಥವಾ ವಸತಿ ಅಗತ್ಯಗಳಿಗಾಗಿ 1 ಲಕ್ಷದವರೆಗಿನ ಮೊತ್ತವನ್ನು ಹಿಂಪಡೆಯಬಹುದು. 

ಇದನ್ನೂ ಓದಿ : ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆ

ಕಳೆದ ವರ್ಷ ಅನುಮೋದಿಸಲಾದ ಎಲ್ಲಾ ಮುಂಗಡ ಕ್ಲೈಮ್‌ಗಳಲ್ಲಿ 3-4 ದಿನಗಳಲ್ಲಿ ಅನುಮೋದನೆಯನ್ನು ಸ್ವೀಕರಿಸಲಾಗಿದೆ. ಸುಮಾರು 90 ಲಕ್ಷ ಕ್ಲೈಮ್‌ಗಳು ಸ್ವಯಂ ಇತ್ಯರ್ಥವಾಗಿವೆ.ಹೊಸ ವ್ಯವಸ್ಥೆಯಲ್ಲಿ, ಎಲ್ಲಾ ಕೆಲಸಗಳನ್ನು ಕಂಪ್ಯೂಟರ್‌ಗಳ ಮೂಲಕ ಮಾಡಲಾಗುತ್ತದೆ.ಮುಂಗಡ ಕ್ಲೈಮ್‌ಗಳ ಅನುಮೋದನೆಗೆ ತೆಗೆದುಕೊಳ್ಳುವ ಸಮಯವೂ ಕಡಿಮೆಯಾಗಲು ಇದು ಕಾರಣವಾಗಿದೆ.ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಲು 10 ದಿನ ಬೇಕಾಗುತ್ತಿತ್ತು. ಆದರೆ, ಈಗ ಈ ಕೆಲಸ ಕೇವಲ 3-4 ದಿನಗಳಲ್ಲಿ ಮುಗಿಯಲಿದೆ. 

ಮೇ 6 ರಿಂದ ಪ್ರಾರಂಭಿಸಲಾದ ಸೌಲಭ್ಯ :
ಕಂಪ್ಯೂಟರ್ ಸಿಸ್ಟಮ್ ಕ್ಲೈಮ್ ಅನ್ನು ಅನುಮೋದಿಸದಿದ್ದರೆ,ಅದನ್ನು ಮರುಪಾವತಿ ಮಾಡಲಾಗುವುದಿಲ್ಲ. ಆದರೆ  ರದ್ದು ಕೂಡಾ ಮಾಡುವುದಿಲ್ಲ. ಬದಲಿಗೆ,ಅಂಥಹ ಪ್ರಕರಣಗಳನ್ನು ಮರುಪರಿಶೀಲಿಸಿ ನಂತರ ಅನುಮೋದಿಸಲಾಗುತ್ತದೆ.ಮೇ 6, 2024 ರಿಂದ EPFO ​​ನಿಂದ ಸ್ವಯಂಚಾಲಿತ ಮೋಡ್‌ನಲ್ಲಿ ಕ್ಲೈಮ್‌ಗಳನ್ನು ರವಾನಿಸುವ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ 13,011 ಮಂದಿ ಪ್ರಯೋಜನ ಪಡೆದಿದ್ದಾರೆ. 

ಇದನ್ನೂ ಓದಿ : Arecanut Price in Karnataka: ಶಿವಮೊಗ್ಗದಲ್ಲಿ ಅಡಿಕೆ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News