ನವದೆಹಲಿ: e-Shram Portal - ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಕಾರ್ಮಿಕ ಸಂಘಗಳಿಗೆ ಇ-ಶ್ರಮ ಪೋರ್ಟಲ್ ನಲ್ಲಿ (e-shram Portal) ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಪೋರ್ಟಲ್ನಲ್ಲಿ ಸುಮಾರು ಒಂದು ಕೋಟಿ ಕಾರ್ಮಿಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಕೇಂದ್ರ ಸಚಿವರು ಅಸಂಘಟಿತ ವಲಯದ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಸಂಪೂರ್ಣ ಬೆಂಬಲ ನೀಡುವಂತೆ ಒತ್ತಾಯಿಸಿದರು. ಇದರ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್, ಕೋವಿಡ್ -19 ಪರಿಹಾರ ಯೋಜನೆ, ಅಟಲ್ ವಿಮಾದಾರರ ಕಲ್ಯಾಣ ಯೋಜನೆ ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಕಾರ್ಮಿಕ ಕಾರ್ಡ್ ಅನ್ನು ಕಾರ್ಮಿಕರಿಗೆ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಅಸಂಘಟಿತ ವಲಯ ಕಾರ್ಮಿಕರಿಗೆ ಸಿಗಲಿದೆ 12 ಅಂಕಿಯ ವಿಶಿಷ್ಟ ಸಂಖ್ಯೆ:
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ವಲಯದ ಸುಮಾರು 38 ಕೋಟಿ ಕಾರ್ಮಿಕರಿಗಾಗಿ 12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮತ್ತು ಇ-ಶ್ರಮ್ ಕಾರ್ಡ್ (e-shram Card) ಅನ್ನು ನೀಡಲಿದೆ, ಇದು ದೇಶಾದ್ಯಂತ ಮಾನ್ಯವಾಗಿರುತ್ತದೆ. ಇ-ಶ್ರಮ್ ಕಾರ್ಡ್ ದೇಶದ ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ಹೊಸ ಗುರುತನ್ನು ನೀಡುತ್ತದೆ. ಭವಿಷ್ಯದಲ್ಲಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಈ ಕಾರ್ಮಿಕ ಕಾರ್ಡ್ ಅವರಿಗೆ ಸಹಾಯ ಮಾಡುತ್ತದೆ. ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು ತಮ್ಮನ್ನು ಈ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು.
ಈ ಯೋಜನೆಗಳ ಪ್ರಯೋಜನಗಳು:
ಸರ್ಕಾರದ ಈ ಘೋಷಣೆಯ ನಂತರ, ಈಗ ಅಸಂಘಟಿತ ವಲಯದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PMSYM), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- Ration Card Services: ಈಗ ರೇಷನ್ ಕಾರ್ಡ್ ಸೌಲಭ್ಯ ಪಡೆಯುವುದು ತುಂಬಾ ಸುಲಭ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯ ಈ ಸೇವೆ
PMSYM, PMJJBY, PMSBY ಮತ್ತು PM-JAY (ಆಯುಷ್ಮಾನ್ ಭಾರತ್) ಸೇರಿದಂತೆ ಸಾಮಾಜಿಕ ಭದ್ರತೆ (ಪಿಂಚಣಿ, ವಿಮೆ) ಯೋಜನೆಗಳನ್ನು ಡೇಟಾಬೇಸ್ಗೆ ಸೇರಿಸಲಾಗುವುದು ಎಂದು ಕಾರ್ಮಿಕ ಕಲ್ಯಾಣ ಮಹಾನಿರ್ದೇಶಕರು ಮತ್ತು ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಯ್ ತಿವಾರಿ ಹೇಳಿದರು. ಅಂದರೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ್ ಪೋರ್ಟಲ್ನಲ್ಲಿ (e-shram Portal) ನೋಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಗಳ ಲಾಭ ಪಡೆಯಬಹುದು.
