ಜೈಲು ಹಕ್ಕಿಗಳಿಗೆ ಐಟಿಐ ಕೋರ್ಸ್: ರಾಜ್ಯದಲ್ಲಿ ಇದೇ ಮೊದಲು..!

ಕೈದಿಗಳನ್ನು ಶಿಕ್ಷೆ ಅವಧಿ ಮುಗಿದ ಮೇಲೆ ಗೌರವಯುತ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಲಿ ಎಂದು ವೃತ್ತಿಪರ ಶಿಕ್ಷಣ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಟಿಐ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯೊಂದನ್ನು ರಾಜ್ಯ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. 

Written by - VISHWANATH HARIHARA | Edited by - Chetana Devarmani | Last Updated : May 29, 2022, 03:38 PM IST
  • ಜೈಲು ಹಕ್ಕಿಗಳಿಗೆ ಐಟಿಐ ಕೋರ್ಸ್
  • ಕೈದಿಗಳಿಗೆ ವೃತ್ತಿಪರ ಐಟಿಐ ಶಿಕ್ಷಣ ಭಾಗ್ಯ
  • ಕೇಂದ್ರ ಕಾರಾಗೃಹದಲ್ಲಿ ಐಟಿಐ ಕಾಲೇಜು ಸ್ಥಾಪಿಸುವ ಪ್ರಸ್ತಾವನೆ
ಜೈಲು ಹಕ್ಕಿಗಳಿಗೆ ಐಟಿಐ ಕೋರ್ಸ್: ರಾಜ್ಯದಲ್ಲಿ ಇದೇ ಮೊದಲು..!  title=
ಐಟಿಐ ಕೋರ್ಸ್

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಕೆಲವೇ ದಿನಗಳಲ್ಲಿ ವೃತ್ತಿಪರ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ. ಕೈದಿಗಳನ್ನು ಶಿಕ್ಷೆ ಅವಧಿ ಮುಗಿದ ಮೇಲೆ ಗೌರವಯುತ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಲಿ ಎಂದು ವೃತ್ತಿಪರ ಶಿಕ್ಷಣ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಟಿಐ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯೊಂದನ್ನು ರಾಜ್ಯ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. 

ಇದನ್ನೂ ಓದಿ: Karnataka New chief secretary : ರಾಜ್ಯ ಸರ್ಕಾರದ ಹೊಸ CS ಆಗಿ ವಂದಿತಾ ಶರ್ಮಾ ನೇಮಕ!

ಐಟಿಐ ಕಾಲೇಜು ಸ್ಥಾಪನೆ ಮಂಜೂರು ಪ್ರಕ್ರಿಯೆ ನಡೆದಿದ್ದು, ಕೆಲವೇ ತಿಂಗಳಲ್ಲಿ ಜೈಲು ಹಕ್ಕಿಗಳಿಗೂ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ ಎನ್ನಲಾಗಿದೆ. ಕಾಲೇಜು ಆರಂಭವಾದ ಬಳಿಕ  ಮೊದಲ ಬಾರಿಗೆ ಜೈಲಿನಲ್ಲಿ ಕಾಲೇಜು ಸ್ಥಾಪಿಸಿದ ಹೆಗ್ಗಳಿಕೆಗೆ ಸರ್ಕಾರ ಪಾತ್ರವಾಗಲಿದೆ. ಈ ಐಟಿಐ ಕಾಲೇಜು ಸರ್ಕಾರಿ ಕಾಲೇಜಿನ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. 

ಮೊದಲ ಹಂತದಲ್ಲಿ 6 ತಿಂಗಳ ಅಲ್ಪಾವಧಿ ಕೋರ್ಸ್‌, ಎರಡು ವರ್ಷಗಳ ವೃತ್ತಿ ಶಿಕ್ಷಣ ಸಂಬಂಧಿ ಐಟಿಐ, ಎಲೆಕ್ಟ್ರಾನಿಕ್ಸ್‌ ಆರಂಭಿಸಲಾಗುತ್ತದೆ. ಕೋರ್ಸ್‌ ಮುಗಿಸಿದವರಿಗೆ ಸರ್ಟಿಫಿಕೇಟ್‌ ಸಹ ನೀಡಲಾಗುತ್ತದೆ. ಎರಡು ವರ್ಷಗಳ ಈ ಕೋರ್ಸ್‌ ತರಬೇತಿ ಪಡೆಯಲು ಕನಿಷ್ಟ 8ನೇ ತರಗತಿ ಪಾಸಾಗಿರಬೇಕು. 

ಇನ್ನೂ ಮೇ ಮೊದಲ ವಾರದಿಂದ 24 ಸಜಾ ಕೈದಿಗಳಿಗೆ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಮಾಡುವ ತರಬೇತಿ ನೀಡಲಾಗುತ್ತದೆ ಎಂದು ಪರಪ್ಪನ ಅಗ್ರಹಾರ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸೂಟ್‌ಕೇಸ್‌ನಲ್ಲಿ ಹೆರಾಯಿನ್‌ ಸಾಗಾಟ: 52 ಕೋಟಿ ಮೌಲ್ಯದ ಡ್ರಗ್‌ ವಶ, ಮಹಿಳೆ ಸೇರಿ 9 ಮಂದಿ ಬಂಧನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News