SBIಯಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ : FDಯಲ್ಲಿ ಸಿಗಲಿದೆ 6.2ರಷ್ಟು ಬಡ್ಡಿ

SBI ತನ್ನ ಸ್ಥಿರ ಠೇವಣಿಗಳ  ಬಡ್ಡಿದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಸಾಮಾನ್ಯ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ  FD ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. 

Written by - Zee Kannada News Desk | Last Updated : Jan 10, 2021, 06:48 PM IST
  • ಎಸ್‌ಬಿಐ ಗ್ರಾಹಕರಿಗೆ ಹೊಸ ವರ್ಷದಲ್ಲಿ ಭರ್ಜರಿ ಗಿಫ್ಟ್
  • ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ
  • ಹಿರಿಯ ನಾಗರಿಕರಿಗೆ ಕನಿಷ್ಠ 3.4 ರಿಂದ ಗರಿಷ್ಠ 6.2 ರವರೆಗೆ ಬಡ್ಡಿ
SBIಯಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ : FDಯಲ್ಲಿ ಸಿಗಲಿದೆ 6.2ರಷ್ಟು ಬಡ್ಡಿ title=
ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ(photo file)

ನವದೆಹಲಿ: ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಹೊಸ ವರ್ಷದಲ್ಲಿ ಭರ್ಜರಿ ಗಿಫ್ಟ್ ಘೋಷಿಸಿದೆ. ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ (FD) ಬಡ್ಡಿದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ  FD ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಹೊಸ ಬಡ್ಡಿದರಗಳು  ಜನವರಿ 8, 2021 ರಿಂದ ಜಾರಿಗೆ ಬಂದಿವೆ. ಸಾಮಾನ್ಯ ಗ್ರಾಹಕರಿಗೆ  0.10 ರಷ್ಟು ಬಡ್ಡಿದರಗಳನ್ನು ಹೆಚ್ಚಿಸಿದರೆ, ಹಿರಿಯ ನಾಗರಿಕರಿಗೆ ಶೇಕಡಾ 0.50 ರಷ್ಟು ಹೆಚ್ಚಾಗಿದೆ.

1 ವರ್ಷಕ್ಕಿಂತ ಕಡಿಮೆ ಎಫ್‌ಡಿಗಳಿಗೆ ಶೇ 4.4 ರಷ್ಟು ಬಡ್ಡಿ : 
ಇತ್ತೀಚಿನ ತಿದ್ದುಪಡಿಯ ಅನ್ವಯ, 7 ದಿನಗಳಿಂದ 45 ದಿನಗಳ ಮಧ್ಯದ ಅವಧಿಗೆ  ಎಫ್‌ಡಿ (FD) ಮೇಲೆ 2.9 ರಷ್ಟು ಬಡ್ಡಿ ಸಿಗಲಿದೆ. 46 ದಿನಗಳಿಂದ 179 ದಿನಗಳ ನಡುವೆ  ಎಫ್‌ಡಿ ಮೇಲೆ ಶೇ 3.9 ರಷ್ಟು ಬಡ್ಡಿಯನ್ನು ಬ್ಯಾಂಕ್ (Bank) ಪಾವತಿಸಲಿದೆ. 1 ವರ್ಷಕ್ಕಿಂತ ಕಡಿಮೆ ಇರುವ 180 ದಿನಗಳವರೆಗೆ ಎಫ್‌ಡಿ ಮೇಲೆ 4.4 ರಷ್ಟು ಬಡ್ಡಿ (Interest) ಪಡೆಯಬಹುದು.

ಇದನ್ನೂ ಓದಿ : 2 ವರ್ಷಗಳವರೆಗೆ ಎಲ್ಲಾ ರೀತಿಯ ಲೋನ್ ಮರುಪಾವತಿಸಲು ಸಿಗಲಿದೆ ನೆಮ್ಮದಿ, SBI ತಂದಿದೆ ಈ ಸ್ಕೀಮ್

ಎಫ್ ಡಿ ಬಡ್ಡಿದರಗಳು : 

7 ದಿನಗಳಿಂದ 45 ದಿನಗಳವರೆಗೆ - 2.9%

46 ದಿನಗಳಿಂದ 179 ದಿನಗಳವರೆಗೆ - 3.9%

180 ದಿನಗಳಿಂದ 210 ದಿನಗಳವರೆಗೆ - 4.4%

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 4.4%

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ - 5%

2 ರಿಂದ 3 ವರ್ಷಕ್ಕಿಂತ ಕಡಿಮೆ - 5.1%

3 ರಿಂದ 5 ವರ್ಷಕ್ಕಿಂತ ಕಡಿಮೆ - 5.3%

5 ವರ್ಷಗಳು ಮತ್ತು 10 ವರ್ಷಗಳವರೆಗೆ - 5.4%

ಹಿರಿಯ ನಾಗರಿಕರಿಗೆ ಸಿಗುವ  ಬಡ್ಡಿದರ :

ಹಿರಿಯ ನಾಗರಿಕರಿಗೆ (Senior Citizen) ಶೇಕಡಾ 0.50 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ . ಹಿರಿಯ ನಾಗರಿಕರಿಗೆ  ಕನಿಷ್ಠ 3.4 ರಿಂದ ಗರಿಷ್ಠ 6.2 ರವರೆಗೆ ಬಡ್ಡಿ ನೀಡಲಾಗುತ್ತದೆ. ಈಗ ಬ್ಯಾಂಕ್ ಹಿರಿಯರಿಗೆ ಈ ಬಡ್ಡಿದರಗಳನ್ನು ನಿಗದಿ  ಮಾಡಿದೆ.

7 ದಿನಗಳಿಂದ 45 ದಿನಗಳವರೆಗೆ - 3.4%

46 ದಿನಗಳಿಂದ 179 ದಿನಗಳವರೆಗೆ - 4.4%

180 ದಿನಗಳಿಂದ 210 ದಿನಗಳವರೆಗೆ - 4.9%

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 4.9%

1 ರಿಂದ 2 ವರ್ಷಕ್ಕಿಂತ ಕಡಿಮೆ - 5.5%

2 ರಿಂದ 3 ವರ್ಷಗಳಿಗಿಂತ ಕಡಿಮೆ - 5.6%

3 ರಿಂದ 5 ವರ್ಷಕ್ಕಿಂತ ಕಡಿಮೆ - 5.8%

5 ವರ್ಷಗಳು ಮತ್ತು 10 ವರ್ಷಗಳವರೆಗೆ - 6.2%

ಇದನ್ನೂ ಓದಿ : ತನ್ನ ಖಾತೆದಾರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ SBI

SBI, ಎಫ್ ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿರುವುದು ಗ್ರಾಹಕರಿಗೆ (Customer) ಖುಷಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News