Pooja Hegde: ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಹಂಚಿಕೊಂಡ ಪೂಜಾ ಹೆಗ್ಡೆ

Pooja Hegde: ಸೌತ್‌ ಬ್ಯೂಟಿ ಪೂಜಾ ಹೆಗ್ಡೆ ಈಗ ಬಾಲಿವುಡ್‌ನಲ್ಲಿ ಕಮಾಲ್‌ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಕರ್ನಾಟಕದ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಮಾಧುರಿ ದೀಕ್ಷಿತ್‌ ಎಂದರೆ ಎಲ್ಲಿಲ್ಲದ ಅಭಿಮಾನ. ಇದೀಗ ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಪೂಜಾ ಹೆಗ್ಡೆ ಶೇರ್‌ ಮಾಡಿದ್ದಾರೆ.   

Written by - Chetana Devarmani | Last Updated : Jun 4, 2023, 04:23 PM IST
  • ಬಾಲಿವುಡ್‌ನಲ್ಲಿ ಕಮಾಲ್‌ ಮಾಡುತ್ತಿರುವ ಸೌತ್‌ ಬ್ಯೂಟಿ ಪೂಜಾ ಹೆಗ್ಡೆ
  • ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಹಂಚಿಕೊಂಡ ಪೂಜಾ ಹೆಗ್ಡೆ
  • ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದಲ್ಲಿ ನಟಿಸಿರುವ ಪೂಜಾ ಹೆಗ್ಡೆ
Pooja Hegde: ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಹಂಚಿಕೊಂಡ ಪೂಜಾ ಹೆಗ್ಡೆ  title=
Pooja Hegde - madhuri dixit

Pooja Hegde: ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು ಪೂಜಾ ಹೆಗ್ಡೆ.  ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ನಟಿ ಮೂಲತಃ ಕರ್ನಾಟದವರು. ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಸಿನಿರಂಗದಲ್ಲೂ ಛಾಪೂ ಮೂಡಿಸಲು ರೆಡಿಯಾಗಿದ್ದಾರೆ.  ಇತ್ತೀಚೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರೊಂದಿಗಿನ ಸ್ಮರಣೀಯ ಕ್ಷಣವನ್ನು ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಚಿಕ್ಕ ಬಟ್ಟೆ ತೊಟ್ಟು ಸಂಚಲನ ಮೂಡಿಸಿದ ತಮನ್ನಾ ಭಾಟಿಯಾ.. ಇಲ್ಲಿವೆ ಫೋಟೋಸ್‌

"ಒಂದು ವಿಶೇಷ ಕ್ಷಣವೆಂದರೆ ಮಾಧುರಿ ದೀಕ್ಷಿತ್ ಮೇಡಮ್ ಅವರಿಗೆ ನನ್ನ ಹೆಸರು ಗೊತ್ತಿದೆ. ನಾನು ಅವರಿಗೆ 'ಹಾಯ್' ಹೇಳಲು ಹೋದೆ, ಅವರು "ಹಾಯ್ ಪೂಜಾ, ಹೇಗಿದ್ದೀಯಾ?" ಎಂದು ನನ್ನನ್ನು ಮಾತನಾಡಿಸಿದರು. ಮಾಧುರಿ ದೀಕ್ಷಿತ್ ಅವರಿ‌ಗೆ ನನ್ನ ಹೆಸರು ಗೊತ್ತಿದೆ ಎಂಬುದು ನನಗೆ ಆಶ್ಚರ್ಯವಾಯಿತು. ಇದು ನಿಜವಾಗಿಯೂ ಸ್ಮರಣೀಯ ಕ್ಷಣವಾಗಿತ್ತು. ತಾನು ಮಾಧುರಿಯ ದೊಡ್ಡ ಅಭಿಮಾನಿ" ಎಂದು ಪೂಜಾ ಹೆಗ್ಡೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Pooja Hegde (@hegdepooja)

 

ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಅನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ ಮತ್ತು ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸಿದ್ದಾರೆ. ಈ ಚಿತ್ರವು 2014 ರ ತಮಿಳು ಚಲನಚಿತ್ರವಾದ ವೀರಂನ ರಿಮೇಕ್ ಆಗಿತ್ತು. ಪೂಜಾ ಮುಂದಿನ ಆಕ್ಷನ್ ಡ್ರಾಮಾ SSMB28 ನಲ್ಲಿ ಮಹೇಶ್ ಬಾಬು ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಎಸ್ ರಾಧಾ ಕೃಷ್ಣ ಅವರ ಹರಿಕಾ ಮತ್ತು ಹಾಸನ್ ಕ್ರಿಯೇಷನ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ, ಜಾನ್ ಅಬ್ರಹಾಂ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್‌ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News