RBI New Rule: ಈ ನೋಟುಗಳು ಇನ್ಮುಂದೆ ರದ್ದಿಗೆ ಸಮಾನ, ನಿಮ್ಮ ಜೇಬಿನಲ್ಲೂ ಇದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ

Unfit Notes: ಅನ್ಫಿಟ್ ನೋಟುಗಳಿಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕುಗಳಿಗೆ  ಮಹತ್ವದ ನಿರ್ದೆಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಯಂತ್ರಗಳ ಸಹಾಯದಿಂದ ಇಂತಹ ನೋಟುಗಳನ್ನು ಬೇರ್ಪಡಿಸಲು ಆದೇಶ ಹೊರಡಿಸಿದೆ. ನಿಮ್ಮ ಜೇಬಿನಲ್ಲಿರುವ ಯಾವ ನೋಟು ಅನ್ಫಿಟ್ ಆಗಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 3, 2022, 06:42 PM IST
  • ಅಯೋಗ್ಯ ನೋಟುಗಳಿಗೆ ಸಂಬಂಧಿಸಿದಂತೆ ಮಹತ್ವನ ನಿರ್ದೇಶನ ಹೊರಡಿಸಿದ ಆರ್ಬಿಐ
  • ಯಂತ್ರಗಳ ಸಹಾಯದಿಂದ ಇಂತಹ ನೋಟುಗಳನ್ನು ಬೇರ್ಪಡಿಸಲು ಆದೇಶ
  • ನಿಮ್ಮ ಜೇಬಿನಲ್ಲಿರುವ ಯಾವ ನೋಟು ಅನ್ಫಿಟ್ ಆಗಿದೆಯಾ ತಿಳಿದುಕೊಳ್ಳಲು ಸುದ್ದಿ ಓದಿ.
RBI New Rule: ಈ ನೋಟುಗಳು ಇನ್ಮುಂದೆ ರದ್ದಿಗೆ ಸಮಾನ, ನಿಮ್ಮ ಜೇಬಿನಲ್ಲೂ ಇದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ title=
Unfit Currency Notes

Reserve Bank Of India New Rule: ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ಜನರು ಹಳೆ ಮುದುಡಿಯಾದ ಮತ್ತು ಹರಿದ ನೋಟುಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ, ಇದೀಗ ಆರ್‌ಬಿಐನ ಈ ಈ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ನಂತರ, ನೋಟುಗಳ ಫಿಟ್‌ನೆಸ್ ಅನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ. ನೋಟುಗಳನ್ನು ಎಣಿಸುವ ಯಂತ್ರಗಳ ಬದಲಾಗಿ, ನೋಟುಗಳ ಫಿಟ್‌ನೆಸ್ ಪರಿಶೀಲಿಸಲು ಯಂತ್ರಗಳನ್ನು ಬಳಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ಇರುವ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಆರ್‌ಬಿಐನ ಈ ಸೂಚನೆಯ ಪ್ರಕಾರ, ಇದೀಗ ಪ್ರತಿ ಮೂರು ತಿಂಗಳಿಗೊಮ್ಮೆ ನೋಟುಗಳ ಫಿಟ್‌ನೆಸ್ ಅನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ. ಹೀಗಿರುವಾಗ, ನಿಮ್ಮ ಜೇಬಿನಲ್ಲಿ ಇಟ್ಟಿರುವ ನೋಟು ಯೋಗ್ಯವಾಗಿದೆಯೇ ಅಥವಾ ಅನರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸಲು ಆರ್‌ಬಿಐ 11 ಮಾನದಂಡಗಳನ್ನು ನಿಗದಿಪಡಿಸಿದೆ.

ಆರ್ಬಿಐ ನೀಡಿರುವ ಈ ನಿರ್ದೇಶನಗಳ ಬಳಿಕ ಸ್ವಚ್ಛ ನೋಟುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ ಮತ್ತು ಇದರಿಂದ ಹರಿದ ನೋಟುಗಳ ರೀಸೈಕಲ್ ನಲ್ಲಿ ಎದುರಾಗುವ ತೊಂದರೆ ತಪ್ಪಲಿದೆ. ರೀಸೈಕಲ್ ದೃಷ್ಟಿಯಿಂದ ಸರಿಯಾಗಿಲ್ಲದ ನೋಟುಗಳನ್ನು ಅನ್ಫಿಟ್ ನೋಟುಗಳು ಎಂದು ಹೇಳಲಾಗುತ್ತದೆ. ಹಾಗಾದರೆ, ಅನ್ಫಿಟ್ ನೋಟುಗಳಿಗೆ ಸಂಬಂಧಿಸಿದಂತೆ ಆರ್ಬಿಐ ಹೊರಡಿಸಿರುವ ಆ 11 ಮಾನದಂಡಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

