ಚಿತ್ರರಂಗದಲ್ಲಿ ಮುಂದುವರೆದ ʼಡೈವೋರ್ಸ್‌ʼ ಸರಣಿ..! ನಟಿ ಸ್ವಾತಿ ವಿಚ್ಛೇದನ..

Colours Swathi divorce : ‘ಕಲರ್ಸ್’ ಕಾರ್ಯಕ್ರಮದಿಂದ ನಟಿ ಸ್ವಾತಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ನಂತರ ಅದೇ ಕಾರ್ಯಕ್ರಮ ಮನೆಮಾತಾಯಿತು. ಆ ಕ್ರೇಜ್‌ನಿಂದ ಆಕೆಗೆ ಸತತ ಸಿನಿಮಾ ಅವಕಾಶಗಳು ಬಂದವು. ನಂತರ ಮದುವೆಯಾಗಿ ಸಿನಿರಂಗದಿಂದ ದೂರ ಉಳಿದರು. 

Written by - Krishna N K | Last Updated : Jul 18, 2023, 09:33 PM IST
  • ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ದಿನನಿತ್ಯದ ವದಂತಿಗಳು ಹರಿದಾಡುತ್ತಲೇ ಇರುತ್ತವೆ.
  • ಇತ್ತೀಚೆಗೆ ನಟಿ ಕಲರ್ಸ್ ಸ್ವಾತಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
  • ಸ್ವಾತಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಚಿತ್ರರಂಗದಲ್ಲಿ ಮುಂದುವರೆದ ʼಡೈವೋರ್ಸ್‌ʼ ಸರಣಿ..! ನಟಿ ಸ್ವಾತಿ ವಿಚ್ಛೇದನ.. title=

Colours Swathi : ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ದಿನನಿತ್ಯದ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಅವುಗಳಲ್ಲಿ ಕೆಲವು ನಿಜವಾದರೆ ಇನ್ನು ಕೆಲವು ಸುಳ್ಳು ಸುದ್ದಿಗಳಾಗಿ ಉಳಿದಿವೆ. ಇತ್ತೀಚೆಗೆ ನಟಿ ಕಲರ್ಸ್ ಸ್ವಾತಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು.. ಸ್ವಾತಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಹಿಂದೆಯೂ ಸ್ವಾತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಅದಕ್ಕೆ ಸ್ವಾತಿ ವಿವರಣೆಯನ್ನೂ ಕೊಟ್ಟಿದ್ದಾರೆ. ಇದೀಗ ಮತ್ತೆ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. 

ಇದನ್ನೂ ಓದಿ:ಸಾವಿನ ಸಮಯದಲ್ಲಿ 2 ತಿಂಗಳ ಗರ್ಭಿಣಿ ಆಗಿದ್ರು ನಟಿ ಸೌಂದರ್ಯ.!

‘ಕಲರ್ಸ್’ ಕಾರ್ಯಕ್ರಮದಿಂದ ಸ್ವಾತಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ನಂತರ ಅದೇ ಕಾರ್ಯಕ್ರಮ ಮನೆಮಾತಾಯಿತು. ಆ ಕ್ರೇಜ್‌ನಿಂದ ಆಕೆಗೆ ಸತತ ಸಿನಿಮಾ ಅವಕಾಶಗಳು ಬಂದವು. ನಂತರ ಮದುವೆಯಾಗಿ ಸಿನಿರಂಗದಿಂದ ದೂರ ಉಳಿದರು. ಆದರೆ ಇತ್ತೀಚೆಗೆ ಕಲರ್ಸ್ ಸ್ವಾತಿ ತನ್ನ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಸ್ವಾತಿ ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಈ ಸುದ್ದಿಗೆ ಸಾಕ್ಷಿ ಎಂಬಂತೆ ಬಿಂಬಿತವಾಗಿದೆ. ಏಕೆಂದರೆ ಈ ಹಿಂದೆ ಸಮಂತಾ ಮತ್ತು ನಿಹಾರಿಕಾ ಕೂಡ ಕೆಲವೇ ತಿಂಗಳಲ್ಲಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಡಿಲೀಟ್ ಮಾಡಿದ್ದರು. ನಂತರ ಡೈವೋರ್ಸ್‌ ನೀಡಿದ್ದರು. ಇದೀಗ ಸ್ವಾತಿ ಕೂಡ ಅದೇ ಹಾದಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ: ಕೈಯಲ್ಲಿ ಟೊಮೆಟೊ ಹಿಡಿದು ಕಚ್ಚಿ ತಿಂದ ಉರ್ಫಿ..! ಏನಮ್ಮಾ ನಿನ್ನ ಅವತಾರ..

ಕಲರ್ಸ್ ಸ್ವಾತಿ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾಗ ವಿಕಾಸ್ ವಾಸು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಸಂಬಂಧದಲ್ಲಿದ್ದ ದಂಪತಿಗಳು 2018 ರಲ್ಲಿ ವಿವಾಹವಾದರು. ಆದರೆ ಸುಮಾರು ಎರಡು ವರ್ಷಗಳ ಹಿಂದೆ ಸ್ವಾತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಇದೇ ರೀತಿ ಸುದ್ದಿ ಹಬ್ಬಿತ್ತು.

ಆದ್ರೆ ಆಗ ತನ್ನ ಪತಿಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆರ್ಕೈವ್‌ನಲ್ಲಿ ಇರಿಸಿದ್ದಾಗಿ ಸ್ವಾತಿ ಹೇಳಿದ್ದರು ಮತ್ತು ಇಬ್ಬರೂ ಬೇರೆಯಾಗಿಲ್ಲ ಎಂದು ಸ್ಪಷ್ಟತೆ ನೀಡಿದ್ದರು. ಇದೀಗ ಮತ್ತೆ ಸ್ವಾತಿ ತನ್ನ ಗಂಡನ ಫೋಟೋಗಳನ್ನು ಡಿಲೀಟ್ ಮಾಡುವುದರೊಂದಿಗೆ ಶೀಘ್ರದಲ್ಲೇ ವಿಚ್ಛೇದನ ಪಡೆಯುವ ಸುಳಿವು ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News