ನವದೆಹಲಿ: ಸಾರ್ವಜನಿಕ ವಲಯದ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಖಾತೆದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಇದೀಗ ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿದರಗಳನ್ನು ಪರಿಶೀಲಿಸಲಾಗುವುದು ಎಂದು ಎಸ್ಬಿಐ ಪ್ರಕಟಿಸಿದೆ. ಬ್ಯಾಂಕ್ ನಲ್ಲಿ ಹೋಂ ಲೋನ್, ಆಟೋ ಲೋನ್ ಹಾಗೂ ವೈಯಕ್ತಿಕ ಸಾಲ ಪಡೆದ ಗ್ರಾಹಕರಿಗೆ ಈ ನಿರ್ಣಯದ ನೇರ ಲಾಭ ಸಿಗಲಿದೆ. ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು SBI ಹೇಳಿದೆ.
ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ದರದ ಪರಿಶೀಲನೆ ನಡೆಯಲಿದೆ
ಕನಿಷ್ಠ 6 ತಿಂಗಳಿಗೊಮ್ಮೆ ಕನಿಷ್ಠ ವೆಚ್ಚ ಆಧಾರಿತ ಬಡ್ಡಿದರವನ್ನು (ಎಂಸಿಎಲ್ಆರ್) ಪರಿಶೀಲಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಎಲ್ಲಾ ಬ್ಯಾಂಕುಗಳು ಪ್ರತಿವರ್ಷ ಎಂಸಿಎಲ್ಆರ್ ಅನ್ನು ಪರಿಶೀಲಿಸುತ್ತವೆ. ಈ ಕಾರಣದಿಂದಾಗಿ, ಕಡಿಮೆ ಬಡ್ಡಿದರದ ಹೊರತಾಗಿಯೂ, ಗ್ರಾಹಕರು ಅದರ ಲಾಭ ಪಡೆಯಲು ವರ್ಷವಿಡಿ ಕಾಯಬೇಕಾಗುತ್ತದೆ.
Enjoy the benefits of a reduction in the interest rate without waiting for a year.
SBI has reduced the MCLR reset frequency from 1 year to 6 months.
#SBI #StateBankOfIndia #MCLR #InterestRate pic.twitter.com/MEnvKy4SIJ— State Bank of India (@TheOfficialSBI) September 3, 2020
ಇದರಿಂದ ಗ್ರಾಹಕರಿಗಾಗುವ ಲಾಭ ಏನು?
ಹೆಚ್ಚಿನ ಜನರು ಗೃಹ ಸಾಲ ಅಥವಾ ವಾಹನ ಸಾಲವನ್ನು ಫ್ಲೋಟಿಂಗ್ ಬಡ್ಡಿ ದರದಲ್ಲಿ ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ತಜ್ಞರು ಹೇಳುತ್ತಾರೆ. RBI ಒಂದು ವೇಳೆ ರೆಪೊ ದರವನ್ನು ಕಡಿಮೆ ಮಾಡಿದರೆ, ಬ್ಯಾಂಕುಗಳು ಸಹ ಗ್ರಾಹಕರಿಗೆ ಅದರ ಪ್ರಯೋಜನ ನೀಡುತ್ತವೆ. ಆದರೆ ಕಡಿಮೆ ರೆಪೊ ದರದ ಹೊರತಾಗಿಯೂ, ಎಂಸಿಎಲ್ಆರ್ ಅನ್ನು ವರ್ಷಕ್ಕೊಮ್ಮೆ ಪರಿಶೀಲಿಸಿದ ನಂತರವೇ ಬ್ಯಾಂಕುಗಳು ಗ್ರಾಹಕರಿಗೆ ಅದರ ಪ್ರಯೋಜನಗಳನ್ನು ನೀಡಲು ಸಾಧ್ಯವಾಗುತ್ತದೆ. ಎಸ್ಬಿಐನ ಹೊಸ ನಿರ್ಧಾರವು ಸಾಲಗಾರರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಇದೀಗ ಬಡ್ಡಿ ದರ ಕಡಿಮೆಯಾದರೆ, ಗ್ರಾಹಕರಿಗೆ ಅದರ ತಕ್ಷಣವೇ ಲಾಭ ಸಿಗುತ್ತದೆ.