ಒಂದಲ್ಲ ಎರಡಲ್ಲಾ ಏಕಕಾಲಕ್ಕೆ 5 ಸರ್ಕಾರಿ ಉದ್ಯೋಗದ ಪರೀಕ್ಷೆಗಳಲ್ಲಿ ಉತ್ತೀರ್ಣಳಾದ ಯುವತಿ!

Tinu Kumari Success Story: ಸರ್ಕಾರಿ ನೌಕರಿ ಪಡೆಯಲು ಅನೇಕರು ಹಗಲಿರುಳು ಶ್ರಮಿಸಿದರೂ ಹಲವು ಬಾರಿ ಯಶಸ್ಸು ಸಿಗುವುದಿಲ್ಲ. ಇದೆಲ್ಲದರ ನಡುವೆ ಜಮುಯಿ ಯುವತಿಯೊಬ್ಬಳು ಅದ್ಭುತ ಸಾಧನೆ ಮಾಡಿದ್ದಾಳೆ. ಈಕೆ ಏಕಕಾಲದಲ್ಲಿ 5 ಸರ್ಕಾರಿ ಉದ್ಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

Written by - Puttaraj K Alur | Last Updated : Jan 6, 2024, 02:49 PM IST
  • ಒಂದಲ್ಲ ಎರಡಲ್ಲಾ ಏಕಕಾಲಕ್ಕೆ 5 ಸರ್ಕಾರಿ ಉದ್ಯೋಗದ ಪರೀಕ್ಷೆಗಳಲ್ಲಿ ಉತ್ತೀರ್ಣ
  • ತಾಯಿಯ ಕನಸು ನನಸು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾದ ಯುವತಿ
  • ಬಿಹಾರದ ಜಮುಯಿ ಜಿಲ್ಲೆಯ ಈ ಯುವತಿ ಸ್ಟೋರಿ ಕೇಳಿದ್ರೆ ನೀವೂ ಸೆಲ್ಯೂಟ್ ಹೊಡೆಯುತ್ತೀರಿ
ಒಂದಲ್ಲ ಎರಡಲ್ಲಾ ಏಕಕಾಲಕ್ಕೆ 5 ಸರ್ಕಾರಿ ಉದ್ಯೋಗದ ಪರೀಕ್ಷೆಗಳಲ್ಲಿ ಉತ್ತೀರ್ಣಳಾದ ಯುವತಿ! title=
ಬಿಹಾರ ಯುವತಿಯ ಸಾಧನೆ

ನವದೆಹಲಿ: ಬಿಹಾರದ ಮಹಿಳೆಯೊಬ್ಬರು ಅಧಿಕಾರಿಯಾಗುವ ಕನಸು ಕಂಡಿದ್ದರು. ಆದರೆ ಮಕ್ಕಳನ್ನು ಬೆಳೆಸುವ ಉದ್ದೇಶದಿಂದ ಅವರ ಕನಸು ನನಸಾಗಲು ಸಾಧ್ಯವಾಗಲಿಲ್ಲ. ಇದೀಗ ಈ ಮಹಿಳೆಯ ಮಗಳು ತನ್ನ ತಾಯಿಯ ಕನಸನ್ನು ನನಸು ಮಾಡಿದ್ದಾಳೆ. ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ಪಿಂಕಿ ಸಿಂಗ್ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದಿದ್ದಾರೆ. ಬಿಎಡ್ ಪದವಿಯನ್ನೂ ಪಡೆದಿದ್ದಾರೆ. ಓದಿದ ನಂತರ ಅಧಿಕಾರಿಯಾಗಬೇಕೆಂದು ಬಯಸಿದ್ದಳು. ಆದರೆ ಸಂದರ್ಭಗಳಿಂದಾಗಿ ಅವರ ಕನಸು ನನಸಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಗೃಹಿಣಿಯಾಗಿ ತನ್ನ ಮಕ್ಕಳನ್ನು ಬೆಳೆಸಿದರು. ಆದರೆ ಪಿಂಕಿ ಮಗಳು ಟಿನು ಸಿಂಗ್ ಈಗ ಬೆಳೆದು ದೊಡ್ಡವಳಾಗಿದ್ದು, ತಾಯಿ ಮಾಡಲಾಗದ ಸಾಧನೆಯನ್ನು ಮಾಡಿದ್ದಾಳೆ.

5 ಪರೀಕ್ಷೆಗಳಲ್ಲಿ ಟಿನು ಉತ್ತೀರ್ಣ

ಟಿನು ಕುಮಾರಿ ಒಂದರ ನಂತರ ಒಂದರಂತೆ 5 ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ. ಟಿನುವಿನ ಈ ಯಶಸ್ಸಿನಿಂದ ಅವರ ಕುಟುಂಬ ಹೆಮ್ಮೆ ಪಡುತ್ತಿದೆ. ಅಕ್ಕಪಕ್ಕದವರೂ ತುಂಬಾ ಖುಷಿಯಾಗಿದ್ದಾರೆ. ಯಶಸ್ಸು ಕಂಡರೂ ಟಿನುವಿನ ಕನಸು ಇನ್ನೂ ನನಸಾಗಿಲ್ಲ, ಮುಂದೆ ಓದಿ ಆಕೆಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇದೆ.

