ಹೊಸ ಪ್ರಯತ್ನಕ್ಕೆ ಮುಂದಾದ ʻನಮಸ್ತೆ ಗೋಷ್ಟ್ʼ ಟೀಂ.. ರಿಲೀಸ್‌ಗೂ ಮೊದಲೇ 6000 ಜನರ ಮನಗೆದ್ದ ಮೂವಿ!

Namasthe Ghost: ಈ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆದಾಗ ಸಾಕಷ್ಟು ಜನರು ಕನ್ಫ್ಯೂಸ್ ಮಾಡಿಕೊಂಡು ಇದು ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಎಂದುಕೊಂಡಿದ್ದರು. ಪೋಸ್ಟರ್‌ ನಲ್ಲಿ ಕಿಚ್ಚ ಕ್ಯಾಂಡಲ್‌ ಸ್ಟ್ಯಾಂಡ್‌ ಹಿಡಿದು ನಿಂತಿರುವಂತೆಯೇ ಕಾಣುತ್ತಿತ್ತು ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್. 

Written by - Chetana Devarmani | Last Updated : Jun 28, 2023, 05:02 PM IST
  • ʻನಮಸ್ತೆ ಗೋಷ್ಟ್ʼ ಚಿತ್ರತಂಡದಿಂದ ಹೊಸ ಪ್ರಯತ್ನ
  • ರಿಲೀಸ್‌ಗೂ ಮೊದಲೇ 6000 ಜನರಿಂದ ವೀಕ್ಷಣೆ
  • ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಸೂಪರ್‌ ಪ್ಲ್ಯಾನ್‌
ಹೊಸ ಪ್ರಯತ್ನಕ್ಕೆ ಮುಂದಾದ ʻನಮಸ್ತೆ ಗೋಷ್ಟ್ʼ ಟೀಂ.. ರಿಲೀಸ್‌ಗೂ ಮೊದಲೇ 6000 ಜನರ ಮನಗೆದ್ದ ಮೂವಿ!  title=

Namasthe Ghost: ಈ ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಪ್ರಿಮಿಯರ್‌ ಶೋ ಮಾಡಿ ಸೆಲಬ್ರೆಟಿಗಳಿಗೆ ಹಾಗೂ ಮಿಡಿಯಾದವ್ರಿಗೆ ಮುಂಚಿತವಾಗಿ ಸಿನಿಮಾ ತೋರಿಸುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಂದು ಸಿನಿಮಾ ತಂಡ ಬಿಡುಗಡೆಗೆ ತಿಂಗಳುಗಳ ಕಾಲ ಟೈಂ ಇರುವಾಗಲೇ ಕಾಲೇಜ್‌ ಗಳಲ್ಲಿ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಸಿನಿಮಾವನ್ನ ತೋರಿಸುವ ಮೂಲಕ ವಿಭಿನ್ನ ರೀತಿಯ ಪ್ರಚಾರಕ್ಕೆ ಮುಂದಾಗಿದೆ.

ಸಿಂಗಲ್ ಪೋಸ್ಟರ್ ಮೂಲಕವೇ ಬಾರಿ ಸದ್ದು ಮಾಡಿದಂತಹ ನಮಸ್ತೆ ಗೋಷ್ಟ್‌ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆದಾಗ ಸಾಕಷ್ಟು ಜನರು ಕನ್ಫ್ಯೂಸ್ ಮಾಡಿಕೊಂಡು ಇದು ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಎಂದುಕೊಂಡಿದ್ದರು. ಪೋಸ್ಟರ್‌ ನಲ್ಲಿ ಕಿಚ್ಚ ಕ್ಯಾಂಡಲ್‌ ಸ್ಟ್ಯಾಂಡ್‌ ಹಿಡಿದು ನಿಂತಿರುವಂತೆಯೇ ಕಾಣುತ್ತಿತ್ತು ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್. ನಂತ್ರ ಚಿತ್ರತಂಡ ಇದು ಸುದೀಪ್‌ ಅಭಿನಯದ ಚಿತ್ರ ಅಲ್ಲ ಎಂದು ಕ್ಲ್ಯಾರಿಟಿ ಕೊಟ್ಟಿತ್ತು. 

