ಇನ್ಯಾವತ್ತೂ ಪ್ರಭಾಸ್‌ ಜೊತೆ ಅನುಷ್ಕಾ ಸಿನಿಮಾ ಮಾಡಲ್ವಂತೆ..! ಕಾರಣವೇನು..?

Prabhas Anushka shetty marriage : ಪ್ರಭಾಸ್‌ ಮತ್ತು ಅನುಷ್ಕಾ ಒಟ್ಟಿಗೆ ಸಿನಿಮಾ ಮಾಡಲು ಆರಂಭಿಸಿದಾಗಿನಿಂದಲೂ ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಮತ್ತೊಂದು ಕುತೂಹಲಕಾರಿ ವಿಚಾರ ಮುನ್ನೆಲೆಗೆ ಬಂದಿದೆ. ದುಬೈ ಫಿಲ್ಮ್ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು, ಅನುಷ್ಕಾ ಭವಿಷ್ಯದಲ್ಲಿ ಪ್ರಭಾಸ್ ಜೊತೆ ಯಾವುದೇ ಸಿನಿಮಾ ಮಾಡದಿರಲು ನಿರ್ಧರಿಸಿರುವುದಾಗಿ ಆರೋಪಿಸಿದ್ದಾರೆ..

Written by - Krishna N K | Last Updated : Mar 23, 2023, 06:06 PM IST
  • ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ.
  • ಇದೀಗ ಇನ್ನು ಮುಂದೆ ಪ್ರಭಾಸ್‌ ಜೊತೆ ಅನುಷ್ಕಾ ಸಿನಿಮಾ ಮಾಡಲ್ಲ ಎಂಬ ವಿಚಾರ ಕೇಳಿ ಬರುತ್ತಿದೆ.
  • ದುಬೈ ಫಿಲ್ಮ್ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು ಈ ವಿಚಾರವನ್ನು ಹೇಳಿದ್ದಾರೆ.
ಇನ್ಯಾವತ್ತೂ ಪ್ರಭಾಸ್‌ ಜೊತೆ ಅನುಷ್ಕಾ ಸಿನಿಮಾ ಮಾಡಲ್ವಂತೆ..! ಕಾರಣವೇನು..? title=

Prabhas Anushka shetty : ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ವಿಚಾರ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಇಬ್ಬರು ಬೆಸ್ಟ್‌ ಫ್ರೆಂಡ್ಸ್‌ ಅಂತ ಹೇಳಿದ್ರೂ ಸಹ ನೆಟ್ಟಿಗರು ಅವರಿಬ್ಬರನ್ನು ಮದುವೆ ಮಾಡದೆ ಬಿಡುವ ಹಾಗೆ ಕಾಣುತ್ತಿಲ್ಲ. ಇದೀಗ ಪ್ರಭಾಸ್‌ ಮತ್ತು ಅನುಷ್ಕಾ ವಿಚಾರವಾಗಿ ಹೊಸ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು.. ಬಹುಕಾಲದಿಂದಲೂ ಪ್ರಭಾಸ್‌ ಮತ್ತು ಅನುಷ್ಕಾ ಒಟ್ಟಿಗೆ ಸಿನಿಮಾ ಮಾಡಲು ಆರಂಭಿಸಿದಾಗಿನಿಂದಲೂ ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಿಜವಾಗಲೂ ಅಂಥದ್ದೇನಾದರೂ ಇದ್ದರೆ ಇಷ್ಟು ದಿನ ಅವರು ಏಕೆ ಸುಮ್ಮನಿರುತ್ತಿದ್ದರು ಅಲ್ವಾ.,! ಅಲ್ಲದೆ, ಇತ್ತೀಚೆಗಷ್ಟೇ ಪ್ರಭಾಸ್ ಕೃತಿ ಸನನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಡೆಟಿಂಗ್‌ ಮಾಡುತ್ತಿದಾರೆ, ಆದಷ್ಟು ಬೇಗ ಮದುವೆಯಾಗ್ತಾರೆ ಅಂತ ಹೇಳಲಾಗಿತ್ತು. ಅದಕ್ಕೆ ಕೃತಿ ಕ್ಲಾರೀಟಿ ಸಹ ಕೊಟ್ಟಿದ್ದರು.

ಇದನ್ನೂ ಓದಿ: ಉರಿಗೌಡ, ನಂಜೇಗೌಡ ವಿವಾದ.. ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ?

ಇದೀಗ ಮತ್ತೊಂದು ಕುತೂಹಲಕಾರಿ ವಿಚಾರ ಮುನ್ನೆಲೆಗೆ ಬಂದಿದೆ. ದುಬೈ ಫಿಲ್ಮ್ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು, ಅನುಷ್ಕಾ ಭವಿಷ್ಯದಲ್ಲಿ ಪ್ರಭಾಸ್ ಜೊತೆ ಯಾವುದೇ ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ‌ ಎಂಬುವುದಾಗಿ ಟ್ವೀಟ್‌ ಮಾಡಿದ್ದಾರೆ. ಸದ್ಯ ಅನುಷ್ಕಾ ನಟಿಸುತ್ತಿರುವ ಚಿತ್ರತಂಡದ ಸದಸ್ಯರ ಪ್ರಕಾರ, ಒಂದು ವಿಚಾರದಲ್ಲಿ ಪ್ರಭಾಸ್ ಅನುಷ್ಕಾಗೆ ತೀವ್ರ ನೋವುಂಟು ಮಾಡಿದ ಹಿನ್ನಲೆಯಲ್ಲಿ ಅನುಷ್ಕಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಮರ್‌ ಆರೋಪಿಸಿದ್ದಾರೆ.

ಇತ್ತೀಚಿಗೆ ಉಮೈರ್ ಸಂಧು ಬಾಲಿವುಡ್ ಮಾತ್ರವಲ್ಲದೆ ಸೌತ್‌ನಲ್ಲಿ ಕ್ರೇಜಿ ಹೊಂದಿರುವ ಹಲವು ಹೀರೋಗಳ ಬಗ್ಗೆ ಹಲವು ಸೆನ್ಸೇಷನಲ್ ಆರೋಪಗಳನ್ನು ಮಾಡುತ್ತಿದ್ದಾರೆ. ಉಮೈರ್ ಸಂಧು ಮಹೇಶ್ ಬಾಬು, ಪವನ್ ಕಲ್ಯಾಣ್ ಬಗ್ಗೆ ಕಾಮೆಂಟ್‌ ಮಾಡಿದ್ದರು. ಇದೀಗ ಪ್ರಭಾಸ್ ಮತ್ತು ಅನುಷ್ಕಾ ಸಂಬಂಧದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ, ಅನುಷ್ಕಾ ಅವರ ಮುಂಬರುವ ಚಿತ್ರ ʼಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿʼ ಪ್ರಭಾಸ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಯುವಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲೇ ತಯಾರಾಗುತ್ತಿದೆ. ಹಾಗಿದ್ರೆ ಉಮರ್‌ ಹೇಳುವ ಮಾತು ಎಷ್ಟು ಸತ್ಯ ಅಲ್ವಾ.. ಜಸ್ಟ್‌ ನಂಬಬೇಡಿ ಅಷ್ಟೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News