ʼಸಲಾರ್ʼ ಸಿನಿಮಾ ನೋಡೋಕೆ ಉಚಿತ ಟಿಕೆಟ್ ಬೇಕಾ..? ಬಂಪರ್ ಆಫರ್ ಇಲ್ಲಿದೆ

Salaar free tickets : ಸಲಾರ್‌ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸಾಲಾರ್ ಭಾಗ 1 ಸೀಜ್ ಫೈರ್ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಲಿದೆ. ಬಾಹುಬಲಿ ನಂತರ ಡಾರ್ಲಿಂಗ್‌ ಆ ರೇಂಜ್‌ನಲ್ಲಿ ಹಿಟ್ ಸಿನಿಮಾ ನೀಡದ ಕಾರಣ ಅವರ ಅಭಿಮಾನಿಗಳು ಈ ಸಿನಿಮಾದ ಮೇಲೆ ಬೆಟ್ಟದಷ್ಟು ಆಸೆಯನ್ನು ಹೊತ್ತುಕೊಂಡಿದ್ದಾರೆ. ಸಧ್ಯ ಡಾರ್ಲಿಂಗ್‌ ಪ್ಯಾನ್ಸ್‌ಗೆ ಬಂಪರ್‌ ಆಫರ್‌ ಇದೆ..

Written by - Krishna N K | Last Updated : Dec 16, 2023, 06:41 PM IST
  • ಡಾರ್ಲಿಂಗ್‌ ಪ್ರಭಾಸ್ ನಾಯಕನಾಗಿ ನಟಿಸಿರುವ ಸಿನಿಮಾ ʼಸಲಾರ್‌ʼ.
  • ಸಲಾರ್‌ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇದೆ.
  • ಸಧ್ಯ ನಟ ನಿಖಿಲ್‌ ಸಲಾರ್‌ ಅಭಿಮಾನಿಗಳಿಗೆ ಬಂಪರ್‌ ಆಫರ್‌ ನೀಡಿದ್ದಾರೆ.
 ʼಸಲಾರ್ʼ ಸಿನಿಮಾ ನೋಡೋಕೆ ಉಚಿತ ಟಿಕೆಟ್ ಬೇಕಾ..? ಬಂಪರ್ ಆಫರ್ ಇಲ್ಲಿದೆ title=

Nikhil Siddharth free ticket : ಡಾರ್ಲಿಂಗ್‌ ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್‌ ಹಲವು ನಿರೀಕ್ಷೆಗಳನ್ನು ಹೊತ್ತು ಬಿಡುಗಡೆಗೆ ರೆಡಿಯಾಗಿದೆ. ಸಧ್ಯ ಈ ಸಿನಿಮಾ ನೋಡಲು 100 ಮಂದಿಗೆ ಉಚಿತ ಟಿಕೆಟ್ ನೀಡುವುದಾಗಿ ತೆಲುಗು ನಟ ನಿಖಿಲ್ ಸಿದ್ಧಾರ್ಥ್‌ ಘೋಷಣೆ ಮಾಡಿದ್ದಾರೆ. ಇದೀಗ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯ ಡಾರ್ಲಿಂಗ್‌ ಅಭಿಮಾನಿಗಳ ನಿರೀಕ್ಷೆಯು ಸಲಾರ್ ಚಿತ್ರದ ಮೇಲೆ ಹೆಚ್ಚಿದೆ. ಅದಕ್ಕೆ ಮುಖ್ಯ ಕಾರಣ ಈ ಸಿನಿಮಾಗೆ ಕೆಜಿಎಫ್ ನಂತಹ ಬ್ಲಾಕ್ ಬಸ್ಟರ್ ಕೊಟ್ಟ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವುದು.

ಇದನ್ನೂ ಓದಿ: ಶತಕೋಟಿ ಆಸ್ತಿ ಒಡೆಯ ನಟ ಅಮಿತಾಬ್ ಬಚ್ಚನ್ ತನ್ನೆಲ್ಲಾ ಆಸ್ತಿ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತಾ?