5 ಲಕ್ಷ ರೂ.ವರೆಗಿನ ಉಚಿತ ಆರೋಗ್ಯ ವಿಮೆ :
ಆಯುಷ್ಮಾನ್ ಭಾರತ್ ಯೋಜನೆ (PM Shram Yogi Man Dhan Yojna) ಅಡಿಯಲ್ಲಿ, ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮಾ ರಕ್ಷಣೆ ನೀಡಲಾಗುತ್ತದೆ.
PMSYM ನಲ್ಲಿ 3000 ರೂ . ಪಿಂಚಣಿ ಲಭ್ಯವಿದೆ:
ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದೆ. ಇದರ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಇತರ ಅನೇಕ ಕೆಲಸಗಳಲ್ಲಿ ತೊಡಗಿರುವ ಜನರು ತಮ್ಮ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಕೊಳ್ಳಲು ಸಹಾಯ ಮಾಡುತ್ತಾರೆ. ಈ ಯೋಜನೆಯಡಿ, ತಿಂಗಳಿಗೆ 3000 ರೂ. ಅಂದರೆ ವರ್ಷಕ್ಕೆ 36000 ರೂ. ಪಿಂಚಣಿ ಲಭ್ಯವಿರುತ್ತದೆ.
2019-20ರ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಅಂದಾಜು 38 ಕೋಟಿ ಅಸಂಘಟಿತ ಕಾರ್ಮಿಕರು (ಯುಡಬ್ಲ್ಯೂ) ಇದ್ದು, ಈ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಗುರಿ ಹೊಂದಲಾಗಿದೆ. ಈ ವಲಸೆ ಕಾರ್ಮಿಕರು ಈಗ ಇ-ಶ್ರಮ ಪೋರ್ಟಲ್ನಲ್ಲಿ ನೋಂದಣಿ ಮೂಲಕ ವಿವಿಧ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಆಧಾರಿತ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇ-ಶ್ರಮ ಪೋರ್ಟಲ್ನಲ್ಲಿ ನೋಂದಣಿ ಮತ್ತು ಅದರಿಂದ ಸಿಗುವ ಲಾಭ:
>> ವಲಸೆ ಕಾರ್ಮಿಕರು ಇ-ಶ್ರಮ ಪೋರ್ಟಲ್-http://eshram.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.
>> ಸ್ವಯಂ ನೋಂದಣಿ, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಮತ್ತು ರಾಜ್ಯ ಸರ್ಕಾರಗಳ ಪ್ರಾದೇಶಿಕ ಕಚೇರಿಗಳ ಮೂಲಕ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಬಹುದು.
>> ನೋಂದಾಯಿಸುವಾಗ ವಲಸೆ ಕಾರ್ಮಿಕರು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಹಾಯ ಕೇಂದ್ರ ಸಂಖ್ಯೆ 14434 ಗೆ ಕರೆ ಮಾಡಿ.
>> ವಲಸೆ ಕಾರ್ಮಿಕರು ನೋಂದಣಿ ನಂತರ ಸ್ವೀಕರಿಸಿದ ಇ-ಶ್ರಮ ಕಾರ್ಡ್ ದೇಶಾದ್ಯಂತ ಮಾನ್ಯವಾಗಿರಲಿದೆ ಎಂಬುದನ್ನು ನೆನಪಿನಲ್ಲಿಡಬೇಕು.
>> ಅವರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮೂಲಕ ಆಕಸ್ಮಿಕ ವಿಮಾ ರಕ್ಷಣೆಗೆ ಅರ್ಹರಾಗಿದ್ದಾರೆ.
>> ಆಕಸ್ಮಿಕ ಸಾವು ಮತ್ತು ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು 2 ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ.
>> ಇವುಗಳಲ್ಲದೆ, ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ 1 ಲಕ್ಷ ರೂ. ವಿಮೆಯ ಸೌಲಭ್ಯವನ್ನೂ ಪಡೆಯಬಹುದು.
>> ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಇ-ಶ್ರಮ ಪೋರ್ಟಲ್ ಮೂಲಕ ತಲುಪಿಸಲಾಗುವುದು ಎಂಬುದನ್ನು ಗಮನಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.