DA Hike : ಭಾರತ ಸರ್ಕಾರವು ತನ್ನ ನೌಕರರಿಗೆ ಪರಿಹಾರ ನೀಡಲು ನಿರಂತರವಾಗಿ ಪ್ರಯತ್ನಿಸುತ್ತದೆ. ಹಾಗೆ, ಏರುತ್ತಿರುವ ಹಣದುಬ್ಬರದ ಯುಗದಲ್ಲಿಯೂ ಸಹ, ಸರ್ಕಾರವು ತನ್ನ ನೌಕರರ ಶ್ರೇಯೋಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಿಪಿಐ ಹಣದುಬ್ಬರ ದರವು ಈಗಾಗಲೇ ಎಂಟು ವರ್ಷಗಳ ಗರಿಷ್ಠ ಮಟ್ಟವನ್ನು ದಾಟಿದೆ ಮತ್ತು ವಿವಿಧ ಸರಕುಗಳ ಬೆಲೆ ಏರುತ್ತಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು (ಡಿಎ) ಸರ್ಕಾರವು ಹೆಚ್ಚಿಸುವ ಸಾಧ್ಯತೆಗಳಿವೆ.
ಜುಲೈನಲ್ಲಿ ಡಿಎ ಶೇ.5ರಷ್ಟು ಹೆಚ್ಚಳ!
ಸರ್ಕಾರವು ಜುಲೈನಲ್ಲಿ, ಡಿಎಯನ್ನು 5% ಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರಿ ನೌಕರರು ಶೇ.39 ರಷ್ಟು ಡಿಎ ಪಡೆಯುತ್ತಾರೆ. ಸರ್ಕಾರಿ ನೌಕರರು ಪ್ರಸ್ತುತ ತಮ್ಮ ಮೂಲ ವೇತನದ ಶೇ.34 ರಷ್ಟು ಡಿಎ ಪಡೆಯುತ್ತಿದ್ದಾರೆ. ಡಿಎಯನ್ನು 5% ಹೆಚ್ಚಿಸಿದರೆ, ಅವರು ತಮ್ಮ ಮೂಲ ವೇತನದ ಜೊತೆಗೆ ಶೇ.39 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಸರ್ಕಾರಿ ನೌಕರರು ತುಟ್ಟಿಭತ್ಯೆಯನ್ನು (ಡಿಎ) ಪಡೆಯುತ್ತಾರೆ, ಆದರೆ ಪಿಂಚಣಿದಾರರು ಡಿಯರ್ನೆಸ್ ರಿಲೀಫ್ (ಡಿಆರ್) ಪಡೆಯುತ್ತಾರೆ.
ಇದನ್ನೂ ಓದಿ : Service Charge: ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ..!
AICPI ಅಂಕಿಅಂಶ ಏನು ಹೇಳುತ್ತೆ?
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ (AICPI) ಬದಲಾವಣೆಯ ಆಧಾರದ ಮೇಲೆ DA ಅನ್ನು ಸಹ ಬದಲಾಯಿಸಲಾಗುತ್ತದೆ. ಎಐಸಿಪಿಐ ಹೆಚ್ಚಿರುವುದರಿಂದ ಸರ್ಕಾರಿ ನೌಕರರಿಗೆ ಅವರ ತುಟ್ಟಿ ಭತ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಮೇ ತಿಂಗಳ ಚಿಲ್ಲರೆ ಹಣದುಬ್ಬರವು ಶೇಕಡಾ 7.04 ರಷ್ಟಿದೆ, ಇದು ಆರ್ಬಿಐನ ಗುರಿ ಶ್ರೇಣಿಯಾದ 2 ರಿಂದ 6 ಶೇಕಡಾಕ್ಕಿಂತ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಏಪ್ರಿಲ್ ಎಐಸಿಪಿಐನಿಂದ, ಜುಲೈನಲ್ಲಿ ಸರ್ಕಾರವು 5% DA ಅನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.
ಡಿಎ ಪಾವತಿಯನ್ನು ನಿಲ್ಲಿಸಲಾಗಿದೆ
ಕೋವಿಡ್ -19 ರ ಏಕಾಏಕಿ ಏರಿಕೆಯಾದ ಕಾರನಾಡಿದ್ನ ಕೇಂದ್ರ ಸರ್ಕಾರವು 1 ಜನವರಿ 2020, 1 ಜುಲೈ 2020 ಮತ್ತು 1 ಜನವರಿ 2021 ಗಾಗಿ ಮೂರು ಡಿಎ ಮತ್ತು ಡಿಆರ್ ಪಾವತಿಗಳನ್ನು ನಿಲ್ಲಿಸಿದೆ. ಮತ್ತೊಂದೆಡೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಆಗಸ್ಟ್ನಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ, ಡಿಎ ಮತ್ತು ಡಿಆರ್ ಅನ್ನು ತಡೆಹಿಡಿಯುವುದರಿಂದ ಸುಮಾರು 34,402 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : Vegetable Price: ಕರ್ನಾಟಕದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ: ಗಮನಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.