ಇದನ್ನೂ ಓದಿ: ಮೊದಲ ಕಿಸ್‌ ಬಳಿಕ ಡೆಟಾಲ್‌ನಿಂದ ಬಾಯಿ ತೊಳೆದಿದ್ದರಂತೆ ಈ ಖ್ಯಾತ ನಟಿ!!

ನಮಸ್ತೆ ಗೋಷ್ಟ್ ಸಿನಿಮಾವನ್ನ ಭರತ್ ನಂದ ನಿರ್ದೇಶನ ಮಾಡೋದ್ರ ಜೊತೆಗೆ ನಾಯಕನಾಗಿ ಕೂಡ ಭರತ್ ನಂದ ಕಾಣಿಸಿಕೊಂಡಿದ್ದಾರೆ... ಇನ್ನು ನಾಯಕಿಯಾಗಿ ವಿದ್ಯಾ ರಾಜ್‌ ಅಭಿನಯ ಮಾಡಿದ್ದು, ಬಾಲ ರಾಜುವಾಡಿ ,ಶಿವಕುಮಾರ್ ಆರಾಧ್ಯ, ಶಿವಮೊಗ್ಗ ಹರೀಶ್ ಹೀಗೆ ಸಾಕಷ್ಟು ಜನರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಟೈಟಲ್ ಹೇಳುವಂತೆಯೇ ಇದೊಂದು ಹಾರರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮವಾಗಿದ್ದು ಈ ಚಿತ್ರವನ್ನು ರಮೇಶ್ ನಿರ್ಮಾಣ ಮಾಡಿದ್ದಾರೆ. ಯದುನಂದನ್ ಮ್ಯೂಸಿಕ್ ಹಾಗೂ ವಿನಯ್ ಕುಮಾರ್ ಚಿತ್ರದಲ್ಲಿ ಸಂಕಲನಕಾರರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನ ಥಿಯೇಟರ್ ಗೆ ಕರೆ ತರುವುದೇ ಸಾಕಷ್ಟು ಕಷ್ಟದ ಸಂಗತಿಯಾಗಿದೆ. ಹಾಗಾಗಿ ನಮಸ್ತೆ ಗೋಷ್ಟ್ ಸಿನಿಮಾ ತಂಡ ಈ ರೀತಿಯ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಈಗಿನ ಸಿನಿಮಾಗಳು ಹೆಚ್ಚಾಗಿ ಪ್ರಚಾರ ಪಡೆದುಕೊಳ್ಳುವುದೇ ಮೌತ್ ಪಬ್ಲಿಸಿಟಿಯಿಂದಾಗಿ ಹಾಗಾಗಿ ಕಾಲೇಜ್ ಯುವಕ ಯುವತಿಯರಿಗೆ ಸಿನಿಮಾ ತೋರಿಸಿದರೆ ಅವರು ಮತ್ತಷ್ಟು ಜನರಿಗೆ ಸಿನಿಮಾದ ಬಗ್ಗೆ ಹೇಳುವ ಮೂಲಕ ಸಿನಿಮಾ ಜನರಿಗೆ ತಲುಪ್ಪುತ್ತೆ ಎನ್ನುವ ಉದ್ದೇಶದಿಂದ ಸಿನಿಮಾ ತಂಡ ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಸದ್ಯ ಸಿನಿಮಾ ತಂಡ ಸಿನಿಮಾದ ಪ್ರಚಾರಕ್ಕಾಗಿ ವಿಭಿನ್ನ ರೀತಿಯ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದು ಜುಲೈ 14 ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. 

ಇದನ್ನೂ ಓದಿ: ಕರಣ್ ಜೋಹರ್ ವಿರುದ್ಧ ಅನುಷ್ಕಾ ಶರ್ಮಾ ಲೈಂಗಿಕ ಕಿರುಕುಳ ಕೇಸ್‌ ಹಾಕಲು ಹೋದಾಗ! ಕೇಳಿ ಶಾಕ್ ಆಗುತ್ತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News