ತಾಯಿಯ ಕನಸನ್ನು ನನಸು ಮಾಡಿದ ಟಿನು

ತಾಯಿಯ ಕನಸನ್ನು ನನಸಾಗಿಸಲು ಟಿನು ಕುಮಾರಿ ಒಂದಲ್ಲ ಎರಡಲ್ಲ 5 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಏಕಕಾಲಕ್ಕೆ ಯಶಸ್ಸು ಸಾಧಿಸಿದ್ದಾಳೆ. ಟಿನು ಸಿಂಗ್ ಅವರ ತಂದೆ ಮುನ್ನಾ ಕುಮಾರ್ ಸಿಂಗ್ ಸಿಆರ್‌ಪಿಎಫ್‌ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದರೆ, ತಾಯಿ ಪಿಂಕಿ ಸಿಂಗ್ ಗೃಹಿಣಿ. ಟಿನುವಿನ ಯಶಸ್ಸಿನಿಂದ ಇಬ್ಬರೂ ತುಂಬಾ ಖುಷಿಯಾಗಿದ್ದಾರೆ.

ಇದನ್ನೂ ಓದಿ: Gautam Adani : ಅಂಬಾನಿ ಹಿಂದಿಕ್ಕಿ ʼಏಷ್ಯಾದ ಶ್ರೀಮಂತ ವ್ಯಕ್ತಿʼಯಾದ ಅದಾನಿ..! ಅವರ ನಿವ್ವಳ ಮೌಲ್ಯ ಇಷ್ಟು

ಟಿನು ಯಾವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾಳೆ?

ಟಿನು ಡಿಸೆಂಬರ್ ಕೊನೆಯ ವಾರದಲ್ಲಿ ಏಕಕಾಲದಲ್ಲಿ 5 ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ್ದಾಳೆ. ಡಿಸೆಂಬರ್ 22ರಂದು ಆಕೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಆಯ್ಕೆಯಾದರು. ಮರುದಿನ ಡಿಸೆಂಬರ್ 23ರಂದು ಟಿನು ಬಿಹಾರದ SSC CGL ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದರು ಮತ್ತು ಸಹಾಯಕ ಶಾಖೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾದರು.

BPSC ಉತ್ತೀರ್ಣರಾಗಿ ದಾಖಲೆ  

ಇದರ ನಂತರ ಟಿನು 6-8ನೇ ತರಗತಿಯ BPSCಯ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದರು. ಇದಲ್ಲದೆ ಆಕೆ ಮಾಧ್ಯಮಿಕ ಶಾಲೆಯ 9ರಿಂದ 10ನೇ ತರಗತಿ ಕೇಡರ್ ಮತ್ತು ಹೈಯರ್ ಸೆಕೆಂಡರಿ 11 ರಿಂದ 12ನೇ ತರಗತಿ ಕೇಡರ್‌ಗೆ ಬಿಪಿಎಸ್‌ಸಿ ಶಿಕ್ಷಕರ ನೇಮಕಾತಿಯಲ್ಲಿ ಯಶಸ್ಸನ್ನು ಪಡೆದರು. ಟಿನು ತನ್ನ ಯಶಸ್ಸಿನ ಶ್ರೇಯವನ್ನು ತನ್ನ ತಂದೆ-ತಾಯಿ, ಸಹೋದರ ಮತ್ತು ತನ್ನ ತಾಯಿಯ ಚಿಕ್ಕಪ್ಪನಿಗೆ ನೀಡಿದ್ದಾರೆ.

ಅಧ್ಯಯನಕ್ಕಾಗಿ ಸಾಮಾಜಿಕ ಮಾಧ್ಯಮದಿಂದ ದೂರ

ಇಂದು ಹೆಚ್ಚಿನ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರೂ, ನಾನು ಎಂದಿಗೂ ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲವೆಂದು ಟಿನು ಹೇಳಿದ್ದಾರೆ. ಅವರು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಖಾತೆಯನ್ನು ಹೊಂದಿಲ್ಲ. ನಾನು ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿದೆ. ಮನುಷ್ಯನ ಆತ್ಮೀಯ ಸ್ನೇಹಿತ ಪುಸ್ತಕ ಮತ್ತು ಸತತ ಅಧ್ಯಯನದ ನಂತರವೇ ಯಶಸ್ಸು ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಹ ಕಷ್ಟಪಟ್ಟು ಓದಿ ಯಶಸ್ಸು ಸಾಧಿಸಿ ಅಂತಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Aditya L-1: ಮತ್ತೊಂದು ಇತಿಹಾಸ ಬರೆಯಲು ಸಜ್ಜಾದ ಇಸ್ರೋ..! ಇಂದು ಸೂರ್ಯನ ಮೇಲೆ ಅಂತಿಮ ಜಿಗಿತ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News