ನಾನು ಒಂದು ದಿನಕ್ಕೆ 4 ಲಕ್ಷ ರೂ. ದುಡಿತಿದ್ದೆ..! ಆ ದಿನಗಳನ್ನು ನೆನೆದ ಶಕೀಲಾ

ನಾನು ದಿನವೊಂದಕ್ಕೆ 4 ಲಕ್ಷ ರೂ. ಗಳಿಸುತ್ತಿದ್ದೆ, ಇಷ್ಟೊಂದು ಜನಪ್ರಿಯತೆ ಇತ್ತು. ಆದರೆ ನನ್ನ ತಂಗಿ ನನ್ನ ಎಲ್ಲಾ ಹಣವನ್ನು ತೆಗೆದುಕೊಂಡಳು, ನನಗಾಗಿ ಏನೂ ಉಳಿದಿರಲಿಲ್ಲ ಎಂದು ನಟಿ ಶಕೀಲಾ ತಮ್ಮ ನೋವಿನ ದಿನಗಳನ್ನು ನೆನೆದರು.

Written by - Krishna N K | Last Updated : Jun 4, 2023, 04:42 PM IST
  • ನಟಿ ಶಕೀಲಾ ಅವರು ತಮ್ಮ ಹಿಂದಿನ ಜೀವನ ಮತ್ತು ತಾವು ಎದುರಿಸಿದ ಕಷ್ಟಗಳ ಬಗ್ಗೆ ತೆರೆದಿಟ್ಟಿದ್ದಾರೆ.
  • ನನ್ನ ವಿಕಿಪೀಡಿಯಾ ಪುಟದಲ್ಲಿ ನನ್ನ ಬಗ್ಗೆ ತುಂಬಾ ತಪ್ಪು ಮಾಹಿತಿಗಳಿವೆ.
  • ನಾನು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಸ್ಥಿತಿಯನ್ನು ತೆರೆದಿಟ್ಟರು.
ನಾನು ಒಂದು ದಿನಕ್ಕೆ 4 ಲಕ್ಷ ರೂ. ದುಡಿತಿದ್ದೆ..! ಆ ದಿನಗಳನ್ನು ನೆನೆದ ಶಕೀಲಾ title=

Actress Shakeela : ನಟಿ ಶಕೀಲಾ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಈಗಾಗಲೇ ತಮ್ಮ ಸಿನಿಮಾ ಮತ್ತು ಮಾದಕತೆಯಿಂದ ಸಿನಿ ರಸಿಕರಿಗೆ ಚಿರಪರಿಚಿತರಾದವರು. ಅಲ್ಲದೆ, ವಯಸ್ಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡವರು. ಹೆಚ್ಚಾಗಿ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ವಿಜಯ್ ಟಿವಿಯ ರಿಯಾಲಿಟಿ ಶೋ, ಕುಕು ವಿತ್ ಕೋಮಾಲಿ ಮೂಲಕ ಶಕೀಲಾ ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ, ನಟಿ ಶಕೀಲಾ ಅವರು ತಮ್ಮ ಹಿಂದಿನ ಜೀವನ ಮತ್ತು ತಾವು ಎದುರಿಸಿದ ಕಷ್ಟಗಳ ಬಗ್ಗೆ ತೆರೆದಿಟ್ಟಿದ್ದಾರೆ. ನನ್ನ ಬಗ್ಗೆ ತುಂಬಾ ತಪ್ಪು ಮಾಹಿತಿಗಳಿವೆ. ನನ್ನ ವಿಕಿಪೀಡಿಯಾ ಪುಟದಲ್ಲಿ ನಾನು ಐಷಾರಾಮಿ ಫ್ಲಾಟ್ ಮತ್ತು BMW ಕಾರ್ ಹೊಂದಿದ್ದೇನೆ ಎಂದು ಹೇಳಲಾಗುತ್ತದೆ. ಆದರೆ ಅದು ನಿಜವಲ್ಲ. ನಾನು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಸ್ಥಿತಿಯನ್ನು ತೆರೆದಿಟ್ಟರು.

ಇದನ್ನೂ ಓದಿ: ವಿಕ್ಕಿ - ಸಾರಾ ಸಿನಿಮಾಗೆ ಪ್ರೇಕ್ಷಕನ ಮೆಚ್ಚುಗೆ..! ವಾರಾಂತ್ಯದಲ್ಲಿ 22 ಕೋಟಿ ರೂ. ಗಳಿಕೆ

ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದ ಶಕೀಲಾ, ಅಡಕ್ಟ್ ಚಲನಚಿತ್ರಗಳ ಮೂಲಕ ಗಳಿಸಿದ ಎಲ್ಲಾ ಹಣ ಏನಾಯ್ತು ಎಂದು ವಿವರಿಸಿದ್ದಾರೆ. ದಿನವೊಂದಕ್ಕೆ 4 ಲಕ್ಷ ರೂ. ಗಳಿಸುತ್ತಿದ್ದೆ, ಇಷ್ಟೊಂದು ಜನಪ್ರಿಯತೆ ಇತ್ತು. ಆದರೆ ನನ್ನ ತಂಗಿ ನನ್ನ ಎಲ್ಲಾ ಹಣವನ್ನು ತೆಗೆದುಕೊಂಡಳು, ನನಗಾಗಿ ಏನೂ ಉಳಿದಿರಲಿಲ್ಲ ಎಂದು ಶಕೀಲಾ ನೋವಿನ ದಿನಗಳನ್ನು ನೆನೆದರು.

ನನ್ನ ಬಗ್ಗೆ ನಾನು ಯೋಚಿಸಬೇಕಿತ್ತು  : ಮದುವೆಯ ಬಗ್ಗೆ ಮಾತನಾಡಿದ ಶಕೀಲಾ, ಮದುವೆಯ ಆಸೆ ಇಲ್ಲದ ಹೆಣ್ಣಿಲ್ಲ, ನನಗೂ ಇತ್ತು. 2 ವರ್ಷದಲ್ಲಿ ಒಬ್ಬರು, 4 ವರ್ಷದಲ್ಲಿ ಒಬ್ಬರು, ಒಂದು ವರ್ಷಕ್ಕೆ ಇನ್ನೊಬ್ಬರು ಎಂದು ಉತ್ತರಿಸಿದರು. ಅಲ್ಲದೆ, ನಾನು ಮಾಡಿದ ಒಂದೇ ತಪ್ಪು ಎಂದರೆ ನನ್ನ ಬಗ್ಗೆ ಯೋಚಿಸುವ ಬದಲು ನನ್ನ ಕುಟುಂಬದ ಬಗ್ಗೆ ಹೆಚ್ಚು ಯೋಚಿಸಿದೆ, ಅದಕ್ಕಾಗಿಯೇ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News