No Objectionable Content On TV: ಆಕ್ಷೇಪಾರ್ಹ ಕಂಟೆಂಟ್ ಗೆ ಬಿತ್ತು ಬ್ರೇಕ್, ಜಾರಿಯಾಗಿದೆ ಈ ಆದೇಶ

No Objectionable Content On TV: ಯಾವುದೇ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುವುದಿಲ್ಲ ಅಥವಾ ಅವುಗಳ ಚಾನಲ್‌ಗಳಲ್ಲಿ ತೋರಿಸಲಾಗುವುದಿಲ್ಲ.

Last Updated : Dec 15, 2020, 01:39 PM IST
  • ದೆಹಲಿ ಹೈಕೋರ್ಟ್ ಸೋಮವಾರ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
  • ಯಾವುದೇ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್ಲೋಡ್ ಮಾಡಲಾಗುವುದಿಲ್ಲ.
  • ಅವುಗಳ ಚಾನಲ್‌ಗಳಲ್ಲಿ ಕೂಡ ತೋರಿಸಲಾಗುವುದಿಲ್ಲ.
No Objectionable Content On TV: ಆಕ್ಷೇಪಾರ್ಹ ಕಂಟೆಂಟ್ ಗೆ ಬಿತ್ತು ಬ್ರೇಕ್, ಜಾರಿಯಾಗಿದೆ ಈ ಆದೇಶ  title=
No Objectionable Content On TV

ನವದೆಹಲಿ: No Objectionable Content On TV - ದೆಹಲಿ ಹೈಕೋರ್ಟ್(Delhi High Court) ಸೋಮವಾರ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಈ ಆದೇಶದಲ್ಲಿ AGR ಔಟ್ ಲೀಯರ್ ಪ್ರೈವೇಟ್ ಲಿಮಿಟೆಡ್ ಹಾಗೂ ಬೆನೆಟ್ ಅಂಡ್ ಕೋಲ್ಮನ್ ಲಿಮಿಟೆಡ್ ಕಂಪನಿಗಳಿಗೆ ಸಾಮಾಜಿಕ ಪ್ಲಾಟ್ ಫಾರ್ಮ್ ಗಳ ಮೇಲೆ ಅಥವಾ ಅವುಗಳ ಚಾನೆಲ್ ಮೇಲೆ ಆಕ್ಷೇಪಾರ್ಹ ಕಂಟೆಂಟ್ ಅಪ್ಲೋಡ್ ಮಾದದಿರುವುದನ್ನು ಸುನಿಶ್ಚಿತಗೊಳಿಸಲು ಆದೇಶ ನೀಡಲಾಗಿದೆ.

ಈ ಕುರಿತಾದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರಾಜೀವ್ ಶಕಧರ್, ರಜಿಸ್ಟ್ರಾರ್ ಉಪಸ್ಥಿತಿಯಲ್ಲಿ ದಾಖಲೆಗಳನ್ನು ಪೂರ್ಣಗೊಳಿಸಲು ಜನವರಿ 18 ದಿನಾಂಕ ನಿಗದಿಪಡಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, "ಈ ಅವಧಿಯಲ್ಲಿ ನವೆಂಬರ್ 9 ರಂದು ನೀಡಲಾಗಿದ್ದ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ" ಎಂದು ಹೇಳಿ ಮುಂದಿನ ವಿಚಾರಣೆಯನ್ನು ಮಾರ್ಚ್ 23 ಕ್ಕೆ ನಡೆಸಲಾಗುವುದು ಎಂದಿದ್ದಾರೆ.

ಇದಕ್ಕೆ ಸಂಬಂಧಿಸದಂತೆ ಉತ್ತರ ನೀಡಲು ನ್ಯಾಯಾಲಯ ನಿರ್ಮಾಪಕರಿಗೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಏಕೆಂದರೆ ಮಾಧ್ಯಮಗಳು ಹಾಗೂ ಇತರೆ ಪಕ್ಷಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ನಿಲುವು ಹೊಂದಿವೆ ಎಂದು ಈ ವೇಳೆ ನ್ಯಾಯಾಲಯಕ್ಕೆ ಸೂಚಿಸಲಾಗಿತ್ತು.