>> ಅತಿ ಕೊಳೆಯಾದ ಹಾಗೂ ಧೂಳಿನಿಂದ ಲಿಪ್ತವಾದ ನೋಟುಗಳನ್ನು ಅನ್ಫಿಟ್ ಎಂದು ಭಾವಿಸಲಾಗುವುದು.
>> ದೀರ್ಘಕಾಲದಿಂದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮತ್ತು ಹಲವು ಬಾರಿ ಒಂದು ಜೇಬಿನಿಂದ ಮತ್ತೊಂದು ಜೇಬಿಗೆ ವರ್ಗಾವಣೆಯಾಗುವುದರಿಂದ ತೆಳುವಾಗುತ್ತವೆ. ಇಂತಹ ತೆಳುವಾಗಿರುವ ನೋಟುಗಳನ್ನು ಅನ್ಫಿಟ್ ಎಂದು ಭಾವಿಸಲಾಗುವುದು. ಕಡಕ್ ನೋಟುಗಳನ್ನು ಈ ಶ್ರೇಣಿಯಲ್ಲಿ ಶಾಮೀಲುಗೊಳಿಸಲಾಗುವುದಿಲ್ಲ. 
>> ಅಂಚು ಅಥವಾ ಮಧ್ಯಭಾಗದಲ್ಲಿ ಹರಿದ ನೋಟುಗಳನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> ನೋಟುಗಳಲ್ಲಿ ಇರುವ ಡಾಗ್ ಇಯರ್ಸ್ ಗಾತ್ರ 100 ಚದರ ಮಿಲಿಮೀಟರ್‌ಗಿಂತ ಹೆಚ್ಚಾಗಿದ್ದರೆ , ಅದನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> 8 ಚದರ ಮಿಲಿಮೀಟರ್‌ಗಳಿಗಿಂತ ದೊಡ್ಡ ರಂಧ್ರಗಳನ್ನು ಹೊಂದಿರುವ ನೋಟುಗಳನ್ನು ಅನರ್ಹ ನೋಟುಗಳು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?

>> ನೋಟುಗಳಲ್ಲಿನ ಯಾವುದೇ ಗ್ರಾಫಿಕ್ ಬದಲಾವಣೆಯನ್ನು ಅನರ್ಹ ನೋಟುಗಳು ಎಂದು ಪರಿಗಣಿಸಲಾಗುತ್ತದೆ.
>> ನೋಟಿನ ಮೇಲೆ ಸಾಕಷ್ಟು ಕಲೆಗಳು, ಪೆನ್ ಇಂಕ್ ಇತ್ಯಾದಿಗಳಿದ್ದರೆ ಅದು ಅಯೋಗ್ಯ ನೋಟು.
- ನೋಟುಗಳ ಮೇಲೆ ಏನನ್ನಾದರೂ ಬರೆದಿದ್ದರೆ ಅಥವಾ ಯಾವುದೇ ರೀತಿಯ ಬಣ್ಣ ತಗುಲಿದ್ದರೆ, ಅಂತಹ ನೋಟುಗಳು ಅನರ್ಹವಾಗುತ್ತವೆ.
>> ನೋಟಿನ ಬಣ್ಣ ಮಸುಕಾಗಿದ್ದರೆ, ಅದು ಅಯೋಗ್ಯ ನೋಟು.
>> ಹರಿದ ನೋಟಿನ ಮೇಲೆ ಯಾವುದೇ ರೀತಿಯ ಟೇಪ್ ಅಥವಾ ಅಂಟು ಇದ್ದರೆ, ಆ ನೋಟುಗಳನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
>> ನೋಟುಗಳ ಬಣ್ಣ ಹೋಗಿದ್ದರೆ ಅಥವಾ ಹಗುರವಾಗಿದ್ದರೆ, ಅವುಗಳನ್ನು ಸಹ ಅನರ್ಹ ವರ್ಗಕ್ಕೆ ಸೇರಿಸಲಾಗುತ್ತದೆ.

ಇದನ್ನೂ ಓದಿ-Business Idea: ಕೇವಲ 25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸುವ ಪರ್ಫೆಕ್ಟ್ ಪರಿಕಲ್ಪನೆ ಇದು!

ಅನರ್ಹ ನೋಟುಗಳ ಬೇರ್ಪಡಿಸುವ ಯಂತ್ರ
ಅನರ್ಹ ನೋಟುಗಳ ಗುರುತಿಸಲು ಆರ್ಬಿಐ ತನ್ನ ಯಂತ್ರಗಳನ್ನು ಅಪ್ಗ್ರೇಡ್ ಮಾಡುತ್ತಿದೆ. ಈ ಯಂತ್ರ ಅಂತಹ ನೋಟುಗಳನ್ನು ಗುರುತಿಸಿ ಅವುಗಳನ್ನು ಮಾರ್ಕೆಟ್ ನಿಂದ ಹೊರಹಾಕಲಿವೆ. ಈ ಯಂತ್ರಗಳ ಸರಿಯಾದ ಬಳಕೆ ಮಾಡಲು ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿದೆ. ಇದರ ಜೊತೆಗೆ ಅವುಗಳನ್ನು ಗಂಭೀರವಾಗಿ ಕಾಳಜಿ ವಹಿಸುವಂತೆ ಸೂಚಿಸಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News