Rohit Sharma: ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ: ಏನಂದ್ರು ಕ್ಯಾಪ್ಟನ್?

Rohit Sharma Retirement talk: ಧರ್ಮಶಾಲಾ ಟೆಸ್ಟ್ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, “ನಾನು ಎದ್ದಾಗ ಯಾವ ದಿನ ನನಗೆ ಚೆನ್ನಾಗಿಲ್ಲ ಎಂದು ತಿಳಿಯುತ್ತದೆಯೋ ಅಂದೇ ನಾನು ನಿವೃತ್ತಿ ನೀಡುತ್ತೇನೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Mar 9, 2024, 07:07 PM IST
    • ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಗೆಲುವು
    • ಸರಣಿ ಗೆದ್ದ ಬಳಿಕ ರೋಹಿತ್ ನಿವೃತ್ತಿ ಕುರಿತು ಹೇಳಿಕೆ
    • ಧರ್ಮಶಾಲಾ ಟೆಸ್ಟ್ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ
Rohit Sharma: ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ: ಏನಂದ್ರು ಕ್ಯಾಪ್ಟನ್? title=
Rohit Sharma

Rohit Sharma Retirement talk: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿದೆ. 'ಬೇಸ್‌ ಬಾಲ್' ಶೈಲಿಯೊಂದಿಗೆ ಭಾರತಕ್ಕೆ ಬಂದ ಬೆನ್ ಸ್ಟೋಕ್ಸ್ ತಂಡವನ್ನು 'ಜೈಸ್‌ ಬಾಲ್' (ಯಶಸ್ವಿ ಜೈಸ್ವಾಲ್) ಸೋಲಿಸಿದ್ದರು. ಯುವ ಆರಂಭಿಕ ಆಟಗಾರ ಯಶಸ್ವಿ ಇಂಗ್ಲೆಂಡ್‌’ನ ದಿಗ್ಗಜರು ಮತ್ತು ಯುವ ಬೌಲರ್‌’ಗಳನ್ನು ಸೋಲಿಸಿ ಸರಣಿಯಲ್ಲಿ 712 ರನ್ ಗಳಿಸಿದ್ದರು.

ಈ ಮೂಲಕ ಯಾವುದೇ ತಂಡದ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ 700+ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅನುಭವಿ ಸುನಿಲ್ ಗವಾಸ್ಕರ್ ಈ ಹಿಂದೆ ಎರಡು ಬಾರಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಆಟಗಾರರಿಗೆ ಬಿಸಿಸಿಐನಿಂದ ಸಿಹಿಸುದ್ದಿ: ಸಿಗಲಿದೆ ವಿಶೇಷ ವೇತನ

ಅಂದಹಾಗೆ ಈ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಸರಣಿ ಗೆದ್ದ ಬಳಿಕ ರೋಹಿತ್ ನಿವೃತ್ತಿ ಕುರಿತು ಹೇಳಿಕೆ ನೀಡಿದ್ದಾರೆ.

ಧರ್ಮಶಾಲಾ ಟೆಸ್ಟ್ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, “ನಾನು ಎದ್ದಾಗ ಯಾವ ದಿನ ನನಗೆ ಚೆನ್ನಾಗಿಲ್ಲ ಎಂದು ತಿಳಿಯುತ್ತದೆಯೋ ಅಂದೇ ನಾನು ನಿವೃತ್ತಿ ನೀಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  "ಅವಕಾಶ ಕೇಳ್ಕೊಂಡು ಹೋದಾಗ ಬಟ್ಟೆ ಬಿಚ್ಚು… ಮಚ್ಚೆ ಇದ್ಯಾ? ತೋರಿಸು ಅಂತಿದ್ರು"- ಖ್ಯಾತ ನಟಿಯ ಸೆನ್ಸೇಶನಲ್ ಹೇಳಿಕೆ

ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿದ ಬಳಿಕ ಮಾತನಾಡದ ಅವರು, “ನೀವು ಈ ರೀತಿಯ ಟೆಸ್ಟ್ ಗೆದ್ದಾಗ, ಎಲ್ಲವೂ ಸರಿಯಾಗಿ ನಡೆಯಬೇಕು. ಈ ಹುಡುಗರಿಗೆ ಬಹುಶಃ ಅನುಭವದ ಕೊರತೆಯಿದೆ. ಆದರೆ ಅವರು ಒತ್ತಡದಲ್ಲಿ ಚೆನ್ನಾಗಿ ಆಡಿದ್ದಾರೆ. ಇದರ ಶ್ರೇಯವು ಇಡೀ ತಂಡಕ್ಕೆ ಸಲ್ಲುತ್ತದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News