ಇದಕ್ಕೂ ಮೊದಲು ಬಾಲಿವುಡ್ ನಿರ್ಮಾಪಕರ ಮನವಿಗೆ ರಿಪಬ್ಲಿಕ್ ಟಿವಿ, ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ವರದಿಗಾರ ಪ್ರದೀಪ್ ಭಂಡಾರಿ, ಟೈಮ್ಸ್ ನೌ ಮುಖ್ಯ ಸಂಪಾದಕ ರಾಹುಲ್ ಶಿವಶಂಕರ್ ಮತ್ತು ಗುಂಪು ಸಂಪಾದಕ ನಾವಿಕಾ ಕುಮಾರ್ ಮತ್ತು ಸಾಮಾಜಿಕ ಮಾಧ್ಯಮ ಕಂಪನಿ ಗೂಗಲ್, ಫೇಸ್‌ಬುಕ್ ಮತ್ತು ಟ್ವಿಟರ್‌ಗಳಿಂದ ಈ ಹಿಂದೆ ಪ್ರತಿಕ್ರಿಯೆಗಳನ್ನು ಕೋರಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ನಾಲ್ಕು ಬಾಲಿವುಡ್ ಸಂಸ್ಥೆಗಳು ಸೇರಿದಂತೆ 34 ಪ್ರಮುಖ ನಿರ್ಮಾಪಕರು ಈ ಮೊಕದ್ದಮೆ ಹೂಡಿದ್ದಾರೆ. ಇವರಲ್ಲಿ ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಅಜಯ್ ದೇವ್‌ಗನ್, ಅನಿಲ್ ಕಪೂರ್, ರೋಹಿತ್ ಶೆಟ್ಟಿ ಮತ್ತು ಯಶ್ ರಾಜ್ ಫಿಲ್ಮ್ಸ್ ಮತ್ತು ಆರ್ಎಸ್ ಎಂಟರ್‌ಟೈನ್‌ಮೆಂಟ್ ಶಾಮೀಲಾಗಿದ್ದಾರೆ.  ಉದ್ಯಮಕ್ಕೆ ಸಂಬಂಧಿಸಿದ ಜನರ ಗೌಪ್ಯತೆಯ ಹಕ್ಕಿನಲ್ಲಿ ಚಾನೆಲ್‌ಗಳು ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನು ಓದಿ- ​Ration Card Rules: ಈ ತಪ್ಪು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಸಹ ರದ್ದಾಗಬಹುದು!

ಸೋಮವಾರದ ವಿಚಾರಣೆಯ ವೇಳೆ ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್, ನ್ಯಾಯಾಲಯದ ಹಿಂದಿನ ಆದೇಶಕ್ಕೆ ಮಾಧ್ಯಮ ಸಂಸ್ಥೆಗಳು ಸಮ್ಮತಿಸಿದರೆ  ಅಂದರೆ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಥವಾ ಅವರ ಸುದ್ದಿ ಚಾನೆಲ್‌ಗಳಲ್ಲಿ ಆಕ್ಷೇಪಾರ್ಹ ವಿಷಯವನ್ನು ಅಪ್‌ಲೋಡ್ ಮಾಡದಿರಲು ಒಪ್ಪಿಕೊಂಡರೆ, ವಿಚಾರಣೆಯನ್ನು ಇತ್ಯರ್ಥಪಡಿಸಬಹುದು ಎಂದಿದ್ದಾರೆ.

ಇದನ್ನು ಓದಿ-TRP Scam: Republic Media Network CEO ಬಂಧನ, ಏನಿತ್ತು ಆರೋಪ?

ಈ ಅಫಿಡವಿಟ್ ಅನ್ನು ಬೆನೆಟ್ ಕೋಲ್ಮನ್ ಕಂಪನಿಯ ಪ್ರತಿನಿಧಿ ಸಂದೀಪ್ ಸೇಥಿ ವಿರೋಧಿಸಿದರು, ಅವರು ಈ ಸಲಹೆಯನ್ನು ಒಪ್ಪುವುದಿಲ್ಲ ಮತ್ತು ಪ್ರಕರಣದ ವಿಚಾರಣೆಯ ಆಧಾರವನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ ಮಾಧ್ಯಮ ಸಂಸ್ಥೆಗಳ ವಕೀಲರು ಪ್ರೋಗ್ರಾಂ ಕೋಡ್ ಮತ್ತು ಕೇಬಲ್ ಟಿವಿ ನೆಟ್‌ವರ್ಕ್ಸ್ (ನಿಯಂತ್ರಣ) ಕಾಯ್ದೆಗೆ ಬದ್ಧರಾಗಿರುವುದಾಗಿ ಹೈಕೋರ್ಟ್‌ಗೆ ಭರವಸೆ ನೀಡಿದ್ದರು.

Trending News