ಸೂಟ್‌ಕೇಸ್‌ನಲ್ಲಿ ಹೆರಾಯಿನ್‌ ಸಾಗಾಟ: 52 ಕೋಟಿ ಮೌಲ್ಯದ ಡ್ರಗ್‌ ವಶ, ಮಹಿಳೆ ಸೇರಿ 9 ಮಂದಿ ಬಂಧನ!

ಜಿಂಬಾಬ್ವೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ತನ್ನ ಸೂಟ್‌ಕೇಸ್‌ನ ತಳಭಾಗದಲ್ಲಿ ಹೆರಾಯಿನ್‌ ಸಾಗಾಟ ಮಾಡುತ್ತಿದ್ದಳು. ತಪಾಸಣೆ ವೇಳೆ ಹೆರಾಯಿನ್ ಪತ್ತೆಯಾಗಿದ್ದು, ತಕ್ಷಣವೇ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಮತ್ತಿಬ್ಬರು ಪೆಡ್ಲರ್‌ಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ ಈ ಹಿನ್ನೆಲೆಯಲ್ಲಿ ಮತ್ತಿಬ್ಬರು ಪೆಡ್ಲರ್‌ಗಳ ಬಂಧಿಸಲಾಗಿದೆ.   

Written by - Bhavishya Shetty | Last Updated : May 28, 2022, 09:27 AM IST
  • ಸೂಟ್‌ಕೇಸ್‌ ಮೂಲಕ ಡ್ರಗ್‌ ಕಳ್ಳಸಾಗಾಟ
  • ಮಹಿಳೆ ಸೇರಿ ಒಂಬತ್ತು ಪೆಡ್ಲರ್‌ಗಳ ಬಂಧನ
  • ಎನ್‌ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ
ಸೂಟ್‌ಕೇಸ್‌ನಲ್ಲಿ ಹೆರಾಯಿನ್‌ ಸಾಗಾಟ: 52 ಕೋಟಿ ಮೌಲ್ಯದ ಡ್ರಗ್‌ ವಶ, ಮಹಿಳೆ ಸೇರಿ 9 ಮಂದಿ ಬಂಧನ! title=
Heroin Smuggling

ಬೆಂಗಳೂರು: ಸೂಟ್‌ಕೇಸ್‌ ತಳಭಾಗದಲ್ಲಿ ಹೆರಾಯಿನ್‌ ಸಾಗಾಟ ಮಾಡುತ್ತಿದ್ದ ಮಹಿಳೆ ಸೇರಿ ಒಂಬತ್ತು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ಸಂದರ್ಭದ ಓರ್ವ ಪೆಡ್ಲರ್‌ ನೀಡಿದ ಮಾಹಿತಿ ಆಧರಿಸಿ ಒಂಬತ್ತು ಮಂದಿಯನ್ನು ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. 

ಇದನ್ನು ಓದಿ: ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಈ 5 ಕೆಲಸಗಳನ್ನು ಮಾಡಿ, ಇಡೀ ದಿನ ಅದ್ಭುತವಾಗಿರುತ್ತದೆ!

ಜಿಂಬಾಬ್ವೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ತನ್ನ ಸೂಟ್‌ಕೇಸ್‌ನ ತಳಭಾಗದಲ್ಲಿ ಹೆರಾಯಿನ್‌ ಸಾಗಾಟ ಮಾಡುತ್ತಿದ್ದಳು. ತಪಾಸಣೆ ವೇಳೆ ಹೆರಾಯಿನ್ ಪತ್ತೆಯಾಗಿದ್ದು, ತಕ್ಷಣವೇ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಮತ್ತಿಬ್ಬರು ಪೆಡ್ಲರ್‌ಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ ಈ ಹಿನ್ನೆಲೆಯಲ್ಲಿ ಮತ್ತಿಬ್ಬರು ಪೆಡ್ಲರ್‌ಗಳ ಬಂಧಿಸಲಾಗಿದೆ. 

ಅವರನ್ನು ವಿಚಾರಣೆ ನಡೆಸಿದ ವೇಳೆ ಮತ್ತಷ್ಟು ಮಾಹಿತಿ ಹೊರಬಂದಿದೆ. ಇನ್ನು ಈ ಮಹಿಳೆಯರು ತಂಗಿದ್ದ ಲಾಡ್ಜ್‌ನಲ್ಲಿ ತಪಾಸಣೆ ನಡೆಸುವಾಗ ಅದೇ ಮಾದರಿಯ ಬ್ಯಾಗ್‌ನಲ್ಲಿ 6.890 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಇನ್ನುಳಿದ ಮೂವರು ಪೆಡ್ಲರ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ ಅಧಿಕಾರಿಗಳು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಎನ್‌ಸಿಬಿ ಟೀಗೆ ಮಾಹಿತಿ ರವಾನೆ ಮಾಡಿದ್ದಾರೆ. ಏಕೆಂದರೆ ಪೆಡ್ಲರ್‌ಗಳು ರಾಜಧಾನಿ ಎಕ್ಸ್‌ಪ್ರೆಸ್‌ ಮೂಲಕ ಬೆಂಗಳೂರಿಂದ ದೆಹಲಿಗೆ ತೆರಳಿರುವ ಮಾಹಿತಿ ಲಭಿಸಿತ್ತು. 

ತಕ್ಷಣವೇ ಕಾರ್ಯಪ್ರವೃತ್ತರಾದ ಎನ್‌ಸಿಬಿ ಅಧಿಕಾರಿಗಳು ಇಟಾರ್ಸಿಯ ಲಾಡ್ಜ್‌ ಮೇಲೆ ದಾಳಿ ನಡೆಸಿ ಮೂವರ ಮಹಿಳೆಯರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ,  21 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆಯರನ್ನು ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಮಹತ್ತರ ಮಾಹಿತಿಯೊಂದು ಲಭಿಸಿದೆ. ನೈಜೀರಿಯಾದ ಕಿಂಗ್ ಪಿನ್ಈ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದು, ಆತ ದೆಹಲಿಯಲ್ಲಿ ಡ್ರಗ್‌ ಜಾಲ ನಡೆಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ. 

ಇದನ್ನು ಓದಿ: ಇಂದಿನ ರಾಶಿ ಭವಿಷ್ಯ : ಇಂದು, ಶನಿದೇವ ಈ 5 ರಾಶಿಯವರಿಗೆ ವಿಶೇಷ ಅನುಗ್ರಹ ಇದೆ!

ಸದ್ಯ ಪೆಡ್ಲರ್‌ಗಳಿಂದ 52 ಕೋಟಿ ಮೌಲ್ಯದ 34.89 ಕೆಜಿ ಹೆರಾಯಿನ್‌ನನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News