ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣದ ಹೊಳೆ ಖಂಡಿತಾ..! ಶೀಘ್ರ ದುಪ್ಪಟ್ಟಾಗಲಿದೆ ಮೊತ್ತ

ಪೋಸ್ಟ್ ಆಫೀಸ್ ಯೋಜನೆಗಳ ಪ್ರಮುಖ ವಿಷಯವೆಂದರೆ ನಿಮ್ಮ ಹಣ ಇಲ್ಲಿ ಸುರಕ್ಷಿತವಾಗಿರುತ್ತದೆ. ಹಣ ಕಳೆದುಕೊಳ್ಳುವ ಭಯವಿರುವುದಿಲ್ಲ. 

Written by - Ranjitha R K | Last Updated : Sep 20, 2021, 02:17 PM IST
  • ಪೋಸ್ಟ್ ಆಫೀಸ್ ಅನೇಕ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆ
  • ಈ ಯೋಜನೆಯಲ್ಲಿ ಸರ್ಕಾರದ ಗ್ಯಾರಂಟಿ ಇರುತ್ತದೆ
  • ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹಣ ಸುರಕ್ಷಿತವಾಗಿರುತ್ತದೆ
ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣದ ಹೊಳೆ ಖಂಡಿತಾ..! ಶೀಘ್ರ  ದುಪ್ಪಟ್ಟಾಗಲಿದೆ ಮೊತ್ತ  title=
ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹಣ ಸುರಕ್ಷಿತವಾಗಿರುತ್ತದೆ (file photo)

ನವದೆಹಲಿ : Post Office Saving Schemes:  ನಿಮ್ಮ ಹೂಡಿಕೆ ಸುರಕ್ಷಿತವಾಗಿರಬೇಕಾದರೆ, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ (Post office schemes) ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಪೋಸ್ಟ್ ಆಫೀಸ್ ಯೋಜನೆಗಳ ಪ್ರಮುಖ ವಿಷಯವೆಂದರೆ ನಿಮ್ಮ ಹಣ ಇಲ್ಲಿ ಸುರಕ್ಷಿತವಾಗಿರುತ್ತದೆ. ಹಣ ಕಳೆದುಕೊಳ್ಳುವ ಭಯವಿರುವುದಿಲ್ಲ. 

ಅಂಚೆ ಕಚೇರಿಯ ಎಲ್ಲಾ  ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಶೀಘ್ರದಲ್ಲೇ ಹಣ ದ್ವಿಗುಣಗೊಳ್ಳುತ್ತದೆ.

1. ಪೋಸ್ಟ್ ಆಫೀಸ್ ಟೈಂ  ಡೆಪಾಸಿಟ್ :
1 ವರ್ಷದಿಂದ 3 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ನಲ್ಲಿ (Td) 5.5%ಬಡ್ಡಿಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.  5 ವರ್ಷಗಳ ಟೈಮ್ ಡೆಪಾಸಿಟ್ (Time deposit) ಮೇಲೆ 6.7% ಬಡ್ಡಿ ಸಿಗುತ್ತದೆ. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ, ಹಣವು ಸುಮಾರು 10.75 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ:   LPG Cylinder Booking Bumper Offer: ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಬಂಪರ್ ಕೊಡುಗೆ, ಎಷ್ಟು ಲಾಭ ಸಿಗಲಿದೆ ಗೊತ್ತಾ?

2. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆ  :
ನಿಮ್ಮ ಹಣವನ್ನು ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ (Post office saving account) ಇರಿಸಿದರೆ, ಹಣ ದ್ವಿಗುಣಗೊಳ್ಳಲು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಅದು ವಾರ್ಷಿಕ 4.0 ಶೇಕಡಾ ಬಡ್ಡಿಯನ್ನು ಮಾತ್ರ ನೀಡುತ್ತದ. , ಅಂದರೆ, ನಿಮ್ಮ ಹಣವು 18 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

3. ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ : 
ಪ್ರಸ್ತುತ, ನಿಮಗೆ ಪೋಸ್ಟ್ ಆಫೀಸ್ RD ಮೇಲೆ 5.8% ಬಡ್ಡಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

4. ಪೋಸ್ಟ್ ಆಫೀಸ್ ಮಂಥ್ಲಿ ಇನ್ ಕಂ ಸ್ಕೀಮ್ :
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ 6.6%ಬಡ್ಡಿಯನ್ನು ಪಡೆಯುತ್ತಿದೆ.  ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ e-SHRAM ಪೋರ್ಟಲ್‌ನಲ್ಲಿ ನೋಂದಾಯಿಸಿ, 2 ಲಕ್ಷ ರೂ.ವರೆಗೆ ಲಾಭ ಪಡೆಯಿರಿ

5. ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಗೆ ಪ್ರಸ್ತುತ 7.4%ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನಿಮ್ಮ ಹಣ ಸುಮಾರು 9.73 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. 

6. ಅಂಚೆ ಕಚೇರಿ PPF :
ಅಂಚೆ ಕಚೇರಿಯ 15 ವರ್ಷದ ಸಾರ್ವಜನಿಕ ಭವಿಷ್ಯ ನಿಧಿ (PPF) ಪ್ರಸ್ತುತ 7.1%ಬಡ್ಡಿಯನ್ನು ಪಡೆಯುತ್ತಿದೆ. ಅಂದರೆ, ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳು ಬೇಕಾಗುತ್ತದೆ.

7. ಅಂಚೆ ಕಚೇರಿ ಸುಕನ್ಯಾ ಸಮೃದ್ಧಿ ಖಾತೆ :
ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ (Sukanya Samrudhi Scheme) ಖಾತೆ ಯೋಜನೆಯು ಪ್ರಸ್ತುತ 7.6%ನಷ್ಟು ಬಡ್ಡಿಯನ್ನು ನೀಡುತ್ತಿದೆ. ಹೆಣ್ಣು ಮಕ್ಕಳಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ, ಹಣವನ್ನು ದ್ವಿಗುಣಗೊಳಿಸಲು ಸುಮಾರು 9.47 ವರ್ಷಗಳು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ : Ration Card Services: ಈಗ ರೇಷನ್ ಕಾರ್ಡ್ ಸೌಲಭ್ಯ ಪಡೆಯುವುದು ತುಂಬಾ ಸುಲಭ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯ ಈ ಸೇವೆ

8. ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ :
ಪ್ರಸ್ತುತ, ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ (NSC) 6.8% ಬಡ್ಡಿ ನೀಡಲಾಗುತ್ತಿದೆ. ಇದು 5 ವರ್ಷದ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಕೂಡ ಉಳಿಸಬಹುದು. ಈ ಬಡ್ಡಿದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.59 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News