ಹೌದು.. ಸಲಾರ್‌ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸಾಲಾರ್ ಭಾಗ 1 ಸೀಜ್ ಫೈರ್ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಲಿದೆ. ಬಾಹುಬಲಿ ನಂತರ ಡಾರ್ಲಿಂಗ್‌ ಆ ರೇಂಜ್‌ನಲ್ಲಿ ಹಿಟ್ ಸಿನಿಮಾ ನೀಡದ ಕಾರಣ ಅವರ ಅಭಿಮಾನಿಗಳು ಈ ಸಿನಿಮಾದ ಮೇಲೆ ಬೆಟ್ಟದಷ್ಟು ಆಸೆಯನ್ನು ಹೊತ್ತುಕೊಂಡಿದ್ದಾರೆ. ಆದರೆ ಈ ಸಿನಿಮಾದ ಪ್ರಚಾರಗಳು ಇನ್ನೂ ವೇಗ ಪಡೆದಿಲ್ಲ. ಸದ್ಯದಲ್ಲೇ ರಾಜಮೌಳಿ ಪ್ರಭಾಸ್ ಅವರ ಸಂದರ್ಶನ ನಡೆಸಿದರು ವಿಡಿಯೋ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಅದರ ಹೊರತಾಗಿ, ಈ ಚಿತ್ರಕ್ಕೆ ಯಾವುದೇ ಪ್ರಿ-ರಿಲೀಸ್ ಈವೆಂಟ್ ಇದೂವರೆಗೂ ಆಯೋಜನೆ ಮಾಡಿಲ್ಲ.

ಇನ್ನು ಸಲಾರ್‌ ರಿಲೀಸ್‌ಗೆ ದಿನಗಳು ಹತ್ತಿರವಾಗುತ್ತಿವೆ. ಇದರ ಹಿನ್ನಲೆಯಲ್ಲಿ ಟಾಲಿವುಡ್‌ ನಟ ನಿಖಿಲ್ ಸಿದ್ಧಾರ್ಥ್‌ ಮಾಡಿರುವ ಟ್ವೀಟ್ ಪ್ರಭಾಸ್ ಅಭಿಮಾನಿಗಳನ್ನು ಮೆಚ್ಚಿಸುತ್ತಿದೆ. ನಿನ್ನೆ ಶ್ರೀರಾಮುಲು ಥಿಯೇಟರ್‌ನಲ್ಲಿ ಸಲಾರ್ ಮೊದಲ ಶೋ ನೋಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.. ಇದೀಗ ನಿಖಿಲ್ ಡಾರ್ಲಿಂಗ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಅಲ್ಲ, ಈ ನಟಿಗೆ ಫಿದಾ ಆಗುತ್ತಿದ್ದಾರೆ ʼಅನಿಮಲ್‌ʼ ನೋಡಿದವರು..! ಯಾರವಳು..?

ಹೈದರಾಬಾದಿನ ಶ್ರೀರಾಮುಲು ಥಿಯೇಟರ್‌ನಲ್ಲಿ ಡಿ.21ರ ಮಧ್ಯರಾತ್ರಿ ಒಂದು ಗಂಟೆಗೆ ಸಲಾರ್ ಶೋ ನಡೆಯಲಿದೆ ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ. ಈ ಶೋಗೆ 100 ಡೈ ಹಾರ್ಡ್ ಪ್ರಭಾಸ್ ಅಭಿಮಾನಿಗಳಿಗೆ ಉಚಿತ ಟಿಕೆಟ್ ನೀಡುವುದಾಗಿ ಮತ್ತು ಅವರ ಜೊತೆ ಸಿನಿಮಾ ನೋಡುವುದಾಗಿ ನಿಖಿಲ್‌ ಹೇಳಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ಇದೇ ಥಿಯೇಟರ್ ನಲ್ಲಿ ರಾತ್ರಿ 1 ಗಂಟೆಗೆ ಪ್ರಭಾಸ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಿರ್ಚಿ ನೋಡಿದ್ದೆ, ಈಗ ಇತಿಹಾಸ ಮರುಕಳಿಸಲಿದೆ’ ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ. ನಿಖಿಲ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೂರು ಅದೃಷ್ಟವಂತರು ಯಾರೆಂದು ನೋಡೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News