Anchor Anushree: ಈ ಖ್ಯಾತ ನಟಿಯ ಮನೆಯಲ್ಲಿ ನಾಯಿಗೆ ಹಾಕೋ ಚಿಕನ್ ತಿಂದ ಆಂಕರ್ ಅನುಶ್ರೀ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Anchor Anushree funny Moment:  ಕರ್ನಾಟಕದಲ್ಲಿ ಎಂತಹದ್ದೇ ಕಾರ್ಯಕ್ರಮ ಇರಲಿ. ಅಲ್ಲಿ ಅನುಶ್ರೀ ನಿರೂಪಣೆ ಇದೆ ಅಂದ್ರೆ, ಆ ಕಾರ್ಯಕ್ರಮಕ್ಕೆ ಮತ್ತಿಷ್ಟು ರಂಗು ಬರೋದು ಕನ್ಫರ್ಮ್. ಅನು ಮಾತೆತ್ತಿದರೆ ಸಾಕು.. ಜನ ಫುಲ್ ಫಿದಾ ಆಗುತ್ತಾರೆ. ಆದರೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರುವ ಅನುಶ್ರೀ ಒಂದೊಮ್ಮೆ ನಾಯಿಗೆ ಹಾಕೋ ಚಿಕನ್ ತಿಂದಿದ್ದರು ಅಂದ್ರೆ ನಂಬ್ತೀರಾ!!

Written by - Bhavishya Shetty | Last Updated : Mar 10, 2024, 07:12 PM IST
    • ಕರಾವಳಿ ಮೂಲದ ಈ ಬೆಡಗಿಯ ವಾಕ್ ಚತುರತೆಗೆ ಮನಸೋಲದವರೇ ಇಲ್ಲ
    • ಅನುಶ್ರೀ ಒಂದೊಮ್ಮೆ ನಾಯಿಗೆ ಹಾಕೋ ಚಿಕನ್ ತಿಂದಿದ್ದರು ಅಂದ್ರೆ ನಂಬ್ತೀರಾ!!
    • ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Anchor Anushree: ಈ ಖ್ಯಾತ ನಟಿಯ ಮನೆಯಲ್ಲಿ ನಾಯಿಗೆ ಹಾಕೋ ಚಿಕನ್ ತಿಂದ ಆಂಕರ್ ಅನುಶ್ರೀ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?  title=
Anchor Anushree

Anchor Anushree funny Moment:  ಕರುನಾಡಿನ ಪ್ರಖ್ಯಾತ ನಿರೂಪಕಿ ಯಾರೆಂದು ಕೇಳಿದಾಗ ಮೊದಲಿಗೆ ಹೇಳೋ ಹೆಸರೇ ಅನುಶ್ರೀ. ಕರಾವಳಿ ಮೂಲದ ಈ ಬೆಡಗಿಯ ವಾಕ್ ಚತುರತೆಗೆ ಮನಸೋಲದವರೇ ಇಲ್ಲ. ಹಿರಿಯರಿಂದ ಹಿಡಿದ ಕಿರಿಯರವರೆಗೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ಆಂಕರ್ ಅನುಶ್ರೀ.

ಕರ್ನಾಟಕದಲ್ಲಿ ಎಂತಹದ್ದೇ ಕಾರ್ಯಕ್ರಮ ಇರಲಿ. ಅಲ್ಲಿ ಅನುಶ್ರೀ ನಿರೂಪಣೆ ಇದೆ ಅಂದ್ರೆ, ಆ ಕಾರ್ಯಕ್ರಮಕ್ಕೆ ಮತ್ತಿಷ್ಟು ರಂಗು ಬರೋದು ಕನ್ಫರ್ಮ್. ಅನು ಮಾತೆತ್ತಿದರೆ ಸಾಕು.. ಜನ ಫುಲ್ ಫಿದಾ ಆಗುತ್ತಾರೆ. ಆದರೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರುವ ಅನುಶ್ರೀ ಒಂದೊಮ್ಮೆ ನಾಯಿಗೆ ಹಾಕೋ ಚಿಕನ್ ತಿಂದಿದ್ದರು ಅಂದ್ರೆ ನಂಬ್ತೀರಾ!! ನಂಬಲೇಬೇಕು.. ಯಾಕಂದ್ರೆ ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಆಟಗಾರರಿಗೆ ಬಿಸಿಸಿಐನಿಂದ ಸಿಹಿಸುದ್ದಿ: ಸಂಬಳದ ಹೊರತಾಗಿ ಸಿಗಲಿದೆ ವಿಶೇಷ ವೇತನ

