ಬ್ಯಾಂಕ್‌ ಎಫ್ ಡಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಅದ್ಭುತ ಉಳಿತಾಯ ಯೋಜನೆಗಳು

ಸರ್ಕಾರವು ಈ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸುತ್ತಲೇ ಇರುತ್ತದೆ. ಈ ಹೂಡಿಕೆ ಸುರಕ್ಷಿತವಾಗಿಯೂ ಇರುವುದು.  ಮಾತ್ರವಲ್ಲ ತೆರಿಗೆ ವಿನಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದು.   

Written by - Ranjitha R K | Last Updated : Jun 2, 2023, 12:52 PM IST
  • ಹೂಡಿಕೆ ಮಾಡಿದ ಹಣದ ಮೇಲೆ ಹೆಚ್ಚಿನ ಬಡ್ಡಿ ಹಣವನ್ನು ನಿರೀಕ್ಷೆ ಮಾಡುತ್ತೇವೆ.
  • ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ
  • ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸಲಾಗುತ್ತದೆ.
ಬ್ಯಾಂಕ್‌ ಎಫ್ ಡಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಅದ್ಭುತ ಉಳಿತಾಯ ಯೋಜನೆಗಳು title=

ಬೆಂಗಳೂರು : ಹಣವನ್ನು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹಣ ಹೂಡಿಕೆ ಮಾಡುವಾಗ ಹೂಡಿಕೆ ಮಾಡಿದ ಹಣದ ಮೇಲೆ ಹೆಚ್ಚಿನ ಬಡ್ಡಿ ಹಣವನ್ನು ನಿರೀಕ್ಷೆ ಮಾಡುತ್ತೇವೆ. ಬ್ಯಾಂಕ್ ಸ್ಥಿರ ಠೇವಣಿಗಳ (ಎಫ್ ಡಿ ) ಬದಲಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಅಲ್ಲದೆ ಈ ಹೂಡಿಕೆ ಸುರಕ್ಷಿತವಾಗಿಯೂ ಇರುವುದು.  ಮಾತ್ರವಲ್ಲ ತೆರಿಗೆ ವಿನಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದು. 

ಭಾರತೀಯ ಅಂಚೆ ಇಲಾಖೆ ಹೂಡಿಕೆದಾರರಿಗೆ ಹಲವಾರು ಠೇವಣಿ ಯೋಜನೆಗಳನ್ನು ನೀಡುತ್ತದೆ. ಇವುಗಳನ್ನು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಎಂದು ಕರೆಯಲಾಗುತ್ತದೆ. ಪ್ರಸ್ತುತ, 9 ಅಂಚೆ ಕಚೇರಿ ಮೂಲಕ ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಒಂಬತ್ತು ಸಣ್ಣ ಉಳಿತಾಯ ಯೋಜನೆಗಳಲ್ಲಿ  ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ದಿ ಯೋಜನೆ, (SSY), ರಾಷ್ಟ್ರೀಯ ಉಳಿತಾಯ ಬಾಂಡ್ (NSC),ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಸೇರಿವೆ. ಸರ್ಕಾರವು ಈ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸುತ್ತಲೇ ಇರುತ್ತದೆ.
 
ಇದನ್ನೂ ಓದಿ :  Stock Market Update: ಸತತ ಎರಡನೇ ದಿನ ಕುಸಿದ ಷೇರು ಮಾರುಕಟ್ಟೆ, 18500 ಕ್ಕಿಂತ ಕೆಳಕ್ಕೆ ಜಾರಿದ ನಿಫ್ಟಿ ಷೇರು ಸೂಚ್ಯಂಕ

ಇತ್ತೀಚಿನ ಪರಿಷ್ಕರಣೆಯ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್‌ಬಿಐ ), ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಕೆಲವು ಯೋಜನೆಗಳನ್ನು ಪರಿಚಯಿಸಿವೆ. ಅವು ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತವೆ. ಎಫ್‌ಡಿಗಿಂತಲೂ  ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. 

ಈ ಎರಡೂ ಯೋಜನೆಗಳು 8% ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ :
ಸುಕನ್ಯಾ  ಸಮೃದ್ದಿ ಯೋಜನೆ (SSY) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ  (SCSS) ಮಾಡುವ ಠೇವಣಿಗಳ ಮೇಲೆ 8% ಕ್ಕಿಂತ ಹೆಚ್ಚಿನ ಬಡ್ಡಿದರ ಸಿಗುತ್ತವೆ. 

ಸುಕನ್ಯಾ  ಸಮೃದ್ದಿ ಯೋಜನೆ :
ಸುಕನ್ಯಾ ಸಮೃದ್ದಿ ಯೋಜನೆ ( SSY) ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ಹೆಣ್ಣು ಮಗುವಿನ ಪೋಷಕರು ಮಗುವಿನ ದೀರ್ಘಕಾಲೀನ ಆರ್ಥಿಕ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. SSY ಯೋಜನೆಯಲ್ಲಿ, ಮಾಡುವ ಹೂಡಿಕೆ ಮೇಲೆ ಭಾರತ ಸರ್ಕಾರವು ವಾರ್ಷಿಕ 8 ಪ್ರತಿಶತದಷ್ಟು ಬಡ್ಡಿದರವನ್ನು ಒದಗಿಸುತ್ತದೆ.

ಇದನ್ನೂ ಓದಿ :  SC: ಎರಡು ಸಾವಿರ ರೂ.ಗಳ ನೋಟು ಬದಲಾವಣೆ Gallery Gujarati Import - News ವಿರುದ್ಧ ಅರ್ಜಿ ತಿರಸ್ಕರಿಸಿದ ಸುಪ್ರೀಂ ನಕಾರ, ಕಾರಣ ಇಲ್ಲಿದೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ :
60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಮಾಡುವ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮೇಲೆ 8.2% ಬಡ್ಡಿದರವನ್ನು ನೀಡುತ್ತವೆ.

ರಾಷ್ಟ್ರೀಯ ಉಳಿತಾಯ ಬಾಂಡ್ : 
ಪ್ರಸ್ತುತ, ರಾಷ್ಟ್ರೀಯ ಉಳಿತಾಯ ಬಾಂಡ್ ನಲ್ಲಿ ಮಾಡುವ ಹೂಡಿಕೆ ಮೇಲೆ  7.7% ಬಡ್ಡಿದರವನ್ನು ನೀಡುತ್ತದೆ. ಎನ್‌ಎಸ್‌ಸಿಯಲ್ಲಿ ಮಾಡುವ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇಲ್ಲಿ ಕನಿಷ್ಠ ಹೂಡಿಕೆ 100 ರೂಪಾಯಿಯಿಂದ ಆರಂಭವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದೂವರೆ ಲಕ್ಷದವರೆಗೆ   ಮಾಡುವ ಠೇವಣಿ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ  ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News