ಘೋರ ದುರಂತ: ಮನೆಗೆ ಬೆಂಕಿ ಬಿದ್ದು ಮಗು ಸೇರಿ ನಾಲ್ವರು ಸಜೀವ ದಹನ..!

Dwarka Terrible Tragedy: ದ್ವಾರಕಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 7 ತಿಂಗಳ ಮಗಳು, ಗಂಡ ಮತ್ತು ಹೆಂಡತಿ ಮತ್ತು ಅಜ್ಜಿ ಸೇರಿದ್ದಾರೆ. 

Written by - Puttaraj K Alur | Last Updated : Mar 31, 2024, 02:10 PM IST
  • ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಮಗು ಸೇರಿ ನಾಲ್ವರು ಸಜೀವ ದಹನ
  • ಗುಜರಾತ್‌ನ ದ್ವಾರಕಾ ಜಿಲ್ಲೆಯಲ್ಲಿಯೇ ಈ ಘೋರ ದುರಂತ ಸಂಭವಿಸಿದೆ
  • ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸುಟ್ಟು ಕರಕಲಾಗಿದ್ದಾರೆ
ಘೋರ ದುರಂತ: ಮನೆಗೆ ಬೆಂಕಿ ಬಿದ್ದು ಮಗು ಸೇರಿ ನಾಲ್ವರು ಸಜೀವ ದಹನ..! title=
ನಾಲ್ವರು ಸಜೀವ ದಹನ!

ನವದೆಹಲಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಮಗು ಸೇರಿ ನಾಲ್ವರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಗುಜರಾತ್‌ನ ದ್ವಾರಕಾ ಜಿಲ್ಲೆಯಲ್ಲಿಯೇ ಈ ಘೋರ ದುರಂತ ಸಂಭವಿಸಿದೆ.

ದುರ್ಘಟನೆಯಲ್ಲಿ ಕಮಲೇಶ್ ಉಪಾಧ್ಯಾಯ (30), ಪವನ್ ಉಪಾಧ್ಯಾಯ (27), ಧ್ಯಾನ ಉಪಾಧ್ಯಾಯ (7 ತಿಂಗಳು) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಬರ್ತಡೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಜನ್ಮದಿನದಂದೇ ಬಾಲಕಿ ಸಾವು

ದ್ವಾರಕಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 7 ತಿಂಗಳ ಮಗಳು, ಗಂಡ ಮತ್ತು ಹೆಂಡತಿ ಮತ್ತು ಅಜ್ಜಿ ಸೇರಿದ್ದಾರೆ. 

ಮುಂಜಾನೆ 3 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಶಾಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅಗ್ನಿಯ ಜಾಲ್ವೆಗೆ ಸಿಲುಕಿ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ. ಅದರೊಳಗೆ ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಬಿಟ್ಟಿದ್ದಾರೆ. 

ಇದನ್ನೂ ಓದಿ: OMG: ʼಫಸ್ಟ್ ನೈಟ್ʼ ದಿನವೇ ಬೆಡ್‌ರೂಂ​ನಲ್ಲಿ ಪ್ರಾಣ ಬಿಟ್ಟ ವಧು! ಏನಾಗಿತ್ತು ಗೊತ್ತಾ?

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತರ ನಾಲ್ವರ ಶವಗಳೂ ಸುಟ್ಟು ಕರಕಲಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News