ನಟಿ ಆಸಿನ್‌ ಡೈವೋರ್ಸ್‌..! ಸಾಮಾಜಿಕ ಜಾಲತಾಣದಲ್ಲಿ ಸತ್ಯ ಬಿಚ್ಚಿಟ್ಟ ಕೇರಳ ಸುಂದರಿ

actress Asin thottumkal divorce : ಬಾಲಿವುಡ್‌ ಜನಪ್ರಿಯ ನಟಿ ಆಸಿನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವರದಿಗಳು ಪ್ರಸಾರವಾಗುತ್ತಿವೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಕುರಿತು ಸ್ವತಃ ನಟಿ ವಿವರಣೆಯನ್ನು ನೀಡಿದ್ದಾರೆ.  

Written by - Krishna N K | Last Updated : Jun 28, 2023, 07:10 PM IST
  • ಬಾಲಿವುಡ್‌ ಜನಪ್ರಿಯ ನಟಿ ಆಸಿನ್ ವಿಚ್ಛೇದನ ಪಡೆಯಲಿದ್ದಾರೆ.
  • ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
  • ಇದೀಗ ಈ ಕುರಿತು ಸ್ವತಃ ನಟಿ ವಿವರಣೆಯನ್ನು ನೀಡಿದ್ದಾರೆ.
ನಟಿ ಆಸಿನ್‌ ಡೈವೋರ್ಸ್‌..! ಸಾಮಾಜಿಕ ಜಾಲತಾಣದಲ್ಲಿ ಸತ್ಯ ಬಿಚ್ಚಿಟ್ಟ ಕೇರಳ ಸುಂದರಿ title=

Asin thottumkal divorce : ನಟಿ ಆಸಿನ್ ಬಾಲಿವುಡ್‌ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಂದರಿ, ಗಜಿನಿ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ವಿವಾಹದ ಬಳಿಕ ಸಿನಿರಂಗದಿಂದ ಆಸಿನ್‌ ದೂರವಾಗಿದ್ದಾರೆ.

ಕೇರಳ ಮೂಲದ ನಟಿ ಆಸಿನ್ ಮೊದಲು ನಟಿಸಿದ್ದು ಮಲಯಾಳಂ ಪಟಾಂಗ್ಲೆ ಎಂಬ ಚಿತ್ರದಲ್ಲಿ. ನಂತರ ನಿಧಾನವಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳಿನ ಗಜನಿ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದ ನಂತರ, ಅವರು ಅದರ ಹಿಂದಿ ರೀಮೇಕ್‌ನಲ್ಲಿಯೂ ನಟಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸುಮಾರು 10-12 ವರ್ಷಗಳ ಕಾಲ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಮಿಂಚಿದ್ದರು.

ಇದನ್ನೂ ಓದಿ: ʼಆದಿಪುರುಷʼ ಸೋಲು..! ಪ್ರಭಾಸ್‌ ಕಮ್‌ಬ್ಯಾಕ್‌ ಮಾಡೋಕೆ ಈ ಎರಡು ಸಿನಿಮಾ ಗೆಲ್ಲಲೇಬೇಕು..

2016 ರಲ್ಲಿ, ಅವರು ಮೈಕ್ರೋ ಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ ಅವರನ್ನು ವಿವಾಹವಾದರು. ಇದಾದ ನಂತರ ಸಿನಿಮಾದಲ್ಲಿ ನಟಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಇತ್ತೀಚೆಗೆ ಆಸಿನ್ ತನ್ನ ಪತಿಯಿಂದ ಬೇರ್ಪಟ್ಟಿದ್ದಾರೆ ಅಲ್ಲದೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿ ಸಂಚಲನ ಸೃಷ್ಟಿಸಿತ್ತು. ಆಸಿನ್ ತನ್ನ ಪತಿಯೊಂದಿಗೆ ಇರುವ ಎಲ್ಲಾ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಿಂದ ಹೊರಹಾಕಿರುವುದು ಈ ವದಂತಿಗೆ ಕಾರಣವಾಗಿತ್ತು.

ತಮ್ಮ ವಿಚ್ಛೇದನ ಸುದ್ದಿ ವೈರಲ್ ಆಸದ ಬಗ್ಗೆ ಆಸಿನ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿವರಣೆಯನ್ನು ನೀಡಿದ್ದಾರೆ. “ನಾವು ಬೇಸಿಗೆ ರಜೆಯನ್ನು ಆಚರಿಸುತ್ತಿದ್ದೇವೆ. ಈಗಲೂ ನಾವಿಬ್ಬರೂ ಎದುರುಬದುರು ಕುಳಿತು ತಿಂಡಿ ತಿನ್ನುತ್ತೇವೆ. ನಾನು ವಿಚ್ಛೇದನ ಪಡೆಯುವ ಸುದ್ದಿ ನೋಡಿದೆ. ಅದೇ ರೀತಿ ನಮ್ಮ ಮದುವೆಯ ಸಮಯದಲ್ಲಿ ನಾವು ಬೇರೆಯಾಗಿದ್ದೇವೆ ಎಂಬ ವರದಿಗಳು ಬಂದವು. ಇದನ್ನು ಬಿಟ್ಟು ಬೇರೆ ಯಾವುದಾದರೂ ಕೆಲಸ ಇದ್ದರೆ ಒಮ್ಮೆ ನೋಡಿ. ಈ ಪೋಸ್ಟ್ ಅನ್ನು ಪ್ರಕಟಿಸಲು ನನ್ನ 5 ನಿಮಿಷಗಳು ವ್ಯರ್ಥವಾಯಿತು ಎಂದು ನಾನು ಭಾವಿಸುತ್ತೇನೆ" ಎಂದು ಆಸಿನ್ ಹೇಳಿದ್ದಾರೆ. 

ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಮುಂದಾದ ʻನಮಸ್ತೆ ಗೋಷ್ಟ್ʼ ಟೀಂ.. ರಿಲೀಸ್‌ಗೂ ಮೊದಲೇ 6000 ಜನರ ಮನಗೆದ್ದ ಮೂವಿ!

ನಟಿ ಆಸಿನ್ ಸಿನಿಮಾ ಬಿಟ್ಟ ನಂತರ ಕುಟುಂಬದತ್ತ ಗಮನ ಹರಿಸಿದ್ದಾರೆ. ಅವರಿಗೆ 5 ವರ್ಷದ ಮಗಳಿದ್ದಾಳೆ. ಸಾಕಷ್ಟು ನಟಿಯರಿದ್ದರೂ ಆಸಿನ್ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಕೆಲ ತಮಿಳು ಅಭಿಮಾನಿಗಳ ಅಭಿಪ್ರಾಯ. ಆಸಿನ್‌ಗೆ, "ನೀವು ಯಾವಾಗ ಹಿಂತಿರುಗುತ್ತೀರಿ?" ಎಂಬ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ ಆದರೆ, ಚಿತ್ರರಂಗಕ್ಕೆ ಮರಳುವ ಯೋಚನೆಯಲ್ಲಿಲ್ಲ ಎಂದು ಅಸಿನ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News