Top Export SUV: ಈ ಮೇಡ್ ಇಂಡಿಯಾ ಎಸ್ಯುವಿ ಕಾರಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ

Top Made In India Export SUV: ವಿಶ್ವಾದ್ಯಂತ ಸುಮಾರು 95 ಕ್ಕೂ ಹೆಚ್ಚು ದೇಶಗಳಲ್ಲಿ ಕಿಯಾ ಇಂಡಿಯಾ ತನ್ನ ಕಾರುಗಳನ್ನು ರಫ್ತು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರುಗಳನ್ನು ರಫ್ತು ಮಾಡಿದೆ. ಅತ್ಯಂತ ಹೆಚ್ಚು ರಫ್ತುಗೊಂಡ ಕಾರು ಕಂಪನಿಯ ಸೇಲ್ಟೋಸ್ ಕಾರಾಗಿದೆ. ಈ ಕಾರಿನ ಸುಮಾರು 1,35,885 ಯೂನಿಟ್ ಗಳನ್ನು ಇದುವರೆಗೆ ವಿದೇಶಗಳಿಗೆ ಕಳುಹಿಸಲಾಗಿದೆ.   

Written by - Nitin Tabib | Last Updated : Apr 28, 2023, 05:49 PM IST
  • ಆಂಧ್ರಪ್ರದೇಶದ ಅನಂತಪುರದಲ್ಲಿರುವ ತನ್ನ ಉತ್ಪಾದನಾ ಘಟಕದಿಂದ ವಿಶ್ವದಾದ್ಯಂತ 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಕಂಪನಿ ರಫ್ತು ಮಾಡಿದೆ ಎಂದು ಕಿಯಾ ಇಂಡಿಯಾ ಇತ್ತೀಚೆಗೆ ಘೋಷಿಸಿದೆ.
  • ಇವುಗಳಲ್ಲಿ, ಕಿಯಾ ಸೆಲ್ಟೋಸ್‌ನ ಕೊಡುಗೆ ಅತಿ ದೊಡ್ಡ ಕೊಡುಗೆಯಾಗಿದೆ.
  • ಭಾರತದಲ್ಲಿ ತಯಾರಾದ ಕಿಯಾ ಕಾರುಗಳು 95 ದೇಶಗಳನ್ನು ತಲುಪುತ್ತಿವೆ ಎಂದು ಕಂಪನಿ ಹೇಳಿಕೊಂಡಿದೆ.
Top Export SUV: ಈ ಮೇಡ್ ಇಂಡಿಯಾ ಎಸ್ಯುವಿ ಕಾರಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ title=
ಈ ಮೇಡ್ ಇನ್ ಇಂಡಿಯಾ ಕಾರಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ!

Made In India Highest Export SUV: ವಿಶ್ವಾದ್ಯಂತ ಸುಮಾರು 95 ಕ್ಕೂ ಹೆಚ್ಚು ದೇಶಗಳಲ್ಲಿ ಕಿಯಾ ಇಂಡಿಯಾ ತನ್ನ ಕಾರುಗಳನ್ನು ರಫ್ತು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರುಗಳನ್ನು ರಫ್ತು ಮಾಡಿದೆ. ಅತ್ಯಂತ ಹೆಚ್ಚು ರಫ್ತುಗೊಂಡ ಕಾರು ಕಂಪನಿಯ ಸೇಲ್ಟೋಸ್ ಕಾರಾಗಿದೆ. ಈ ಕಾರಿನ ಸುಮಾರು 1,35,885 ಯೂನಿಟ್ ಗಳನ್ನು ಇದುವರೆಗೆ ವಿದೇಶಗಳಿಗೆ ಕಳುಹಿಸಲಾಗಿದೆ. ಇದೇ ರೀತಿ, ಕಿಯಾ ತನ್ನ ಮಧ್ಯಮ ಗಾತ್ರದ SUV ಸೆಲ್ಟೋಸ್ ಮತ್ತು ಸಬ್-4 ಮೀಟರ್ ಕಾಂಪ್ಯಾಕ್ಟ್ ಸಾನೆಟ್, ಬಜೆಟ್ 7 ಸೀಟರ್ MPV ಕ್ಯಾರೆನ್ಸ್ ಮತ್ತು ಐಷಾರಾಮಿ MPV ಕಾರ್ನಿವಲ್ ಅನ್ನು ಭಾರತೀಯ ಮಾರುಕಟ್ಟೆಗೆ ರಫ್ತು ಮಾಡುತ್ತದೆ.

