ವಿಜಿ-ಸ್ಯಾಮ್‌ಗೆ ಮತ್ತೆ ಸೋಲು...ಮೂರೇ ದಿನಕ್ಕೆ ಥಿಯೇಟರ್‌ಗಳಿಂದ 'ಖುಷಿ' ಮಾಯ!!

Kushi Movie : ವಿಜಯ್‌ ದೇವರಕೊಂಡ ಹಾಗೂ ಸಮಂತಾ ನಟಿಸಿರುವ 'ಖುಷಿ' ಸಿನಿಮಾ ಕಳೆದ ವಾರ ರಿಲೀಸ್ ಆಗಿ ಬಹಳ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿತ್ತು. ಇವರಿಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಆದರೆ ಇದೀಗ ಈ ಸಿನಿಮಾ ಸೋಲಿನ ಸುಳಿಗೆ ಸಿಲುಕಿದೆ ಎನ್ನಲಾಗುತ್ತಿದೆ.   

Written by - Savita M B | Last Updated : Sep 10, 2023, 08:59 AM IST
  • ಶಿವ ನಿರ್ವಾಣ ನಿರ್ದೇಶನದಡಿಯಲ್ಲಿ ಮೂಡಿಬಂದ ಖುಷಿ ಸಿನಿಮಾ
  • ಖುಷಿ ಸಿನಿಮಾ ನಿರೀಕ್ಷೆಯಂತೆ ಮುನ್ನುಗ್ಗದೇ ದಿನದಿಂದ ದಿನಕ್ಕೆ ಪ್ರೇಕ್ಷಕರ ಅಭಾವವನ್ನು ಕಾಣುತ್ತಿದೆ.
  • ಇನ್ನು ಕರ್ನಾಟಕದಲ್ಲಿ ಖುಷಿ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಎದುರಾಗಿ ರಿಲೀಸ್‌ ಆಗಿತ್ತು.
ವಿಜಿ-ಸ್ಯಾಮ್‌ಗೆ ಮತ್ತೆ ಸೋಲು...ಮೂರೇ ದಿನಕ್ಕೆ ಥಿಯೇಟರ್‌ಗಳಿಂದ 'ಖುಷಿ' ಮಾಯ!! title=

Kushi : ಶಿವ ನಿರ್ವಾಣ ನಿರ್ದೇಶನದಡಿಯಲ್ಲಿ ಮೂಡಿಬಂದ ಖುಷಿ ಸಿನಿಮಾ ಬಿಡುಗಡೆಯಾಗಿ ಫಸ್ಟ್‌ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಅಲ್ಲದೇ ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಆದರೆ ಈ ಸಿನಿಮಾದ ಕಲೆಕ್ಷನ್‌ ಸೋಮವಾರದಿಂದಲೇ ಕಡಿಮೆ ಆಗಿತ್ತು. ಈ ರೊಮ್ಯಾಂಟಿಕ್‌ ಎಂಟರ್‌ಟೈನರ್ ಸಿನಿಮಾ ಸದ್ಯ ಮಿಶ್ರಪ್ರತಿಕ್ರಿಯೆ ಪಡೆಯುತ್ತಿದೆ ಎನ್ನಲಾಗುತ್ತಿದೆ. 

ಖುಷಿ ಸಿನಿಮಾದಲ್ಲಿ ಸಮಂತಾ ಹಾಗೂ ವಿಜಿ ಹಾಗೂ ಸ್ಯಾಮ್‌ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಅದರ ಪ್ರತಿಫಲ ಮಾತ್ರ ಎಲ್ಲರಲ್ಲೂ ಬೇಸರ ಉಂಟು ಮಾಡಿದೆ. ಹೌದು ರೌಡಿಬಾಯ್‌ ಲೈಗರ್‌ ಸಿನಿಮಾ ಹಾಗೂ ಸ್ಯಾಮ್‌ ಶಾಕುಂತಲಂ ಹಾಗೂ ಯಶೋದ ಸಿನಿಮಾಗಳು ಭಾಕ್ಸಾಫೀಸ್‌ನಲ್ಲಿ ನೆಲಚ್ಚಿದ್ದವು. ಹೀಗಾಗಿ ಇವರಿಬ್ಬರು ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದ್ದರು. 

ಇದನ್ನೂ ಓದಿ-ತೆಲುಗು ಗೊಂಬೆ ಅಂದಕ್ಕೆ ಕನ್ನಡಿಗರೂ ಫಿದಾ..! ಡಿಂಪಲ್‌ ಹಯಾತಿ ಹಾಟ್‌ ಫೋಟೋಸ್‌ ಇಲ್ಲಿವೆ..

ಇದೇ ಕಾರಣಕ್ಕಾಗಿ ಸ್ಯಾಮ್‌ ಮತ್ತು ವಿಜಿ ಇಬ್ಬರೂ 'ಖುಷಿ' ಸಿನಿಮಾ ನಂಬಿಕೊಂಡಿದ್ದರು. ಸದ್ಯ 75 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ ಈ ಸಿನಿಮಾ ಇನ್ನು 14 ಕೋಟಿ. ಕಲೆಕ್ಷನ್‌ ಮಾಡಬೇಕಿದೆ. ಆದರೆ ಖುಷಿ ಸಿನಿಮಾ ನಿರೀಕ್ಷೆಯಂತೆ ಮುನ್ನುಗ್ಗದೇ ದಿನದಿಂದ ದಿನಕ್ಕೆ ಪ್ರೇಕ್ಷಕರ ಅಭಾವವನ್ನು ಕಾಣುತ್ತಿದೆ. 

ಶಾಸ್ತ್ರ ಸಿದ್ಧಾಂತಗಳಿಗಿಂತ ಜೀವನ ದೊಡ್ಡದು ಎನ್ನುವ ಸಂದೇಶವನ್ನು ನೀಡಿದ್ದ ಖೂಷಿ ಸಿನಿಮಾ ಎಲ್ಲರ ಮನಗೆಲ್ಲುವಲ್ಲಿ ವಿಫಲವಾಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ, ಕೇರಳದಲ್ಲಿ ಖುಷಿ ಸಿನಿಮಾ ಎತ್ತಂಗಡಿಯಾಗುತ್ತಿದೆ. ಆದರೆ ತಮಿಳುನಾಡು ಹಾಗೂ ಓವರ್‌ಸೀಸ್ ನಲ್ಲಿ ಗಳಿಕೆ ಚೆನ್ನಾಗಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ನಿರ್ಮಾಪಕರು 10 ಕೋಟಿ ನಷ್ಟದ ಭಯದಲ್ಲಿದ್ದಾರೆ. 

ಇನ್ನು ಕರ್ನಾಟಕದಲ್ಲಿ ಖುಷಿ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಎದುರಾಗಿ ರಿಲೀಸ್‌ ಆಗಿತ್ತು. ಆದರೆ ಸೋಮವಾರ ಶುರುವಾಗುತ್ತಿದ್ದಂತೆ ಪ್ರೇಕ್ಷಕರ ಬರ ಆರಂಭವಾಗಿದೆ. 

ಇದನ್ನೂ ಓದಿ-ಸಡನ್ನಾಗಿ ಸೀರೆಯುಟ್ಟು ಶಾಕ್‌ ಕೊಟ್ಟ ನೋರಾ..! ಸಖತ್ತಾಗಿದ್ದಾಳೆ ಬಿಟೌಟ್‌ ಬೆಡಗಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News