ಸೊಸೆ ಕೈಗೆ ಸಿಕ್ಕಿ ಬಿತ್ತು ಅತ್ತೆ ಬಚ್ಚಿಟ್ಟಿದ್ದ 2 ಸಾವಿರ ರೂಪಾಯಿಯ ಗರಿ ಗರಿ ನೋಟು ! ಮುಂದೆ ?

ಇದೀಗ ಕೇಂದ್ರ ಬ್ಯಾಂಕ್ ಮುಂದೆ 2 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಲು ದೊಡ್ಡ ದೊಡ್ಡ ಸಾಲುಗಳೇ  ಕಾಣಿಸುತ್ತಿವೆ. 

Written by - Ranjitha R K | Last Updated : Oct 30, 2023, 05:07 PM IST
  • ಹಣ ಸಂಪಾದಿಸುವ ಮಾರ್ಗ ಕಂಡುಕೊಂಡ ಜನ
  • ನೋಟು ಬದಲಾಯಿಸಲು ನಾನಾ ಕಾರಣ
  • ಇನ್ನೂ ಮಾರುಕಟ್ಟೆಯಲ್ಲಿವೆ 2 ಸಾವಿರ ರೂ. ನೋಟು
ಸೊಸೆ ಕೈಗೆ ಸಿಕ್ಕಿ ಬಿತ್ತು ಅತ್ತೆ ಬಚ್ಚಿಟ್ಟಿದ್ದ 2 ಸಾವಿರ ರೂಪಾಯಿಯ ಗರಿ ಗರಿ ನೋಟು ! ಮುಂದೆ ? title=

ಬೆಂಗಳೂರು : ಇತ್ತೀಚೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು  ಹಿಂಪಡೆದ ನಂತರ, ರಿಸರ್ವ್ ಬ್ಯಾಂಕ್ ಅವುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್ 7ರವರೆಗೆ ಸಮಯಾವಕಾಶ ನೀಡಿತ್ತು. ಇನ್ನೂ 12000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಬ್ಯಾಂಕಿಗೆ ಬರಬೇಕಿದೆ ಎಂದು ಆರ್ ಬಿಐ ಹೇಳಿತ್ತು. ಇದೀಗ ಕೇಂದ್ರ ಬ್ಯಾಂಕ್ ಮುಂದೆ 2 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಲು ದೊಡ್ಡ ದೊಡ್ಡ ಸಾಲುಗಳೇ  ಕಾಣಿಸುತ್ತಿವೆ. 

ಹಣ ಸಂಪಾದಿಸುವ ಮಾರ್ಗ ಕಂಡುಕೊಂಡ ಜನ : 
ನೋಟು ಬದಲಾಯಿಸಿಕೊಳ್ಳಲು ಬಂದ ಮಹಿಳೆಯೊಬ್ಬರು, ಅತ್ತೆ ತನ್ನ ಬಳಿ 2000 ರೂಪಾಯಿ ನೋಟು ಇಟ್ಟುಕೊಂಡಿದ್ದರು. ದೀಪಾವಳಿಗಾಗಿ ಮನೆ ಶುಚಿ ಮಾಡುತ್ತಿದ್ದಾಗ ಈ ನೋಟು ನನ್ನ ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.   ಇದೆಲ್ಲದರ ನಡುವೆ ಕೆಲವರು ಹಣ ಸಂಪಾದಿಸುವ ಮಾರ್ಗವನ್ನೂ ಕಂಡುಕೊಂಡಿದ್ದಾರೆ. ಆರ್‌ಬಿಐ ಹೊರಗೆ ಇರುವ ಸರತಿ ಸಾಲಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. 2000 ರೂ ನೋಟುಗಳನ್ನು ಬದಲಾಯಿಸಲು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.10 ಸಾವಿರ ರೂ.ಗೆ 300 ರೂ.ಯಂತೆ ಹಣ ಪಡೆಯುತ್ತಿದ್ದಾರೆ. 

ಇದನ್ನೂ ಓದಿ : ತುರ್ತು ಸಂದರ್ಭಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದು ಹೇಗೆ ?

ನೋಟು ಬದಲಾಯಿಸಲು ನಾನಾ ಕಾರಣ :
2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದವರೂ ಕೊನೆಯ ದಿನಾಂಕದ ಬಗ್ಗೆ ಗೊಂದಲದಲ್ಲಿದ್ದಾರೆ. ನೋಟುಗಳನ್ನು ಬದಲಾಯಿಸಿಕೊಳ್ಳಲು ಅಕ್ಟೋಬರ್ 30 ಕೊನೆಯ ದಿನಾಂಕ ಎನ್ನುವುದು ಕೆಲವರ ವಾದ. ಸರದಿಯಲ್ಲಿ ನಿಂತಿರುವ ಜನರು 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬೇರೆ ಬೇರೆ ಕಾರಣಗಳನ್ನು ನೀಡಿದ್ದಾರೆ. ದೀಪಾವಳಿ ಸ್ವಚ್ಛತೆ ವೇಳೆ ಮನೆಯಲ್ಲಿ 2000 ರೂಪಾಯಿ ನೋಟುಗಳು ಪತ್ತೆಯಾಗಿವೆ ಎಂದು ಕೆಲವರು ಹೇಳಿದರೆ, ಈ ನೋಟುಗಳು ಮನೆಯ ದೇವರ ಕೋಣೆಯಲ್ಲಿ ಪತ್ತೆಯಾಗಿವೆ ಎನ್ನುವುದು ಇನ್ನು ಕೆಲವರ ಕಾರಣ. ದೇಶದಿಂದ ಹೊರಗಿದ್ದ ಕಾರಣ ನೋಟು ಬದಲಾಯಿಸಿಕೊಳ್ಳಲು ಆಗಲಿಲ್ಲ, ಈಗ ವಾಪಸ್ಸು ಬಂದು ನೋಟು ಬದಲಾಯಿಸಿಕೊಳ್ಳಲು ಬಂದಿದ್ದಾರೆ ಎನ್ನುತ್ತಾರೆ ಕೆಲವರು.

ಮೇ 19, 2023 ರಂದು 2000 ರೂ. ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವುದಾಗಿ RBI ಘೋಷಿಸಿತ್ತು. ಆರ್‌ಬಿಐ ಈ ನೋಟುಗಳನ್ನು ಬದಲಾಯಿಸಲು ಅಥವಾ ಬ್ಯಾಂಕ್‌ನಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಎಂದು ಮೊದಲು ಹೇಳಿತ್ತು. ನಂತರ ಈ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಪ್ರಸ್ತುತ 12000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ ಎಂದು ಸೆಂಟ್ರಲ್ ಬ್ಯಾಂಕ್ ಇತ್ತೀಚೆಗೆ ಹೇಳಿತ್ತು.

ಇದನ್ನೂ ಓದಿ : ಮತ್ತೆ ಗಗನ ಕುಸುಮವಾಯಿತು ಚಿನ್ನ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News