ಅನುಶ್ರೀ ಕೇವಲ ಟಿವಿ ಪರದೆಯಲ್ಲಿ ನಿರೂಪಕಿಯಾಗಿಲ್ಲ. ಇದರ ಜೊತೆಗೆ ‘ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ ಎಂಬ ಪೇಕ್ ಕ್ರಿಯೇಟ್ ಮಾಡಿ, ಸಿನಿಮಾಗಳ ಪ್ರಮೋಷನ್, ತಾರೆಯರ ಸಂದರ್ಶನವನ್ನೆಲ್ಲಾ ಮಾಡುತ್ತಿರುತ್ತಾರೆ. ಇದೇ ರೀತಿ ಕಳೆದ ವರ್ಷ ಅಂದರೆ 2023ರ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಅವರನ್ನು ಕಾರ್ಯಕ್ರಮಕ್ಕೆ ಅನುಶ್ರೀ ಆಹ್ವಾನಿಸಿದ್ದರು. ಇದೇ ಸಂದರ್ಶನದಲ್ಲಿ ಕೆಲ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಅಂದಹಾಗೆ ಅನುಶ್ರೀ ಹಾಗೂ ಶುಭಾ ಪೂಂಜಾ ಬಾಲ್ಯದಿಂದಲೇ ಪರಿಚಿತರೂ. ಇಬ್ಬರೂ ಮೂಲತಃ ಮಂಗಳೂರಿನವರಾಗಿದ್ದರಿಂದ ಮೊದಲಿನಿಂದಲೇ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುತ್ತಿದ್ದರು. ಅದೇ ರೀತಿ ಒಂದು ದಿನ ಶುಭಾ ಮನೆಗೆ ಅನುಶ್ರೀ ಭೇಟಿ ಕೊಟ್ಟಾಗ ತೀರಾ ಹಸಿದಿದ್ದರಂತೆ. ತಿನ್ನಲು ಏನಿದೆ ಎಂದು ಶುಭಾ ಬಳಿ ಕೇಳಿದಾಗ ಚಿಕನ್ ಮಾಡಿದ್ದೇನೆ, ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಶುಭಾ ಬೇರೆ ಕೆಲಸ ಮಾಡಲು ತೆರಳಿದ್ದಾರೆ.

ಶುಭಾ ಹೇಳಿದ್ದೇ ತಡ, ಅನುಶ್ರೀ ಡೈನಿಂಗ್ ಮೇಲಿದ್ದ ಚಿಕನ್ ಸಾಂಬಾರ್ ಅನ್ನು ತೆಗೆದುಕೊಂಡು ಅನ್ನದ ಜೊತೆ ಸೇವಿಸಿದ್ದಾರೆ. ಇದಕ್ಕೇನು ಉಪ್ಪು ಇಲ್ಲ, ಖಾರನೂ ಇಲ್ಲ ಎನ್ನುತ್ತಾ ಮನಸ್ಸಲ್ಲೇ ಅಂದುಕೊಂಡು ಅನುಶ್ರೀ. ಸ್ವಲ್ಪ ಸಮಯದ ಬಳಿಕ ಶುಭಾ ಬಂದಾಗ, “ಏನಿದು ನಿಮ್ಮ ಮನೆಯ ಚಿಕನ್ ಸಾರಿನಲ್ಲಿ ಉಪ್ಪು-ಖಾರ ಸ್ವಲ್ಪನೂ ಇಲ್ಲ” ಎಂದು ಅನುಶ್ರೀ ಹೇಳಿದ್ದಾರೆ. ತಕ್ಷಣ ಡೈನಿಂಗ್ ಮೇಲಿರುವ ಪಾತ್ರೆಯ ಮುಚ್ಚಳ ತೆಗೆದು ನೋಡಿದ ಶುಭಾ, “ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್” ಎಂದು ಹೇಳಿದ್ದಾರೆ.

ಈ ವಿಷಯ ಹಂಚಿಕೊಂಡ ಅನುಶ್ರೀ, ಇದೊಂದು ನೋವಿನ ಘಟನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ನಾಯಿಗೆ ಹಾಕುವ ಆಹಾರವನ್ನು ಡೈನಿಂಗ್ ಮೇಲೆ ಯಾರಾದರೂ ಇಡ್ತಾರಾ? ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Rohit Sharma: ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ: ಏನಂದ್ರು ಕ್ಯಾಪ್ಟನ್?

ಅಂದಹಾಗೆ ಈ ಸಂದರ್ಶನದ ವಿಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News