ಹಿಂದಿ ಟೀಚರ್ ನಿಂದ ಹೀನಾಯ ಕೃತ್ಯ: ನೊಂದ ಬಾಲಕನಿಗೆ 1 ಲಕ್ಷ ರೂ. ಪರಿಹಾರ

ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಶಿಕ್ಷಣ ಸಂಸ್ಥೆಯ ಶಿಕ್ಷಕ ಅರುಣ್ ಕುಮಾರ್ ಎಂಬಾತ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದನು.  

Written by - Yashaswini V | Last Updated : Apr 18, 2024, 11:23 AM IST
  • ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿದೆ.
  • ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಬಾಲಕನಿಗೆ ಪರಿಹಾರ ನೀಡಿದ ಪ್ರಕರಣ ರಾಜ್ಯದಲ್ಲೇ ಮೊದಲು ಎಂದು ಹೇಳಲಾಗಿದೆ.
ಹಿಂದಿ ಟೀಚರ್ ನಿಂದ ಹೀನಾಯ ಕೃತ್ಯ: ನೊಂದ ಬಾಲಕನಿಗೆ 1 ಲಕ್ಷ ರೂ. ಪರಿಹಾರ title=

ಚಾಮರಾಜನಗರ: ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನಿಗೆ ಸಮಾಜ ಕಲ್ಯಾಣ ಇಲಾಖೆಯು 1 ಲಕ್ಷ ಪರಿಹಾರವನ್ನು ಕೊಟ್ಟಿದ್ದು ಇದು ಬಾಲಕನಿಗೆ ಪೋಕ್ಸೊ ಅಡಿ ಕೊಟ್ಟ ಮೊದಲ ಪರಿಹಾರವಾಗಿದೆ‌.

ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಶಿಕ್ಷಣ ಸಂಸ್ಥೆಯ ಶಿಕ್ಷಕ ಅರುಣ್ ಕುಮಾರ್ ಎಂಬಾತ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ (Sexual assault on a student) ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದನು.

ಇದನ್ನೂ ಓದಿ- Hyderabad: ಪುಳಿಯೋಗರೆ ಸೇವಿಸಿ ಸಾವನ್ನಪ್ಪಿದ ವಿದ್ಯಾರ್ಥಿ..!

ಶಿಕ್ಷಕರ ಇಂತಹ ವರ್ತನೆಯಿಂದ ಮನನೊಂದ ಬಾಲಕನು ಈ ಸಂಬಂಧ ದೂರು ಕೊಟ್ಟು ಅಳಲು ತೋಡಿಕೊಂಡಿದ್ದ ಬಳಿಕ ಶಿಕ್ಷಕನನ್ನು ನ್ಯಾಯಾಂಗ ಬಂಧನ (Judicial Custody)ಕ್ಕೆ ಒಪ್ಪಿಸಲಾಗಿತ್ತು. ಇದೀಗ ಈ ಸಂತ್ರಸ್ತ ಬಾಲಕನಿಗೆ (victim boy) ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಘೋಷಣೆ ಮಾಡಲಾಗಿದೆ. 

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ  ಬಾಲಕನಿಗೆ  ಪರಿಹಾರ ನೀಡಿದ ಪ್ರಕರಣ ರಾಜ್ಯದಲ್ಲೇ ಮೊದಲು ಎಂದು ಹೇಳಲಾಗಿದೆ. ಪೋಕ್ಸೋ ಪ್ರಕರಣ (POCSO case)ದಲ್ಲಿ ಸಂತ್ರಸ್ತರಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿದೆ. ಹೀಗಾಗಿ ಬಾಲಕನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಇದನ್ನೂ ಓದಿ- Rajasthan: ಟ್ರಕ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, 7 ಮಂದಿ ಸಜೀವ ದಹನ!

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚು ಬಾಲಕಿಯರು ಸಂತ್ರಸ್ಥೆಯಾಗಿರುತ್ತಾರೆ. ಈ ಪ್ರಕರಣದಲ್ಲಿ ಬಾಲಕ ಸಂತ್ರಸ್ಥನಾಗಿದ್ದಾನೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News