ಕಂಪನಿಯ ಅತ್ಯುತ್ತಮ ಮಾರಾಟವಾದ ಕಾರು
ಆಂಧ್ರಪ್ರದೇಶದ ಅನಂತಪುರದಲ್ಲಿರುವ ತನ್ನ ಉತ್ಪಾದನಾ ಘಟಕದಿಂದ ವಿಶ್ವದಾದ್ಯಂತ 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಕಂಪನಿ ರಫ್ತು ಮಾಡಿದೆ ಎಂದು ಕಿಯಾ ಇಂಡಿಯಾ ಇತ್ತೀಚೆಗೆ ಘೋಷಿಸಿದೆ. ಇವುಗಳಲ್ಲಿ, ಕಿಯಾ ಸೆಲ್ಟೋಸ್‌ನ ಕೊಡುಗೆ ಅತಿ ದೊಡ್ಡ ಕೊಡುಗೆಯಾಗಿದೆ. ಭಾರತದಲ್ಲಿ ತಯಾರಾದ ಕಿಯಾ ಕಾರುಗಳು 95 ದೇಶಗಳನ್ನು ತಲುಪುತ್ತಿವೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಮಾರಾಟವಾಗುವ ಮಧ್ಯಮ ಗಾತ್ರದ SUV ಗಳಲ್ಲಿ ಸೆಲ್ಟೋಸ್ ಎರಡನೇ ಸ್ಥಾನದಲ್ಲಿದೆ. ಇದನ್ನು ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಎಂದೂ ಕೂಡ ಪರಿಗಣಿಸಲಾಗುತ್ತದೆ. ಸೆಲ್ಟೋಸ್ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಶೇ. 68 ರಷ್ಟು ರಫ್ತಾಗಿದ್ದರೇ, ದೇಶೀಯ ಮಾರುಕಟ್ಟೆಯಲ್ಲಿ ಶೇ.52ರಷ್ಟು ಮಾರಾಟ ಕಂಡಿದೆ. 

ಇದನ್ನೂ ಓದಿ-Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!

ಕಿಯಾ ಸೆಲ್ಟೋಸ್ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ₹ 1100000 ದಿಂದ  ಪ್ರಾರಂಭವಾಗುತ್ತದೆ. ಇದು 7 ಮೊನೊಟೋನ್ ಮತ್ತು 3 ಡ್ಯುಯಲ್ ಟೋನ್ ಆಯ್ಕೆಗಳೊಂದಿಗೆ ಒಟ್ಟು 10 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮೊದಲ ಎಂಜಿನ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎರಡನೆಯದು 1.5 ಲೀಟರ್ ಡೀಸೆಲ್ ಎಂಜಿನ್.

ಇದನ್ನೂ ಓದಿ-Salary Hike Update: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಡಿಎ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಮಹತ್ವದ ನಿರ್ಧಾರ ಪ್ರಕಟ!

ಕಿಯಾದಿಂದ ಇತರ ರಫ್ತು ಅಂಕಿಅಂಶಗಳಲ್ಲಿ, ಸೋನೆಟ್ ಮತ್ತು ಕಿಯಾ ಕ್ಯಾರೆನ್ಸ್ ಕ್ರಮವಾಗಿ 54,406 ಯುನಿಟ್ ಮತ್ತು 8,230 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ ತ್ರೈಮಾಸಿಕ ಆಧಾರದ ಮೇಲೆ ಶೇ. 22 ರಫ್ತು ಬೆಳವಣಿಗೆಯನ್ನು ದಾಖಲಿಸಿದೆ. ಇದೇ ವೇಳೆ ಕಂಪನಿಯು 2022-23 ಹಣಕಾಸು ವರ್ಷದಲ್ಲಿ ಶೇ. 44 ರಷ್ಟು  ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ. ಜಾಗತಿಕವಾಗಿ ಎಸ್‌ಯುವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತವು ಉತ್ಪಾದನಾ ಕೇಂದ್ರವಾಗಿ ಉತ್ತಮ ಸ್ಥಾನದಲ್ಲಿದೆ ಎಂದು ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್-ಸಿಕ್ ಸೋಹ್ನ್ ಹೇಳುತ್ತಾರೆ. ಮಧ್ಯಪ್ರಾಚ್ಯ, ಆಫ್ರಿಕಾ, ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾ, ಏಷ್ಯಾ ಪೆಸಿಫಿಕ್ ಪ್ರದೇಶದಂತಹ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಿಯಾ ಇಂಡಿಯಾ ಸೋನೆಟ್ ಮತ್ತು ಕ್ಯಾರೆನ್ಸ್‌ಗೆ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News